ನವದೆಹಲಿ: ಮುಂದಿನ 2 ರಿಂದ 3 ದಿನಗಳಲ್ಲಿ ನೈಋತ್ಯ ಮುಂಗಾರು ಮಾರುತಗಳು ಕೇರಳಕ್ಕೆ ಆಗಮಿಸುವ ನಿರೀಕ್ಷೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶುಕ್ರವಾರ ಹೊಸ ಮುನ್ಸೂಚನೆ ನೀಡಿದೆ.
ನೈಋತ್ಯ ಮತ್ತು ಆಗ್ನೇಯ ಅರಬ್ಬೀ ಸಮುದ್ರ, ಲಕ್ಷದ್ವೀಪ ಹಾಗೂ ಕೇರಳ ಮತ್ತು ತಮಿಳುನಾಡಿನ ಕೆಲವು ಭಾಗಗಳಲ್ಲಿ ಮುಂಗಾರು ಮುಂದುವರಿಯಲು ಪರಿಸ್ಥಿತಿ ಪೂರಕವಾಗಿದೆ ಎಂದು ಇಲಾಖೆ ತಿಳಿಸಿದೆ.
ಸಾಮಾನ್ಯವಾಗಿ ಮುಂಗಾರು ಮಾರುತಗಳು ಜೂನ್ 1 ರಂದು ಕೇರಳವನ್ನು ಪ್ರವೇಶಿಸುತ್ತವೆ. ಆದರೆ, ಈ ವರ್ಷ ಮೇ 26ಕ್ಕೇ ಮುಂಗಾರು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಈ ಮೊದಲು ಅಂದಾಜಿಸಿತ್ತು. ಇದೀಗ ತನ್ನ ಹಳೆಯ ಮುನ್ಸೂಚನೆಯನ್ನು ಬದಲಾಯಿಸಿರುವ ಇಲಾಖೆಯು, ಇನ್ನು 2-3 ದಿನ ತಡವಾಗಿ ಮುಂಗಾರು ಆರಂಭವಾಗಬಹುದು ಎಂದು ಹೊಸದಾಗಿ ಅಂದಾಜಿಸಿದೆ.








