ರಾಮನಗರ : ಚನ್ನಪಟ್ಟಣ ಉಪ ಚುನಾವಣೆಗೆ ಸ್ಟೀಲ್ ಕಂಪನಿಯ ಹಣ ಬರುತ್ತಿದೆಯಾ ಎನ್ನುವುದರ ಕುರಿತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ವಿರುದ್ಧ ಕೃಷಿ ಸಚಿವ ಚೆಲುವರಾಯಸ್ವಾಮಿ ಗಂಭೀರವಾದಂತಹ ಆರೋಪ ಮಾಡಿದ್ದಾರೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆಗಾಗಿ ಸ್ಟೀಲ್ ಕಂಪನಿಯ ಜೊತೆಗೆ ಯಾವ ಸಂಬಂಧ ಬೆಳೆಸುತ್ತಿದ್ದಾರೆ ಎಂದು ಎಲ್ಲವೂ ನಮಗೂ ಗೊತ್ತಿದೆ. ಉಪಚುನಾವಣೆಗಾಗಿ ಫಂಡ್ ಹೇಗೆ ಕಲೆಕ್ಟ್ ಮಾಡುತ್ತಾರೆ ಅನ್ನೋದು ಗೊತ್ತು.
ಒಬ್ಬರ ಬಗ್ಗೆ ಕುಮಾರಸ್ವಾಮಿ ಲಘುವಾಗಿ ಮಾತನಾಡುವುದನ್ನು ಬಿಡಬೇಕು. ಎಚ್ ಡಿ ಕುಮಾರಸ್ವಾಮಿ ಬಗ್ಗೆಯೂ ಎಲ್ಲವೂ ಗೊತ್ತಿದೆ.ಆ ಬಗ್ಗೆ ನಾವು ಮಾತನಾಡಬೇಕಾಗುತ್ತದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ವಿರುದ್ಧ ಚೆಲುವರಾಯಸ್ವಾಮಿ ಆಕ್ರೋಶ ಅವರ ಹಾಕಿದರು.