ಕಾರಟಗಿ : ಕೇಂದ್ರದಲ್ಲಿ ಪ್ರಧಾನಿ ಮೋದಿ ಅವರಿಗೆ ಮತ್ತೊಂದು ಬಾರಿ ಅವಕಾಶ ಕೊಟ್ಟರೆ ಪ್ರತಿ ಊರಿನಲ್ಲೂ ಅವರ ದೇವಸ್ಥಾನ ಕಟ್ಟಿ ಅನ್ನುವ ಸ್ಥಿತಿ ಬರಲಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಪ್ರಧಾನಿ ಮೋದಿ ಅವರು ಮತ್ತೊಂದು ಬಾರಿ ಕೇಂದ್ರದಲ್ಲಿ ಅವಕಾಶ ಕೊಟ್ಟರೆ ದೇಶದ ಪ್ರತಿ ಊರಿನಲ್ಲೂ ದೇಗುಲ ಕಟ್ಟಿ ಎನ್ನುವ ಪರಿಸ್ಥಿತಿ ಬರಬಹುದು, ರಾಮನ ದೇವಸ್ಥಾನ ಆಗಿದೆ. ಇನ್ನು ತಮ್ಮದೇ ದೇವಸ್ಥಾನ ಕಟ್ಟಿಕೊಳ್ಳುತ್ತಾರೆ ಎಂದರು.