ಕೊಪ್ಪಳ: ಬಿಜೆಪಿಯೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಈ ಬೆನ್ನಲ್ಲೇ ಕೆಆರ್ ಪಿಪಿ ಪಕ್ಷ ಕೂಡ ಮೈತ್ರಿಯೊಂದಿಗೆ ಕಣಕ್ಕೆ ಇಳಿಯೋ ಸೂಚನೆ ನೀಡಿದೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಅಂತ ಕೆ ಆರ್ ಪಿಪಿ ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಶಾಸಕ ಜನಾರ್ಧನ ರೆಡ್ಡಿ ತಿಳಿಸಿದ್ದಾರೆ.
ಕೊಪ್ಪಳದ ಗಂಗಾವತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು ಮೋದಿ ಮತ್ತೆ ಪ್ರಧಾನಿಯಾಗೋದಾದ್ರೇ ಹೊಂದಾಣಿಕೆ ಮಾಡಿಕೊಂಡು ಹೋಗೋದಕ್ಕೆ ನಾವು ಸಿದ್ಧರಿದ್ದೇವೆ ಎಂಬುದಾಗಿ ಹೇಳಿದ್ದಾರೆ.
ನಮ್ಮ ನಿಲುವು ಇಷ್ಟೇ ಮೋದಿ ಮತ್ತೆ ಪ್ರಧಾನಿಯಾಗಬೇಕು. ಮೋದಿ ಪ್ರಧಾನಿಯಾಗೋದಕ್ಕೆ ಕೆ ಆರ್ ಪಿಪಿ ಹೊಂದಾಣಿಕೆ ರಾಜಕಾಣ ಮಾಡೋದಕ್ಕೆ ಸಿದ್ಧವಿದೆ ಎಂಬುದಾಗಿ ತಿಳಿಸಿದ್ದಾರೆ.
ನಮ್ಮ ಪಕ್ಷದಿಂದ ಗೆದ್ದ ಮೇಲೆ ಬಿಜೆಪಿಗೆ ಹೋಗೋ ಬಗ್ಗೆ ಸದ್ಯಕ್ಕೆ ಯಾವ ನಿರ್ಧರ ಕೈಗೊಂಡಿಲ್ಲ. ಬಿಜೆಪಿ ನಯಾಕರು ನನ್ನ ಜೊತೆ ಚರ್ಚೆ ಮಾಡುತ್ತಿದ್ದಾರೆ. ಕೆ ಆರ್ ಪಿ ಪಿ ಪಕ್ಷದಿಂದ ಲೋಕಸಭಾ ಚುನಾವಣೆಗೆ 4 ರಿಂದ 5 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕೋ ಚಿಂತನೆ ನಡೆಸಲಾಗಿದೆ ಎಂಬುದಾಗಿ ಹೇಳಿದ್ದಾರೆ.
‘ಗ್ಯಾರಂಟಿ ಯೋಜನೆ’ ಫಲಾನುಭವಿಗಳಿಗೆ ಗುಡ್ ನ್ಯೂಸ್: ‘ಫೆಬ್ರವರಿ’ಯಲ್ಲಿ ಎಲ್ಲಾ ತಾಲೂಕುಗಳಲ್ಲಿ ‘ಸಮಾವೇಶ’