ರಾಮನಗರ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಸಿದ ಕೇಂದ್ರ ಸಚಿವ ಅಮಿತ್ ಶಾ ಇಂದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನಲ್ಲಿ ಬೃಹತ್ ರೋಡ್ ಶೋ ನಡೆಸಿದರು.
ಈ ವೇಳೆ ಬೆಂಗಳೂರು ಗ್ರಾಮಾಂತರ ಅಭ್ಯರ್ಥಿಯಾಗಿರುವ ಡಾ. ಸಿಎನ್ ಮಂಜುನಾಥ್ ಅವರು ಮೋದಿಯವರು 400 ಸಂಸದರನ್ನು ಕಳಿಸಿಕೊಡಿ ಎಂದಿದ್ದಾರೆ.ಅದರಲ್ಲಿ ನಾನು ಒಬ್ಬನಾಗುತ್ತೇನೆ ಚನ್ನಪಟ್ಟಣದಿಂದ ಅಮಿತ್ ಶಾ ಪ್ರಚಾರಕ್ಕೆ ಚಾಲನೆ ನೀಡಿದ ಸಂತಸ ತಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬದಲಾವಣೆ ಗಾಳಿ ಚನ್ನಪಟ್ಟಣ ದಿಂದಲೇ ಶುರುವಾಗಿದೆ. ಜನಸಾಗರ ನೋಡಿದರೆ ಗೆಲುವು ನನ್ನದೇ. ಜನ ಬದಲಾವಣೆ ಬಯಸಿದ್ದಾರೆ 400ಕ್ಕೂ ಹೆಚ್ಚು ಸಂಸದರನ್ನು ಕಳುಹಿಸಿಕೊಡಿ ಅಂತ ಪ್ರಧಾನಿ ಮೋದಿ ಅವರು ಹೇಳಿದ್ದಾರೆ 400 ಸಂಸದರಲ್ಲಿ ನಾನು ಒಬ್ಬನಾಗಿರುತ್ತೇನೆ ಎಂದು ಸಿ ಎಸ್ ಮಂಜುನಾಥ್ ತಿಳಿಸಿದರು.
ಇದೇ ವೇಳೆ ಬಿಜೆಪಿ ಎಂಎಲ್ಸಿ ಸಿಪಿ ಯೋಗೇಶ್ವರ್ ಅವರು ಮಾತನಾಡಿ, ಅಮಿತ್ ಶಾ ಆಗಮನ ಹಿನ್ನೆಲೆಯಲ್ಲಿ ನಮಗೆ ಆನೆ ಬಲ ಬಂದಂತಾಗಿದೆ ಎಂದು ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಬಿಜೆಪಿ ಎಂಎಲ್ಸಿ ಸಿಪಿ ಯೋಗೇಶ್ವರ್ ಹೇಳಿಕೆ ನೀಡಿದರು.