ಬೆಂಗಳೂರು: ಮೋದಿ ಸರ್ಕಾರಕ್ಕೆ ಕರ್ನಾಟಕವೆಂದರೇ ಗೌರವವಿಲ್ಲ. ಒಂಥರ ಅಸಡ್ಡೆ. ಈ ಬಗ್ಗೆ ಬಿಜೆಪಿಯವರಿಗೆ ಮಾತನಾಡುವ ಶಕ್ತಿಯೂ ಇಲ್ಲ ಎಂಬುದಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ.
ನಗರದಲ್ಲಿ ಇಂದು ಕರ್ನಾಟಕದ ಟ್ಯಾಬ್ಲೋ ಗಣರಾಜ್ಯೋತ್ಸವ ಪರೇಡ್ ನಲ್ಲಿ ನಿರಾಕರಣೆ ವಿಚಾರವಾಗಿ ಮಾತನಾಡಿದಂತ ಅವರು, ರಾಜ್ಯದ ಸಮಸ್ಯೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಮುಂದೆ ಮಾತನಾಡುವ ಶಕ್ತಿ, ಧೈರ್ಯವಿಲ್ಲ ಬಿಜೆಪಿ ನಾಯಕರಿಗೆ ಇಲ್ಲ. ರಾಜ್ಯದಲ್ಲಿ 25 ಸಂಸದರಿದ್ದಾರೆ. ಅವರನ್ನು ಕರೆದು ಒಂದು ದಿನ ಕೂಡ ಚರ್ಚೆ ಮಾಡಿಲ್ಲ ಎಂದರು.
ರಾಜ್ಯದ ಸಮಸ್ಯೆ ಬಗ್ಗೆ ನಿಯೋಗ ಕರೆದೊಯ್ಯುವ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಬೇಕಾಗಿತ್ತು. ಆದ್ರೇ ಹಾಗೆ ಮಾಡಿಲ್ಲ. ಮಹದಾಯಿ ಬಗ್ಗೆಯೂ ನಿಯೋಗ ಕರೆದೊಯ್ಯುವ ಮಾತಾಡಬಹುದಲ್ವಾ ಎಂದು ಪ್ರಶ್ನಿಸಿದರು.
ಮೀಸಲಾತಿ ಹೆಚ್ಚಳದ ಬಗ್ಗೆ ಸರಿಯಾದ ಮಾಹಿತಿಯನ್ನು ಈ ಸರ್ಕಾರ ನೀಡಿಲ್ಲ. ದಲಿತರಿಗೆ ಯಾವ ರೀತಿ ಮೋಸ ಮಾಡುತ್ತಿದ್ದಾರೆ ಎಂಬುದು ಅದರಿಂದ ಗೊತ್ತಾಗುತ್ತಿದೆ. ಈ ಡಬಲ್ ಇಂಜಿನ್ ಸರ್ಕಾರ ಕಿತ್ತೊಗೆಯಬೇಕು ಎಂಬುದಾಗಿ ಕರೆ ನೀಡಿದರು.
ಮುಕ್ತ ವಿವಿ ವ್ಯಾಸಂಗದ ನಿರೀಕ್ಷೆಯಲ್ಲಿದ್ದ ಮಹಳೆಯರಿಗೆ ಗುಡ್ ನ್ಯೂಸ್: KSOUನಿಂದ ಶೇ.15ರಷ್ಟು ಶುಲ್ಕ ವಿನಾಯಿತಿ
ʻWhatsAppʼನಿಂದ ಶೀಘ್ರದಲ್ಲೇ ಹೊಸ ವೈಶಿಷ್ಟ್ಯ: QR ಕೋಡ್ ಮೂಲಕ ʻಡೇಟಾʼ ವರ್ಗಾಯಿಸಲು ಅವಕಾಶ