ನವದೆಹಲಿ: ಮೋದಿ ಸಂಪುಟದಲ್ಲಿ ಇಬ್ಬರು ಸಂಪುಟ ದರ್ಜೆ, ಐವರು ರಾಜ್ಯ ಸಚಿವರು ಸೇರಿದಂತೆ ಏಳು ಮಹಿಳೆಯರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ನೂತನ ಸಚಿವ ಸಂಪುಟದಲ್ಲಿ ಬಿಜೆಪಿಯಿಂದ ನಿರ್ಮಲಾ ಸೀತಾರಾಮನ್, ಅನ್ನಪೂರ್ಣ ದೇವಿ, ಶೋಭಾ ಕರಂದ್ಾಜೆ, ರಕ್ಷಾ ಖಾಡ್ಸೆ, ಸಾವಿತ್ರಿ ಠಾಕೂರ್, ನಿಮುಬೆನ್ ಬಂಬಾನಿಯಾ ಮತ್ತು ಅಪ್ನಾ ದಳ ಸಂಸದೆ ಅನುಪ್ರಿಯಾ ಪಟೇಲ್ ಸ್ಥಾನ ಪಡೆದಿದ್ದಾರೆ.
ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ, ರಾಜ್ಯ ಸಚಿವೆ ಭಾರತಿ ಪವಾರ್, ಸಾಧ್ವಿ ನಿರಂಜನ್ ಜ್ಯೋತಿ, ದರ್ಶನಾ ಜರ್ದೋಶ್, ಮೀನಾಕ್ಷಿ ಲೇಖಿ ಮತ್ತು ಪ್ರತಿಮಾ ಭೌಮಿಕ್ ಅವರನ್ನು ಮಂಡಳಿಯಿಂದ ಕೈಬಿಡಲಾಗಿದೆ. ಮಾಜಿ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಬಿಜೆಪಿ ಸಂಸದರಾದ ಅನ್ನಪೂರ್ಣ ದೇವಿ, ಶೋಭಾ ಕರಂದ್ಲಾಜೆ, ರಕ್ಷಾ ಖಾಡ್ಸೆ, ಸಾವಿತ್ರಿ ಠಾಕೂರ್ ಮತ್ತು ನಿಮುಬೆನ್ ಬಂಭಾನಿಯಾ ಮತ್ತು ಅಪ್ನಾ ದಳದ ಸಂಸದೆ ಅನುಪ್ರಿಯಾ ಪಟೇಲ್ ಹೊಸ ಮಹಿಳಾ ಸಚಿವರಾಗಿದ್ದಾರೆ.