ಮುಂಬೈ: ಮನನೊಂದ 30 ವರ್ಷದ ಮಾಡೆಲ್ ಮುಂಬೈನ ಅಂಧೇರಿ ಪ್ರದೇಶದಲ್ಲಿ ಗುರುವಾರ ಹೋಟೆಲ್ ಕೊಠಡಿಯಲ್ಲಿ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಪೊಲೀಸರ ಪ್ರಕಾರ, ಮಾಡೆಲ್ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಹೊಟೇಲ್ನಲ್ಲಿ ತಂಗಿದ್ದು, ರಾತ್ರಿಯ ಊಟಕ್ಕೂ ಆರ್ಡರ್ ಮಾಡಿದ್ದಾರೆ. ಗುರುವಾರ
ಹೊಟೇಲ್ ಸಿಬ್ಬಂದಿ ಬೆಲ್ ಮಾಡಿದರೂ ಆಕೆ ಬಾಗಿಲು ತೆರೆದಿಲ್ಲ. ಈ ವೇಳೆ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
Maharashtra | A 30-year-old model died by suicide, her body was found hanging from a fan in a hotel room in Andheri area of Mumbai, Versova police registered a case under ADR and started further investigation. Police also recovered a suicide on the spot: Mumbai Police
— ANI (@ANI) September 29, 2022
ಘಟನಾ ಸ್ಥಳಕ್ಕೆ ಬಂದ ಪೊಲೀಸರು ಮಾಸ್ಟರ್ ಕೀ ಬಳಸಿ ಕೊಠಡಿಯ ಬಾಗಿಲು ತೆರೆದಿದ್ದು, ಈ ವೇಳೆ ಗ ಮಾಡೆಲ್ ಶವ ಫ್ಯಾನ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸರು ಆತ್ಮಹತ್ಯೆ ಪತ್ರವನ್ನೂ ವಶಪಡಿಸಿಕೊಂಡಿದ್ದಾರೆ.
ಆತ್ಮಹತ್ಯಾ ಪತ್ರದಲ್ಲಿ ಮಾಡೆಲ್, “ನನ್ನನ್ನು ಕ್ಷಮಿಸಿ, ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನು ಸಂತೋಷವಾಗಿಲ್ಲ, ನನಗೆ ಶಾಂತಿ ಬೇಕು” ಎಂದು ಬರೆದಿದ್ದಾರೆ.
ವರ್ಸೋವಾ ಪೊಲೀಸರು ಎಡಿಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ನಡೆಯುತ್ತಿದ್ದಾರೆ.
BIGG NEWS : ‘ಭಾರತ್ ಜೋಡೋ ಯಾತ್ರೆ’ ಎಂಟ್ರಿ ಹೊತ್ತಲ್ಲೇ ಗುಂಡ್ಲುಪೇಟೆಯಲ್ಲಿ ‘ಲೋಕಾಯುಕ್ತ ರೈಡ್’
BIG NEWS: ನಾಳೆ ಭಾರತದಲ್ಲಿ ʻ5G ಸೇವೆʼಗೆ ಪ್ರಧಾನಿ ಮೋದಿ ಚಾಲನೆ | 5G services