ಬೆಂಗಳೂರು: ತಮ್ಮ ಮೊಬೈಲ್ ಪಾಸ್ವರ್ಡ್ ಚೇಂಜ್ ಮಾಡಿದಕ್ಕೆ ಅಕ್ಕ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಗಾಣಿಗರಪೇಟೆಯಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ರುಚಿತಾ(19) ಅಂಥ ತಿಳಿದು ಬಂದಿದೆ, ರುಚಿತ ಮೊಬೈಲ್ ಫೋನ್ಗೆ ಅಡಿಕ್ಟ್ ಆಗಿದ್ದಳು, ಅಕ್ಕನಿಗೆ ಬುದ್ದಿ ಕಲಿಸಲು ಆಕೆತ ತಮ್ಮ ಮೊಬೈಲ್ ಪಾಸ್ವರ್ಡ್ ಬದಲಾವಣೆ ಮಾಡಿದ್ದ ಎನ್ನಲಾಗಿದೆ. ಈ ವೇಳೇ ರಂಜಿತ ತಮ್ಮನನ್ನು ಪಾಸ್ವರ್ಡ್ ಹೇಳುವಂತೆ ಕೇಳಿದ್ದರು ಕೂಡ ಆತ ಹೇಳಲಿಲ್ಲ ಎನ್ನಲಾಗಿದೆ. ಇದರಿಂದ ಮನನೊಂದ ರುಚಿತ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆತ್ಮಹತ್ಯೆ ಮಾಡಿಕೊಂಡಿದ್ದ ರುಚಿತಳಾನ್ನು ಉಳಿಸುವ ಸಲುವಾಗಿ ಹತ್ತಿರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆದರೆ ಆ ಹೊತ್ತಿಗೆ ರುಚಿತ ಪ್ರಾಣವನ್ನುಕಳೆದುಕೊಂಡಿದ್ದು, ಕಾನೂನು ಪ್ರಕಾರ ಮುಂದಿನ ಕ್ರಮಕ್ಕಾಗಿ ಆಸ್ಪತ್ರೆಯವರು ಜಿಲ್ಲಾಸ್ಪತ್ರೆಗೆ ರುಚಿತಳ ಶವವನ್ನು ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.