ಹರಿಯಾಣ: ಯುವಕನೊಬ್ಬ ಮೊಬೈಲ್ ಚಾರ್ಜ್ ಮಾಡಿದ ಬಳಿಕ, ಅದನ್ನು ತನ್ನ ಪ್ಯಾಂಟ್ ಜೇಬಿನಲ್ಲಿ ಇಟ್ಟುಕೊಂಡಿದ್ದ ಸ್ವಲ್ಪ ಸಮಯದಲ್ಲೇ ಸ್ಫೋಟಗೊಂಡ ಪರಿಣಾಮ ಕಾಲಿಗೆಗಾಯವಾಗಿದೆ. ಇದನ್ನು ಕಂಡ ಕುಟುಂಬದವರು ಕೂಡಲೇ ಅವನನ್ನು ರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಯುವಕನು ಸ್ಫೋಟಗೊಂಡ ಮೊಬೈಲನ್ನು ಬಹಳ ಸಮಯದಿಂದ ಬಳಸುತ್ತಿದ್ದರು ಎನ್ನಲಾಗಿದೆ. ಬುಧವಾರ ಫೋನ್ನ ಬ್ಯಾಟರಿ ಖಾಲಿಯಾದ ಕಾರಣ ಮೊಬೈಲ್ ಚಾರ್ಜಿಂಗ್ಗೆ ಹಾಕಿದ್ದರು. ಚಾರ್ಜ್ ಮಾಡಿದ ನಂತರ, ಅವನು ಅದನ್ನು ಮನೆಯಲ್ಲಿ ಬಳಸಲು ಪ್ರಾರಂಭಿಸಿದನು.
ಅದನ್ನು ಬಳಸಿದ ನಂತರ ಫೋನ್ ಅನ್ನು ಪ್ಯಾಂಟ್ನ ಜೇಬಿಗೆ ಹಾಕಿಕೊಂಡ ಸ್ವಲ್ಪ ಸಮಯದ ನಂತರ ಫೋನ್ ಸ್ಫೋಟಗೊಂಡು ಅವನ ಕಾಲು ಸುಟ್ಟುಹೋಯಿತು. ಬಳಿಕ ಮನೆಯವರು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆತಂದರು. ಚಿಕಿತ್ಸೆ ಬಳಿಕ ವೈದ್ಯರು ಡಿಸ್ಚಾರ್ಜ್ ಮಾಡಿದ್ದಾರೆ ಎನ್ನಲಾಗಿದೆ.
Big news: ದಶಕದ ಬಳಿಕ ಯುನೈಟೆಡ್ ಸ್ಟೇಟ್ಸ್ನಲ್ಲಿ ಮೊದಲ ʻಪೋಲಿಯೊʼ ಪ್ರಕರಣ ಪತ್ತೆ…