ಬೆಂಗಳೂರು: ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಗಿದ್ದು, ಪ್ರತಿ ದಿನ ಶಾಲಾ ಶಿಕ್ಷಕರು, ಸಿಬ್ಬಂದಿಗಳು ತಪ್ಪದೇ ಹಾಜರಾತಿಯನ್ನು ನಮೂದಿಸುವಂತೆ ಶಾಲಾ ಶಿಕ್ಷಣ ಇಲಾಖೆ ಆದೇಶಿಸಿದೆ.
ಈ ಕುರಿತು ಶಾಲಾ ಶಿಕ್ಷಣ ಇಲಾಖೆಯ ಆಯಾ ವಿಭಾಗದ ಉಪ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದು, ಈಗಾಗಲೇ ಜಿಲ್ಲೆಯ ಎಲ್ಲಾ ಶಾಲೆಗಳ ಅಕ್ಷಾಂಶ ಹಾಗೂ ರೇಖಾಂಶಗಳು ನಮೂದಾಗಿರುವುದರಿಂದ ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯನ್ನು (KAAMS) ಅನುಷ್ಠಾನಗೊಳಿಸುವಂತೆ ತಿಳಿಸಲಾಗಿರುತ್ತದೆ ಎಂದಿದ್ದಾರೆ.
ಈ ಹಿನ್ನೆಲೆಯಲ್ಲಿ ನಿಮ್ಮ ತಾಲ್ಲೂಕಿನ ಎಲ್ಲಾ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಮೊಬೈಲ್ ಆಧಾರಿತ ಹಾಜರಾತಿ ತಂತ್ರಾಂಶವನ್ನು ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು, ಸದರಿ ತಂತ್ರಾಂಶದಲ್ಲಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರತಿ ಸರ್ಕಾರಿ ನೌಕರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಪ್ರತಿದಿನದ ಹಾಜರಾತಿಯನ್ನು ಸದರಿ ತಂತ್ರಾಂಶದಲ್ಲಿಯೇ ಲಾಗಿನ್ ಹಾಗೂ ಲಾಗ್ ಔಟ್ ಆಗುವುದರ ಮೂಲಕ ಹಾಜರಾತಿಯನ್ನು ದಿನಾಂಕ 20/12/2025ರಿಂದಲೇ ನಿರ್ವಹಿಸುವಂತೆ ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯಸ್ಥರಿಗೆ ಸೂಕ್ತ
ನಿರ್ದೇಶನ ನೀಡುವಂತೆ ಈ ಮೂಲಕ ತಿಳಿಸಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾಲ್ಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮೊಬೈಲ್ ಆಧಾರಿತ ಹಾಜರಾತಿ ವ್ಯವಸ್ಥೆಯಲ್ಲಿ (KAAMS) ಹಾಜರಾತಿ ನಮೂದಿಸುತ್ತಿರುವ ಬಗ್ಗೆ ವರದಿ ಪಡೆದು, ನಿರಂತರ ಅನುಪಾಲನೆ ಕೈಗೊಂಡು ಜಿಲ್ಲಾ ಕಚೇರಿಗೆ ವರದಿ ಮಾಡುವಂತೆ ಈ ಮೂಲಕ ಸೂಚಿಸಿದ್ದಾರೆ.
ತಂತ್ರಾಶದ ಬಳಕೆಯಲ್ಲಿ ಸಮಸ್ಯೆಗಳುಂಟಾದಲ್ಲಿ ನಿಮ್ಮ ತಾಲ್ಲೂಕಿನಿಂದ ನೇಮಕಗೊಂಡಿರುವ ತಾಲ್ಲೂಕು KAAMS-ನೋಡಲ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಈ ಮೂಲಕ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಈ ಜ್ಞಾಪನದೊಂದಿಗೆ ಲಗತ್ತಿಸಿರುವ ಪಿ.ಪಿ.ಟಿ.ಯನ್ನು ವೀಕ್ಷಿಸಲು ತಿಳಿಸಿದ್ದಾರೆ.
ಜ.14ರಂದು ಸೊರಬದ ತಳೇಬೈಲಿನಲ್ಲಿ ಹೊನಲು ಬೆಳಕಿನ ‘ವಾಲಿಬಾಲ್ ಪಂದ್ಯಾವಳಿ’: ಗೆದ್ದವರಿಗೆ ಭರ್ಜರಿ ‘ನಗದು ಬಹುಮಾನ’
ಮಾಹಿತಿ ಹಕ್ಕು ಅರ್ಜಿಗಳಿಗೆ ಸಕಾಲದಲ್ಲಿ ಮಾಹಿತಿ ಒದಗಿಸಿ: ಆಯುಕ್ತ ರುದ್ರಣ್ಣ ಹರ್ತಿಕೋಟೆ ಖಡಕ್ ಸೂಚನೆ








