ಮಂಗಳೂರು : ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ಎನ್ ಐಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇದೀಗ ಪ್ರಕರಣ ಕುರಿತು ಸ್ಪೋಟಕ ಮಾಹಿತಿ ಲಭ್ಯವಾಗಿದ್ದು, ಬಾಂಬ್ ಸ್ಪೋಟಕ್ಕೂ ಮುನ್ನ ಈತ ಕೊಡಗು ಜಿಲ್ಲೆಯ ಹೋಂಸ್ಟೇಗೆ ಬಂದು ಹೋಗಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.
ಕೊಡಗು ಜಿಲ್ಲೆಯ ಹೋಂ ಸ್ಟೇ ಒಂದಕ್ಕೆ ಆತ ಮತ್ತು ಆತನ ಜೊತೆ ಇಬ್ಬರು ಮಹಿಳೆಯರು ಸೇರಿ ಒಂದು ತಂಡವೇ ಹೋಂ ಸ್ಟೇಗೆ ಬಂದು ಹೋಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಬಾಂಬ್ ಸ್ಪೋಟಕ್ಕೂ ಮುನ್ನ ಶಾರೀಖ್ ಹಾಗೂ ಆತನ ಸಹಚರರು ಕೊಡಗು ಜಿಲ್ಲೆಗೆ ಭೇಟಿ ನೀಡಿದ್ದರು. ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಟಿ.ಶೆಟ್ಟಿಗೇರಿ ಸಮೀಪದ ನೆಮ್ಮಲೆ ಗ್ರಾಮದ ಓಟೆಕಾಡ್ ಹೋಂಸ್ಟೇಯಲ್ಲಿ ಪೊಲೀಸರು ತೀವ್ರ ಪರಿಶೀಲನೆ ನಡೆಸಿದ್ದಾರೆ.
ಮುಂದುವರೆದಂತೆ, ಉಗ್ರ ಶಾರೀಕ್ನ ತನಿಖೆ ಮುಂದುವರಿಸಿದ ಎನ್ಐಎ ಅಧಿಕಾರಿಗಳಿಗೆ ಸ್ಫೋಟಕ ಮಾಹಿತಿಗಳು ಸಿಗುತ್ತಿದ್ದು, ಇದೀಗ ಶಾರಿಕ್ ಹಣದ ಮೂಲ ಜಾಲಾಡಿದ ಅಧಿಕಾರಿಗಳಿಗೆ ಶಾಕ್ ಆಗಿದ್ದು, ಹೆಚ್ಚಿನ ಹಣ ಡಾಲರ್ ಮೂಲಕ ಶಾರಿಕ್ ಅಕೌಂಟ್ಗೆ ಬರುತ್ತಿದ್ದ ದಾಖಲೆ ಸಿಕ್ಕಿದೆ.
ಶಾರಿಕ್ ಉಗ್ರ ಕೃತ್ಯಕ್ಕೆ ವಿದೇಶದಿಂದ ಸಹಕಾರ ಮಾಡುತ್ತಿದ್ದವರು ಡಾಲರ್ ಮೂಲಕ ಆರ್ಥಿಕ ಸಹಾಯ ನೀಡುತ್ತಿರುವ ಬಗ್ಗೆ ಎನ್ಐಎ ಅಧಿಕಾರಿಗಳಿಗೆ ದಾಖಲೆಗಳು ಸಿಕ್ಕಿವೆ. ಡಾರ್ಕ್ ವೆಬ್ನಲ್ಲಿರುವ ಅಕೌಂಟ್ಗೆ ಡಾಲರ್ ನಲ್ಲಿ ಹಣ ಬಂದಿರೋ ದಾಖಲೆ ಲಭ್ಯವಾಗಿದ್ದು, ಎನ್ ಐಎ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
Karnataka Politics: ಬಿಜೆಪಿ ಸರ್ಕಾರ 40% ಹಣ ಖರ್ಚು ಮಾಡಿ, 60% ಜೇಬಿಗೆ ಇಳಿಸಿದೆ – ಮಾಜಿ ಸಿಎಂ HDK ಗಂಭೀರ ಆರೋಪ
ಶಿವಮೊಗ್ಗ: ಡಿ.7ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut