Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪಿಎಂ ಕಿಸಾನ್ ಪ್ರೋತ್ಸಾಧನ ಕುರಿತು ರೈತರಿಗೆ ಮಹತ್ವದ ಮಾಹಿತಿ

01/03/2026 2:31 PM

ಭಾರತ-ಅಮೇರಿಕಾ ವ್ಯಾಪಾರ ಒಪ್ಪಂದ: ‘ಇದು ಸಣ್ಣ ವ್ಯಾಪಾರಿಗಳ ಪಾಲಿನ ಮರಣಶಾಸನ’ ಎಂದ ರಾಹುಲ್ ಗಾಂಧಿ

01/03/2026 1:54 PM

ಮೊಣಕಾಲು ನೋವಿನಿಂದ ಮುಕ್ತಿ ಪಡೆಯಲು ಜಸ್ಟ್ ಈ ಸುಲಭ ಮನೆಮದ್ದುಗಳನ್ನು ಬಳಸಿ !

01/03/2026 1:41 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ವಿಧಾನ ಪರಿಷತ್ ಟಿಕೆಟ್ ಹಂಚಿಕೆ ವಿಚಾರ: ಪಕ್ಷಕ್ಕೆ ದುಡಿದ ಅರ್ಹರ ಪಟ್ಟಿ ಹೈಕಮಾಂಡಿಗೆ ಸಲ್ಲಿಕೆ-ಡಿಸಿಎಂ ಡಿಕೆಶಿ
KARNATAKA

ವಿಧಾನ ಪರಿಷತ್ ಟಿಕೆಟ್ ಹಂಚಿಕೆ ವಿಚಾರ: ಪಕ್ಷಕ್ಕೆ ದುಡಿದ ಅರ್ಹರ ಪಟ್ಟಿ ಹೈಕಮಾಂಡಿಗೆ ಸಲ್ಲಿಕೆ-ಡಿಸಿಎಂ ಡಿಕೆಶಿ

By kannadanewsnow0928/05/2024 9:35 PM

ನವದೆಹಲಿ: ಪಕ್ಷಕ್ಕೆ ದುಡಿದ ಅರ್ಹರ ಪಟ್ಟಿಯನ್ನು ಹೈಕಮಾಂಡಿಗೆ ಸಲ್ಲಿಸಿದ್ದೇನೆ. ಒಂದು ಸುತ್ತಿನ ಸಭೆ ನಡೆದಿದ್ದು. ಎಐಸಿಸಿ ಅಧ್ಯಕ್ಷರು ಹಾಗೂ ಇತರರ ಜೊತೆ ಚರ್ಚೆ ನಡೆಸಿ ಪಟ್ಟಿ ಅಂತಿಮಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ವಿಧಾನ ಪರಿಷತ್ ಟಿಕೆಟ್ ಹಂಚಿಕೆ ವಿಚಾರವಾಗಿ ನವದೆಹಲಿಯಲ್ಲಿ ಮಂಗಳವಾರ ಸಂಜೆ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದರು.

“ಎಲ್ಲಾ ಸಮಾಜಗಳಿಗು ಅವಕಾಶ ಮಾಡಿಕೊಡಬೇಕು. 300 ಕ್ಕೂ ಹೆಚ್ಚು ಜನ ಆಂಕಾಕ್ಷಿಗಳು ಇರುವ ಕಾರಣ ಒಂದಷ್ಟು ಜನರಿಗೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲಾ ವರ್ಗದವರಿಗೂ ಈ ಬಾರಿ ಅವಕಾಶ ಮಾಡಿಕೊಡಲು ಆಗಿಲ್ಲ” ಎಂದರು

“ಪ್ರಾಥಮಿಕವಾಗಿ ಒಂದಷ್ಟು ಹೆಸರುಗಳನ್ನು ನಾವು ಸೂಚಿಸಿದ್ದೇವೆ. ಜೊತೆಗೆ ಸಚಿವರು, ಎಐಸಿಸಿ ಕಾರ್ಯದರ್ಶಿಗಳು ತಮ್ಮ ಆಯ್ಕೆಗಳನ್ನು ಶಿಫಾರಸ್ಸು ಮಾಡಿದ್ದಾರೆ. ಮುಂದಿನ ಎರಡು ವರ್ಷಗಳ ನಂತರ ಮತ್ತೊಮ್ಮೆ ಇದೇ ರೀತಿ ಅವಕಾಶ ಬರುವ ಕಾರಣ ಅವರಿಗೆಲ್ಲ ಮುಂದಿನ ಬಾರಿ ಸ್ಥಾನ ನೀಡಲಾಗುವುದು. ಈಗ ಏಳರಿಂದ- ಎಂಟು ಮಂದಿಗೆ ಅವಕಾಶ ಮಾಡಿ ಕೊಡಲಾಗುವುದು. ಪಕ್ಷ ಸಂಘಟನೆಗೆ ದುಡಿದವರಿಗೆ ಮೊದಲ ಆದ್ಯತೆ ನೀಡಲಾಗುವುದು” ಎಂದರು.

“ಪಕ್ಷ ಏನು ಹೇಳುತ್ತದೆ ಅದರಂತೆ ಕೇಳಬೇಕು. ನಮ್ಮ ಪಟ್ಟಿಯನ್ನು ನಾವು ಸಲ್ಲಿಸಿದ್ದೇವೆ. ಹೈಕಮಾಂಡ್ ಎಐಸಿಸಿ ಕಾರ್ಯದರ್ಶಿಗಳ ಬಳಿಯು ಪಟ್ಟಿ ತೆಗೆದುಕೊಳ್ಳುತ್ತದೆ. ಚುನಾವಣಾ ಸಮಯದಲ್ಲಿ ಕೆಲಸ ಮಾಡಿದವರು ಯಾರು, ಅವರ ಹಿನ್ನೆಲೆ, ತ್ಯಾಗ, ಶ್ರಮ ಪಟ್ಟಿರುವರ ಹೆಸರು ಹೈಕಮಾಂಡ್ ಗೆ ಸಲ್ಲಿಕೆಯಾಗುತ್ತದೆ. ಹಿರಿಯರು, ಯುವಕರು ಸೇರಿದ ಸಮತೋಲನದ ಪಟ್ಟಿಯನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ” ಎಂದು ತಿಳಿಸಿದರು.

ಕುಟುಂಬದವರಿಗೆ ಬೇಡ ಕಾರ್ಯಕರ್ತರಿಗೆ ನೀಡಿ ಎನ್ನುವ ಮಾತು ಕೇಳಿಬರುತ್ತಿದೆ ಎಂದಾಗ “ಯಾವ ಕುಟುಂಬದವರಿಗೂ ಇಲ್ಲ. ಶಾಸಕ ಸ್ಥಾನ ಬಿಟ್ಟು ಕೊಟ್ಟ ಕಾರಣಕ್ಕೆ, ಒಂದು ಸ್ಥಾನಕ್ಕೆ ಮಾತ್ರ ಈ ಮೊದಲು ಮಾತು ಕೊಟ್ಟಂತೆ ನೀಡಲಾಗುವುದು” ಎಂದರು.

ಯತೀಂದ್ರ ಅವರಿಗೆ ಕೊಡಲಾಗುತ್ತದೆಯೇ ಎಂದು ಮರು ಪ್ರಶ್ನಿಸಿದಾಗ “ನಿಮ್ಮ ಮಾತುಗಳನ್ನು ನಾನು ಕೇಳಲು ಆಗುವುದಿಲ್ಲ. ನಾವು ಕೆಲವರಿಗೆ ಮಾತು ಕೊಟ್ಟಿದ್ದೇವೆ. ಆ ಮಾತಿನಂತೆ ಕೆಲವೊಂದು ಸಂದರ್ಭದಲ್ಲಿ ನಡೆದುಕೊಳ್ಳಬೇಕಾಗುತ್ತದೆ” ಎಂದು ಸ್ಪಷ್ಟಪಡಿಸಿದರು.

ವಾಲ್ಮೀಕಿ ನಿಗಮದ ಅಧಿಕಾರಿಯ ಆತ್ಮಹತ್ಯೆ ಬಗ್ಗೆ ಕೇಳಿದಾಗ “ಈ ವಿಚಾರವಾಗಿ ತನಿಖೆ ನಡೆಸಲು ಈಗಾಗಲೇ ಸಿಎಂ ಮತ್ತು ಗೃಹ ಸಚಿವರು ಸೂಚನೆ ನೀಡಿದ್ದಾರೆ. ಅತ್ಯಂತ ಕೂಲಂಕಷವಾಗಿ ತನಿಖೆ ನಡೆಸಲಾಗುವುದು. ಈ ವಿಚಾರದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾಗುತ್ತದೆ” ಎಂದು ಹೇಳಿದರು.

ಮೇ 30 ರಂದು ಪ್ರಧಾನಿ ಮೋದಿ ಅವರ ಕನ್ಯಾಕುಮಾರಿ ಭೇಟಿ ಬಗ್ಗೆ ಕೇಳಿದಾಗ “ಅವರವರ ಧರ್ಮ, ನಂಬಿಕೆ, ಪೂಜೆ, ಪುನಸ್ಕಾರ ಎಲ್ಲವೂ ವೈಯಕ್ತಿಕವಾದುದು. ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ನಿಮಗೆ ಶಾಂತಿ ಹಾಗೂ ಹೆಚ್ಚಿನ ಶಕ್ತಿ ಸಂಪಾದಿಸಲು ಅವರವರ ಕೆಲಸ ಮಾಡುತ್ತಾರೆ. ಇದಕ್ಕೆಲ್ಲಾ ನಾವೇಕೆ ಮೂಗು ತೂರಿಸಬೇಕು” ಎಂದರು.

ದೇಶದ ಅಭಿವೃದ್ಧಿಗೆ ದೇವರು ನನ್ನ ಕಳುಹಿಸಿದ್ದಾರೆ ಎನ್ನುವ ಮೋದಿ ಅವರ ಹೇಳಿಕೆ ಬಗ್ಗೆ ಕೇಳಿದಾಗ “ಈ ವಿಚಾರದ ಬಗ್ಗೆ ನಮ್ಮ ಪಕ್ಷ ಈಗಾಗಲೇ ಪ್ರತಿಕ್ರಿಯೆ ನೀಡಿದೆ. ನಾನು ಹೇಳುವುದೇನಿಲ್ಲ” ಎಂದು ತಿಳಿಸಿದರು.

‘ಪಂಜಾಬ್’ನಲ್ಲಿ ‘ಝೀ ಮೀಡಿಯಾ ಚಾನೆಲ್’ಗಳಿಗೆ ನಿಷೇಧ | Zee Media Channels

BREAKING: ರಾಜ್ಯದಲ್ಲಿ ಮತ್ತೊಂದು ಆ್ಯಸಿಡ್ ದಾಳಿ: ಮನೆ ಬಾಗಿಲು ತೆರೆಯದಿದ್ದಕ್ಕೆ ಮಹಿಳೆ ಮೇಲೆ ಆ್ಯಸಿಡ್ ಅಟ್ಯಾಕ್

Share. Facebook Twitter LinkedIn WhatsApp Email

Related Posts

ಪಿಎಂ ಕಿಸಾನ್ ಪ್ರೋತ್ಸಾಧನ ಕುರಿತು ರೈತರಿಗೆ ಮಹತ್ವದ ಮಾಹಿತಿ

01/03/2026 2:31 PM1 Min Read

ಮೊಣಕಾಲು ನೋವಿನಿಂದ ಮುಕ್ತಿ ಪಡೆಯಲು ಜಸ್ಟ್ ಈ ಸುಲಭ ಮನೆಮದ್ದುಗಳನ್ನು ಬಳಸಿ !

01/03/2026 1:41 PM2 Mins Read
Haveri Shiggaon Horrific Road Accident

ಹಸೆಮಣೆ ಏರಿದ 15 ದಿನಕ್ಕೇ ಜವರಾಯನ ಅಟ್ಟಹಾಸ: ಶಿಗ್ಗಾಂವಿ ಬಳಿ ಭೀಕರ ಅಪಘಾತಕ್ಕೆ ನವದಂಪತಿ ಬಲಿ!

01/03/2026 1:17 PM2 Mins Read
Recent News

ಪಿಎಂ ಕಿಸಾನ್ ಪ್ರೋತ್ಸಾಧನ ಕುರಿತು ರೈತರಿಗೆ ಮಹತ್ವದ ಮಾಹಿತಿ

01/03/2026 2:31 PM

ಭಾರತ-ಅಮೇರಿಕಾ ವ್ಯಾಪಾರ ಒಪ್ಪಂದ: ‘ಇದು ಸಣ್ಣ ವ್ಯಾಪಾರಿಗಳ ಪಾಲಿನ ಮರಣಶಾಸನ’ ಎಂದ ರಾಹುಲ್ ಗಾಂಧಿ

01/03/2026 1:54 PM

ಮೊಣಕಾಲು ನೋವಿನಿಂದ ಮುಕ್ತಿ ಪಡೆಯಲು ಜಸ್ಟ್ ಈ ಸುಲಭ ಮನೆಮದ್ದುಗಳನ್ನು ಬಳಸಿ !

01/03/2026 1:41 PM

BREAKING : ಇರಾನ್ ಸೇನಾ ಹೆಲಿಕಾಪ್ಟರ್ ಪತನಗೊಂಡು ನಾಲ್ವರು ಸಾವು !

01/03/2026 1:32 PM
State News
KARNATAKA

ಪಿಎಂ ಕಿಸಾನ್ ಪ್ರೋತ್ಸಾಧನ ಕುರಿತು ರೈತರಿಗೆ ಮಹತ್ವದ ಮಾಹಿತಿ

By kannadanewsnow0901/03/2026 2:31 PM KARNATAKA 1 Min Read

ಬಳ್ಳಾರಿ: ಜಿಲ್ಲೆಯ ರೈತರು ಪಿಎಂ-ಕಿಸಾನ್ ಪ್ರೋತ್ಸಾಹಧನ ಪಡೆಯಲು ರೈತರು ತಮ್ಮ ಫ್ರೂಟ್ಸ್ ಐಡಿ ಗೆ ಇ-ಕೆವೈಸಿ, ಮೊಬೈಲ್ ಸಂಖ್ಯೆ, ತಮ್ಮ…

ಮೊಣಕಾಲು ನೋವಿನಿಂದ ಮುಕ್ತಿ ಪಡೆಯಲು ಜಸ್ಟ್ ಈ ಸುಲಭ ಮನೆಮದ್ದುಗಳನ್ನು ಬಳಸಿ !

01/03/2026 1:41 PM
Haveri Shiggaon Horrific Road Accident

ಹಸೆಮಣೆ ಏರಿದ 15 ದಿನಕ್ಕೇ ಜವರಾಯನ ಅಟ್ಟಹಾಸ: ಶಿಗ್ಗಾಂವಿ ಬಳಿ ಭೀಕರ ಅಪಘಾತಕ್ಕೆ ನವದಂಪತಿ ಬಲಿ!

01/03/2026 1:17 PM
Israel-Iran conflict heats up: Flights cancelled at Mangalore Airport, passengers stranded!

ಇಸ್ರೇಲ್-ಇರಾನ್ ಸಂಘರ್ಷದ ಬಿಸಿ : ಮಂಗಳೂರು ಏರ್‌ಪೋರ್ಟ್‌ನಲ್ಲಿ ವಿಮಾನ ಹಾರಾಟ ರದ್ದು, ಪ್ರಯಾಣಿಕರ ಪರದಾಟ!

01/03/2026 1:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.