ಬೆಂಗಳೂರು : ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಸಚಿವರು, ಶಾಸಕರು, ಆರ್ ಎಸ್ ಎಸ್ ಮುಖಂಡರು ದಂಡು ದಂಡಾಗಿ ಬಂದು ಭೇಟಿ ಮಾಡುತ್ತಿರುವುದು ರಾಜ್ಯ ರಾಜಕಾರಣದಲ್ಲಿ ಭಾಶಸರೀ ಕುತೂಹಲಕ್ಕೆ ಕಾರಣವಾಗಿದೆ.
ಇಂದು ಶುಕ್ರವಾರ ಸಿಎಂ ಬೊಮ್ಮಾಯಿ ಭೇಟಿಯಾದ ಆರ್ ಎಸ್ ಎಸ್ ಮುಖಂಡ ಮುಕುಂದ ಅವರು ರೇಸ್ ಕೋರ್ಸ್ ರಸ್ತೆಯ ನಿವಾಸದಲ್ಲಿ ಸಿಎಂ ಭೇಟಿಯಾಗಿದ್ದು, ಹಲವು ರಾಜಕೀಯ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ಅದೇ ರೀತಿ ಶಾಸಕರಾದ ರಘುಪತಿ ಭಟ್, ಸಚಿವ ಶಿವರಾಂ ಹೆಬ್ಬಾರ್, ವಿ ಸೋಮಣ್ಣ ಕೂಡ ಸಿಎಂ ಭೇಟಿಯಾಗಿದ್ದಾರೆ.