ಬೆಂಗಳೂರು : ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಮುಡಾ ಸೈಟ್ ಹಂಚಿಕೆಯಾಗಿದೆ ಹಾಗಾಗಿ ಇದರಲ್ಲಿ ಸಿಎಂ ಸಿದ್ದರಾಮಯ್ಯ ಯಾಕೆ ರಾಜೀನಾಮೆ ನೀಡಬೇಕು ಎಂದು ಸ್ವಪಕ್ಷದ ವಿರುದ್ಧವೇ ಶಾಸಕ ಎಸ್ ಟಿ ಸೋಮಶೇಖರ್ ವಾಗ್ದಾಳಿ ನಡೆಸಿದರು. ಈ ವಿಚಾರವಾಗಿ ಎಂಎಲ್ಸಿ ಸಿಟಿ ರವಿ ಅವರು ಶಾಸಕ ಎಸ್ ಟಿ ಸೋಮಶೇಖರ್ ಗೆ ಆತ್ಮಸಾಕ್ಷಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ನೈತಿಕ ಮೌಲ್ಯ ಎತ್ತಿ ಹಿಡಿಯುವ ಯಾವುದೇ ರಾಜಕಾರಣಿ ತಮ್ಮ ಮೇಲೆ ಆಪಾದನೆ ಬಂದಾಗ ರಾಜೀನಾಮೆ ನೀಡುತ್ತಾರೆ. ಜಿ ಟಿ ದೇವೇಗೌಡರ ಹೇಳಿಕೆಗೆ ಉತ್ತರಿಸುವ ಕೆಲಸ ನಂದಲ್ಲ.ಎಸ್ ಟಿ ಸೋಮಶೇಖರ್ ಆತ್ಮಸಾಕ್ಷಿ ಇಲ್ಲದಿರುವ ಕಾರಣಕ್ಕೆ ತಾಂತ್ರಿಕವಾಗಿ ಮಾತ್ರ ಬಿಜೆಪಿಯಲ್ಲಿ ಇದ್ದಾರೆ ಸೋಮಶೇಖರ್ ಜಿ ಟಿ ದೇವೇಗೌಡ ಬಗ್ಗೆ ನಾನು ಮಾತನಾಡುವುದಿಲ್ಲ ನಮ್ಮ ಪಕ್ಷದ ನಿಲುವಿನಲ್ಲಿ ವ್ಯತ್ಯಾಸ ಇಲ್ಲ ಎಂದು ತಿಳಿಸಿದರು.