ಮಂಡ್ಯ: ಇತ್ತೀಚಿನ ದಿನಗಳಲ್ಲಿ ಶಾಸಕರೆಲ್ಲ ಬೇರೆ ಆಕ್ಟಿವಿಟಿ ಚುಟುವಟಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಮಂಡ್ಯ ಜಿಲ್ಲೆಯ ಮೇಲಕೋಟೆ ಶಾಸಕ ಪುಟ್ಟರಾಜು ಕಬಡ್ಡಿ ಆಟದಲ್ಲಿ ತಲ್ಲಿನರಾಗಿದ್ದಾರೆ.
BIGG NEWS: ಬೆಂಗಳೂರಿನಲ್ಲಿ ಒಳಮೀಸಲಾತಿ ಆಗ್ರಹಿಸಿ ಸಿಎಂ ಮುಂದೆಯೇ ದಲಿತ ಸಂಘಟನೆಗಳು ಪ್ರತಿಭಟನೆ
ಮೈದಾನಕ್ಕಿಳಿದು ಶಾಸಕರು ಕಬಡ್ಡಿ ಆಡಿ ಎಲ್ಲರನ್ನು ಮನರಂಜಿಸಿದ್ದಾರೆ. ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಜಕ್ಕನಹಳ್ಳಿ ಗ್ರಾಮ ಪಂಚಾಯತಿ ವತಿಯಿಂದ ಗ್ರಾಮದಲ್ಲಿ ಗ್ರಾಮೀಣ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು. ಈ ಕ್ರೀಡಾಕೂಟಕ್ಕೆ ಶಾಸಕ ಪುಟ್ಟರಾಜು ಅವರೇ ಚಾಲನೆ ನೀಡಿದ್ದಾರೆ. ಈ ವೇಳೆ ಮೈದಾನದಲ್ಲಿ ಕ್ರೀಡಾಪಟುಗಳ ಜೊತೆ ಸೇರಿ ಕಬಡ್ಡಿ ಆಡಿದ್ದಾರೆ.
ಅಲ್ಲದೆ ಯುವಕರೊಂದಿಗೆ ಕಬಡ್ಡಿ ಆಡುವ ಮೂಲಕ ಕ್ರೀಡಾಸ್ಪೂರ್ತಿ ಮೆರೆದರು. ತೊಡೆ ತಟ್ಟಿ ಅಂಗಳಕ್ಕಿಳಿದರೂ ರೇಡ್ ನಲ್ಲಿ ಪಾಯಿಂಟ್ಸ್ ಗಳಿಸಲು ಶಾಸಕರು ವಿಫಲರಾದರು. ಶಾಸಕರ ಕಬಡ್ಡಿ ಆಟಕ್ಕೆ ಶಿಳ್ಳೆ, ಚಪ್ಪಾಳೆಗಳ ಸುರಿಮಳೆಯೇ ಹರಿದುಬಂದಿತ್ತು.