ಬೆಂಗಳೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ತೆರಳುತ್ತಿದ್ದಂತ ಸಂದರ್ಭದಲ್ಲೇ ಸಿಎಂ ಕಾನ್ವೆಗೆ ಎದುರಾಗಿ ಸಂಚಾರ ನಿಯಮ ಉಲ್ಲಂಘಿಸಿ, ಮಾಜಿ ಸಚಿವ ಹಾಲಿ ಶಾಸಕ ಜನಾರ್ಧನ ರೆಡ್ಡಿ ಕಾರು ಚಾಲಕ ಕಾರು ಚಲಾಯಿಸಿದ್ದನು. ಹೀಗಾಗಿ ಸಿಎಂ ಕಾನ್ವೆ ರೂಲ್ಸ್ ಉಲ್ಲಂಘಿಸಿದ ಕಾರಣ, ಶಾಸಕ ಜನಾರ್ಧನ ರೆಡ್ಡಿಗೆ ಸೇರಿದಂತೆ ರೇಂಜ್ ರೋವರ್ ಕಾರನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಸಿಎಂ ಸಿದ್ಧರಾಮಯ್ಯ ಕೆಲ ದಿನಗಳ ಹಿಂದೆ ಗಂಗಾವತಿಯಿಂದ ಬಳ್ಳಾರಿಗೆ ತೆರಳುತ್ತಿದ್ದರು. ಈ ವೇಳೆ ಅವರಿಗಾಗಿ ಜೀರೋ ಟ್ರಾಫಿಕ್ ನಿಯಮವನ್ನು ಮಾರ್ಗದಲ್ಲಿ ಅಳವಡಿಸಲಾಗಿತ್ತು. ಆದರೇ ಈ ನಿಯಮ ಮೀರಿ ಶಾಸಕ ಜನಾರ್ಧನ ರೆಡ್ಡಿ ಸಿಎಂ ಕಾನ್ವೆ ನಿಯಮಕ್ಕೆ ಎದುರಾಗಿ ಏಕಮುಖ ಸಂಚಾರ ಮಾರ್ಗದಲ್ಲಿ ತೆರಳಿ, ನಿಯಮ ಉಲ್ಲಂಘಿಸಿದ್ದರು.
ಸಿಎಂ ಕಾನ್ವೆ ನಿಯಮ ಉಲ್ಲಂಘಿಸಿದಂತ ಜನಾರ್ಧನ ರೆಡ್ಡಿ ಕಾರು ಚಾಲಕ ಹಾಗೂ ಇತರೆ ಮೂರು ಕಾರುಗಳ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಬೆನ್ನಲ್ಲೇ ಬೆಂಗಳೂರಲ್ಲಿ ಶಾಸಕ ಜನಾರ್ಧನ ರೆಡ್ಡಿಗೆ ಸೇರಿದ್ದಂತ ರೇಂಜ್ ರೋವರ್ ಕಾರನ್ನು ಜಪ್ತಿ ಮಾಡಿದಂತ ಗಂಗಾವತಿ ಠಾಣೆಯ ಪೊಲೀಸರು, ಅಲ್ಲಿಂದ ಗಂಗಾವತಿಗೆ ತಂದಿರುವುದಾಗಿ ತಿಳಿದು ಬಂದಿದೆ.
ಜಾನಿ ಮಾಸ್ಟರ್ ಪ್ರಕರಣದಲ್ಲಿನ ನಿಲುವು, ಯಡಿಯೂರಪ್ಪ ಕೇಸಲ್ಲಿ ಯಾಕಿಲ್ಲ?: ದಿನೇಶ್ ಗುಂಡೂರಾವ್ ಪ್ರಶ್ನೆ