Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: ಭಾರತ-ಪಾಕ್ ನಡುವೆ ಉದ್ವಿಗ್ನತೆ: ಪಿಎಸ್ಎಲ್ 2025ರ ಉಳಿದ ಪಂದ್ಯಗಳನ್ನು ಮುಂದೂಡಿಕೆ

09/05/2025 9:33 PM

BIG NEWS: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟ

09/05/2025 9:28 PM

ಅಂಗವಿಕಲರಿಗೆ ಗುಡ್ ನ್ಯೂಸ್: ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ

09/05/2025 9:26 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಗ್ರಾಮ ಪಂಚಾಯ್ತಿ ಸದಸ್ಯರು, ನೌಕರರ ಬೇಡಿಕೆ ಅಧ್ಯಯನಕ್ಕೆ ತಂಡ ರಚಿಸಿ: ಸಿಎಂ, ಸಚಿವರಿಗೆ ಶಾಸಕ ದಿನೇಶ್‌ ಗೂಳಿಗೌಡ ಮನವಿ
KARNATAKA

ಗ್ರಾಮ ಪಂಚಾಯ್ತಿ ಸದಸ್ಯರು, ನೌಕರರ ಬೇಡಿಕೆ ಅಧ್ಯಯನಕ್ಕೆ ತಂಡ ರಚಿಸಿ: ಸಿಎಂ, ಸಚಿವರಿಗೆ ಶಾಸಕ ದಿನೇಶ್‌ ಗೂಳಿಗೌಡ ಮನವಿ

By kannadanewsnow0908/10/2024 5:00 PM

ಬೆಂಗಳೂರು: ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಅಧಿಕಾರಿಗಳು ಮತ್ತು ನೌಕರರ ನ್ಯಾಯಯುತ ಬೇಡಿಕೆಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲು ತಜ್ಞರ ತಂಡ ರಚಿಸಬೇಕು ಎಂದು ಶಾಸಕ ದಿನೇಶ್‌ ಗೂಳಿಗೌಡ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಅವರಿಗೆ ಮನವಿ ಮಾಡಿದ್ದಾರೆ.

ಈ ಸಂಬಂಧ ಮನವಿ ಪತ್ರ ಬರೆದಿರುವ ಶಾಸಕ ದಿನೇಶ್‌ ಗೂಳಿಗೌಡ, ಸರ್ಕಾರದ ಬೆಂಬಲದಿಂದ ಗ್ರಾಮ ಪಂಚಾಯತಿಗಳು ಗ್ರಾಮ ಸರ್ಕಾರಗಳಂತೆ ಕಾರ್ಯ ನಿರ್ವಹಿಸುವತ್ತ ಹೆಜ್ಜೆ ಇಡುತ್ತಿವೆ. ಜನನ-ಮರಣ ಪ್ರಮಾಣ ಪತ್ರದಿಂದ ಹಿಡಿದು ವಸತಿ ಯೋಜನೆಗಳ ಅನುಷ್ಠಾನ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ನೈರ್ಮಲ್ಯ ಸ್ವಚ್ಛತೆ, ಸ್ವಾವಲಂಬನೆಗೆ ನೆರವು ನೀಡುವುದರ ಜೊತೆಗೆ 29 ವಿಷಯಗಳನ್ನು ಒಳಗೊಂಡಂತೆ ಗ್ರಾಮ ಪಂಚಾಯತಿಗಳು ಸಾರ್ವಜನಿಕರಿಗೆ ಸೇವೆ ನೀಡುತ್ತಾ ಗ್ರಾಮೀಣ ಜನರ ಬದುಕಿಗೆ ನೆರವಾಗುತ್ತಿವೆ. ಆದರೆ, ಈಗ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕಳೆದ ನಾಲ್ಕು ದಿನಗಳಿಂದ ತಮ್ಮ ಕರ್ತವ್ಯ ಬಹಿಷ್ಕರಿಸಿ ಅನಿರ್ಧಿಷ್ಟ ಮುಷ್ಕರ ನಡೆಸುತ್ತಿದ್ದು, ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಎರಡು ದಿನ ಈಗ ರಾಜ್ಯದ ಜಿಲ್ಲಾ ಪಂಚಾಯತ್ ಕೇಂದ್ರಗಳಲ್ಲಿ ಅನಿರ್ಧಿಷ್ಟ ಮುಷ್ಕರ ಆರಂಭಿಸಿದ್ದಾರೆ. ಅವರ ಬೇಡಿಕೆ ಈಡೇರಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಗಮನ ಸೆಳೆದಿದ್ದಾರೆ.

ಆರ್‌ಡಿಪಿಆರ್‌ ಕುಟುಂಬದ ವಿವಿಧ ಸಂಘಟನೆಗಳ ಮುಖ್ಯಸ್ಥರನ್ನು ಸಾಧ್ಯವಾದಷ್ಟು ಶೀಘ್ರವಾಗಿ ಆಹ್ವಾನಿಸಿ ಸಭೆ ನಡೆಸಿ ಅವರ ಬೇಡಿಕೆಗಳನ್ನು ಪರೀಶೀಲನೆ ನಡೆಸಬೇಕು ಎಂದು ಶಾಸಕ ದಿನೇಶ್‌ ಗೂಳಿಗೌಡ ಮನವಿ ಮಾಡಿದ್ದಾರೆ.

ಶಾಸಕರ ಪತ್ರದಲ್ಲೇನಿದೆ?

ಅಬ್ದುಲ್‌ ನಜೀರ್‌ ಸಾಬ್‌ ಅವರ ಪರಿಕಲ್ಪನೆಯಲ್ಲಿ ಜಾರಿಯಾದ ಅಧಿಕಾರ ವಿಕೇಂದ್ರೀಕರಣ ನೀತಿಯ ಭಾಗವಾಗಿ ಗ್ರಾಮೀಣ ಹಂತದಲ್ಲಿ ಸ್ಥಾಪಿತವಾದ ಪಂಚಾಯತ್ ರಾಜ್ ಸಂಸ್ಥೆಗಳು 1990 ರಲ್ಲಿ ಶ್ರೀಯುತ ರಾಜೀವ್‌ ಗಾಂಧಿಯವರು ಭಾರತ ದೇಶದ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಏಕರೀತಿಯ ಮಾದರಿಯಲ್ಲಿ ಜಾರಿಗೆ ತರಲು 73ನೇ ತಿದ್ದುಪಡಿಯ ಭಾಗವೇ ಈಗಿನ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ, ಜಿಲ್ಲಾ ಪಂಚಾಯತಿಗಳಾಗಿ ಕಾರ್ಯ ನಿರ್ವಹಿಸುತ್ತಿವೆ. ಸರ್ಕಾರದ ಬೆಂಬಲದಿಂದ ಗ್ರಾಮ ಪಂಚಾಯತಿಗಳು ಗ್ರಾಮ ಸರ್ಕಾರಗಳಂತೆ ಕಾರ್ಯ ನಿರ್ವಹಿಸುವತ್ತ ಹೆಜ್ಜೆ ಇಡುತ್ತಿವೆ. ಜನನ-ಮರಣ ಪ್ರಮಾಣ ಪತ್ರದಿಂದ ಹಿಡಿದು ವಸತಿ ಯೋಜನೆಗಳ ಅನುಷ್ಠಾನ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ನೈರ್ಮಲ್ಯ ಸ್ವಚ್ಛತೆ, ಸ್ವಾವಲಂಬನೆಗೆ ನೆರವು ನೀಡುವುದರ ಜೊತೆಗೆ 29 ವಿಷಯಗಳನ್ನು ಒಳಗೊಂಡಂತೆ ಗ್ರಾಮ ಪಂಚಾಯತಿಗಳು ಸಾರ್ವಜನಿಕರಿಗೆ ಸೇವೆ ನೀಡುತ್ತಾ ಗ್ರಾಮೀಣ ಜನರ ಬದುಕಿಗೆ ನೆರವಾಗುತ್ತಿವೆ.

ಬಡವರು, ಪರಿಶಿಷ್ಠ ಪಂಗಡ, ಪರಿಶಿಷ್ಠ ಜಾತಿ, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ನಿರ್ಗತಿಕರ ಕಲ್ಯಾಣಕ್ಕೆ ಘನ ಸರ್ಕಾರ ಜಾರಿಗೆ ತರುವ ಹತ್ತು ಹಲವು ಮಹತ್ವಾಕಾಂಕ್ಷಿ ಯೋಜನೆಗಳನ್ನು ಸರ್ಕಾರದ ಪರವಾಗಿ ಸಮಾಜದ ಕಟ್ಟ ಕಡೆಯ ಅರ್ಹ ಫಲಾನುಭವಿಗಳಿಗೆ ತಲುಪಿಸುವವರು ಗ್ರಾಮ ಪಂಚಾಯತಿ ಜನಪ್ರತಿನಿಧಿಗಳು, ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಮಾತ್ರವಲ್ಲದೇ, ಸಾಮಾನ್ಯ ಜನರ ಸಮಸ್ಯೆಗಳನ್ನು, ಬೇಡಿಕೆಗಳನ್ನು ವಾರ್ಡ್‌ ಸಭೆಗಳು ಹಾಗೂ ಗ್ರಾಮ ಸಭೆಗಳ ಮೂಲಕ ಆಲಿಸಿ, ಸರ್ಕಾರದ ಹಂತಕ್ಕೆ ತಲುಪಿಸುವವರು, ಸರ್ಕಾರದ ಪರವಾಗಿ ನಿಂತು ಬಗೆಹರಿಸುವವರು ಗ್ರಾಮ ಪಂಚಾಯತ್‌ ನೌಕರರಾಗಿದ್ದಾರೆ.

ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಕಳೆದ ನಾಲ್ಕು ದಿನಗಳಿಂದ ತಮ್ಮ ಕರ್ತವ್ಯ ಬಹಿಷ್ಕರಿಸಿ ಅನಿರ್ಧಿಷ್ಟ ಮುಷ್ಕರ ನಡೆಸುತ್ತಿದ್ದು, ಬೆಂಗಳೂರಿನ ಪ್ರೀಡಂ ಪಾರ್ಕ್‌ನಲ್ಲಿ ಎರಡು ದಿನ ಈಗ ರಾಜ್ಯದ ಜಿಲ್ಲಾ ಪಂಚಾಯತ್ ಕೇಂದ್ರಗಳಲ್ಲಿ ಅನಿರ್ಧಿಷ್ಟ ಮುಷ್ಕರ ಆರಂಭಿಸಿದ್ದಾರೆ.

ರಾಜ್ಯದಲ್ಲಿ 5961 ಗ್ರಾಮ ಪಂಚಾಯತ್‌ಗಳಿದ್ದು, 1 ಲಕ್ಷಕ್ಕೂ ಅಧಿಕ ಗ್ರಾಮ ಪಂಚಾಯತ್ ಸದಸ್ಯರಿದ್ದಾರೆ. ಸದರಿ ಗ್ರಾಮ ಪಂಚಾಯತ್‌ಗಳು ಸ್ಥಳೀಯ ಸರ್ಕಾರಗಳಾಗಿ ಯಶಸ್ವಿಯಾಗಬೇಕು ಎಂದರೆ, ಸರ್ಕಾರಿ ಅಧಿಕಾರಿಗಳ ಜವಾಬ್ದಾರಿ ನಿಗದಿಯಾದಂತೆ ಇಲ್ಲಿಯೂ ಕಛೇರಿಯ ಮುಖ್ಯಸ್ಥರು ಎಂದರೆ ಗ್ರಾಮ ಪಂಚಾಯತ್‌ ಪಿಡಿಒ ಹಾಗೂ ಇತರ ಅಧಿಕಾರಿಗಳ ಜವಾಬ್ದಾರಿ ನಕ್ಷೆಯನ್ನು ಸಿದ್ಧ ಮಾಡಬೇಕು ಎಂಬುದು ಗ್ರಾಮ ಪಂಚಾಯತ್‌ ಜನಪ್ರತಿನಿಧಿಗಳ ಪ್ರಮುಖ ಬೇಡಿಕೆಯಾಗಿದೆ.

ಗ್ರಾಮ ಪಂಚಾಯತ್‌ ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರನ್ನು ರಾಜ್ಯ ಶಿಷ್ಟಾಚಾರ ವ್ಯಾಪ್ತಿಗೆ ತರಬೇಕು. ಕರ್ನಾಟಕದ ಗ್ರಾಮ ಪಂಚಾಯತ್‌ ವ್ಯವಸ್ಥೆ ಈಗ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಕೇರಳದಲ್ಲಿ ಗ್ರಾಪಂ ಸದಸ್ಯರ ಮಾಸಿಕ ಗೌರವಧನ 12 ಸಾವಿರ ರೂ. ಇದೆ. ಆದರೆ, ಕರ್ನಾಟದಲ್ಲಿ ಸದಸ್ಯರ ವೇತನ ಹಾಗೂ ಭತ್ಯೆಗಳು ಕಡಿಮೆ ಇವೆ. ಗ್ರಾಮ ಪಂಚಾಯತ್‌ ಸದಸ್ಯರಿಗೆ ಸಭಾ ಭತ್ಯೆ 300 ರೂ. ಇದ್ದು, ಅದನ್ನು ಕನಿಷ್ಠ 1 ಸಾವಿರ ರೂ.ಗೆ ಏರಿಸಬೇಕು. ಅಧ್ಯಕ್ಷರಿಗೆ 15 ಸಾವಿರ, ಉಪಾಧ್ಯಕ್ಷರಿಗೆ 12 ಸಾವಿರ ಹಾಗೂ ಸದಸ್ಯರಿಗೆ 10 ಸಾವಿರ ಮಾಸಿಕ ಗೌರವಧನ ನಿಗದಿ ಮಾಡಬೇಕು. ಆರೋಗ್ಯ ವಿಮೆ, ಉಚಿತ ಬಸ್‌ ಪಾಸ್‌ ಮುಂತಾದವನ್ನು ಒದಗಿಸಬೇಕು ಎಂದು ಮನವಿ ಮಾಡುತ್ತಿದ್ದಾರೆ.

ಗ್ರಾಮ ಪಂಚಾಯತ್‌ಗಳಿಗೆ ದಿನೇ ದಿನೇ ಜವಾಬ್ದಾರಿ ಹೆಚ್ಚು ಹೊರೆ ಆಗುತ್ತಿದೆ. ಗ್ರಾಮ ಪಂಚಾಯತ್‌ ಸಿಬ್ಬಂದಿಗಳ (ಬಿಲ್‌ಕಲೆಕ್ಟರ್‌, ಡಿಇಓ, ವಾಟರ್‌ಮ್ಯಾನ್‌, ಡಿ ದರ್ಜೆ ನೌಕರರು , ಸ್ವಚ್ಛತಾಗಾರರು) ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಜಿ.ಪಂ.ಗಳು ತಕ್ಷಣ ಪೂರ್ವಾನುಮತಿ ಕೊಡುವಂತಾಗಬೇಕು. ಖಾಲಿ ಇರುವ ಪಿಡಿಒ, ಕಾರ್ಯದರ್ಶಿ ಮತ್ತು ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗಳನ್ನು ತಕ್ಷಣ ತುಂಬಲು ಸರ್ಕಾರ ಕ್ರಮವಹಿಸಬೇಕು. ಗ್ರಾಮ ಪಂಚಾಯತ್‌ಗಳು ರಾಜ್ಯ ಸರ್ಕಾರದ ಲಾಂಛನ ಬಳಸುವಂತಿಲ್ಲ ಎಂಬ ಆದೇಶಮಾಡಿದ್ದು, ಇದರಿಂದ ಪಂಚಾಯತ್‌ ರಾಜ್‌ ಸಂಸ್ಥೆಗಳಿಗೆ ಪ್ರತ್ಯೇಕ ಲಾಂಛನ ಸಿದ್ಧ ಮಾಡಬೇಕು. ಆಗಾಗ ಗ್ರಾಮ ಸಭೆ ಕರೆಯುವಂತೆ ಸರ್ಕಾರದಿಂದ ಸೂಚನೆ ಬರುತ್ತಿದೆ. ಇದರಿಂದ ಗ್ರಾಮ ಪಂಚಾಯತ್‌ಗಳ ಇತರ ಆಡಳಿತ ಸೇವೆಗಳಿಗೆ ಹಿನ್ನಡೆಯಾಗುತ್ತಿದ್ದು, ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ ಪ್ರಕಾರ ಪ್ರತಿ 6 ತಿಂಗಳಿಗೊಮ್ಮೆ ಗ್ರಾಮ ಸಭೆ/ವಾರ್ಡ್‌ ಸಭೆ ನಡೆಸುವಂತಾಗಬೇಕು, ವಿವಿಧ ಯೋಜನೆಗಳ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಫಲಾನುಭವಿಗಳನ್ನು ಆಯ್ಕೆ ಮಾಡಿ, ಆನ್‌ಲೈನ್‌ನಲ್ಲಿ ವಸತಿ ರಹಿತರ ಪಟ್ಟಿ ಅಪ್‌ಲೋಡ್‌ ಮಾಡಿ, ಅಧ್ಯತೆ ಮೇಲೆ ಮನೆಗಳ ಸೌಲಭ್ಯ ಕೊಡುವ ವ್ಯವಸ್ಥೆ ಜಾರಿ ಮಾಡಬೇಕು.

ಗ್ರಾಮ ಪಂಚಾಯತ್‌ಗಳಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಕೆಡಿಪಿ ಸಭೆಗಳಿಗೆ ವಿವಿಧ ಇಲಾಖೆ ಅಧಿಕಾರಿಗಳು ಇತೆರೆ ಸಿಬ್ಬಂದಿಗಳನ್ನೆಲ್ಲ ಕಳಿಸುತ್ತಿದ್ದಾರೆ. ಇದರಿಂದ ಪಿಡಿಒ ವೃಂದವನ್ನು ಬಿ ದರ್ಜೆಗೆ ಉನ್ನತೀಕರಿಸಿ, ಕೆಡಿಪಿ ಸಭೆಗಳನ್ನು ಶಾಸನಬದ್ಧಗೊಳಿಸಬೇಕು ಎಂದು ಜನಪ್ರತಿನಿಧಿಗಳು ಒತ್ತಾಯಿಸುತ್ತಿದ್ದಾರೆ.

ಗ್ರಾಮ ಪಂಚಾಯತ್‌ ನೌಕರರಿಗೆ ಪಂಚಾಯತ್‌ ರಾಜ್‌ ಇಲಾಖೆಯಿಂದ ವೇತನ ಪಾವತಿಸಬೇಕು. ಇಎಸ್‌ಐ, ಪಿಎಫ್‌ ಜಾರಿ ಮಾಡಬೇಕು. ಕನಿಷ್ಠ 5 ಲಕ್ಷ ರೂ. ಆರೋಗ್ಯ ವಿಮೆ ನೀಡಬೇಕು ಹೀಗೆ ಅವರ ವಿವಿಧ ಪ್ರಮುಖ ಬೇಡಿಕೆಗಳಾಗಿವೆ. ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯಿಂದ ಹಿಡಿದು ಸ್ವಚ್ಛತಾ ಸಿಬ್ಬಂದಿವರೆಗೆ ಎಲ್ಲರೂ ಧರಣಿಗೆ ಇಳಿದಿರುವುದರಿಂದ ಗ್ರಾಮೀಣ ಭಾಗಗಳಲ್ಲಿ ಸಾರ್ವಜನಿಕರ ಸೇವೆಗಳಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯತ್‌ ರಾಜ್‌ ಸದಸ್ಯರ ಒಕ್ಕೂಟ, ಪಿಡಿಒ ಕ್ಷೇಮಾಭಿವೃದ್ಧಿ ಒಕ್ಕೂಟ ಹಾಗೂ ಇತರೇ ನೌಕರರು ಇಡೀ ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಹಾಗಾಗಿ ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಆರ್‌ಡಿಪಿಆರ್‌ ಕುಟುಂಬದ ವಿವಿಧ ಸಂಘಟನೆಗಳ ಮುಖ್ಯಸ್ಥರನ್ನು ಸಾಧ್ಯವಾದಷ್ಟು ಶೀಘ್ರವಾಗಿ ಆಹ್ವಾನಿಸಿ ಸಭೆ ನಡೆಸಿ ಅವರ ಬೇಡಿಕೆಗಳನ್ನು ಪರೀಶೀಲನೆ ನಡೆಸಬೇಕು ಎಂದು ಈ ಮೂಲಕ ಮನವಿ ಮಾಡುತ್ತಿದ್ದೇನೆ.

ಗ್ರಾಮ ಪಂಚಾಯತ್‌ ಸದಸ್ಯರ ಒಕ್ಕೂಟದ ಬೇಡಿಕೆಗಳು:-

ಗ್ರಾಮ ಪಂಚಾಯತ್‌ ಸದಸ್ಯರ ಒಕ್ಕೂಟ ಮತ್ತು ಪಿಡಿಒಗಳ ಒಕ್ಕೂಟ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದಮಟ್ಟದಲ್ಲಿ ನೂರಿತ ತಜ್ಞರ ಸಮಿತಿಯನ್ನು ರಚಿಸಿ, ವಿವಿಧ ರಾಜ್ಯಗಳ ಪಂಚಾಯತ್‌ ರಾಜ್‌ ವ್ಯವಸ್ಥೆಯ ಬಗ್ಗೆ ಅಧ್ಯಯನ ಮಾಡಿ, ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮದ ಆಶಯಗಳನ್ನು ಈಡೇರಿಸುವಂತೆ ತಕ್ಷಣ ತಜ್ಞರ ಸಮಿತಿಯನ್ನು ರಚಿಸಬೇಕು.

ಸಂವಿಧಾನದ ಪ್ರಕರಣ 243ಜಿ ಮತ್ತು ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ 1993 ರ ಪ್ರಕರಣ 58(4) ರನ್ವಯ ಗ್ರಾಮ ಪಂಚಾಯತ್‌ಗಳು ಸ್ವಯಂ ಸರ್ಕಾರಗಳಾಗಿ ಕಾರ್ಯ ನಿರ್ವಹಿಸಲು ಅಧಿನಿಯಮದ ಪ್ರಕರಣ 58 ಹಾಗೂ 1ನೇ ಅನುಸೂಚಿಯಲ್ಲಿರುವ ಜವಾಬ್ದಾರಿಗಳನ್ನು ನಿರ್ವಹಿಸಲು ಪ್ರಕರಣ 2(28ಸಿ) ರನ್ವಯ ಜವಾಬ್ದಾರಿ ನಕ್ಷೆ ರಚಿಸಬೇಕು. ಜವಾಬ್ದಾರಿ ನಕ್ಷೆಗೆ ಅನುಗುಣವಾಗಿ ಅಧಿಕಾರ, ಹಣಕಾಸು, ಮಾನವ ಸಂಪನ್ಮೂಲ ಹಾಗೂ ಜವಾಬ್ದಾರಿ ನಿರ್ವಹಿಸು ಸ್ವಾತಂತ್ರ್ಯವನ್ನು ಗ್ರಾಮ ಪಂಚಾಯತ್‌ಗಳಿಗೆ ವರ್ಗಾಯಿಸಬೇಕು ಹಾಗೂ ನೇಮಕವಾಗಿರುವ/ ವರ್ಗಾವಣೆಯಾಗಿರುವ ಬಂದಿರುವ ನೌಕರರು ಪಂಚಾಯತ್‌ಗಳಿಗೆ ಉತ್ತರದಾಯಿತ್ವ ಹಾಗೆ ಕ್ರಮ ಕೈಗೊಳ್ಳಬೇಕು.

ಗ್ರಾಮ ಪಂಚಾಯತ್‌ಗಳು ಸ್ವಯಂ ಸರ್ಕಾರಗಳಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುವಂತಾಗಲು ವಿವಿಧ ಹುದ್ದೆಗಳ ಜವಾಬ್ದಾರಿ ನಕ್ಷೆಯನ್ನು ರಚಿಸಬೇಕು.
ಗ್ರಾಮ ಪಂಚಾಯತ್‌ಗಳು ಸ್ಥಳೀಯ ಸರ್ಕಾರಗಳಾಗಿ ಕಾರ್ಯನಿರ್ವಹಿಸಲು ಗ್ರಾಮ ಪಂಚಾಯತ್‌ ಅಧ್ಯಕ್ಷರು, ಕಾರ್ಯನಿರ್ವಾಹಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುವಂತಾಗಲು ಪಿಡಿಒ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುವಂತಾಗಲು ಕಛೇರಿ ಕಾರ್ಯ ನಿರ್ವಹಣಾ ಕೈಪಿಡಿಯನ್ನು ರಚಿಸಬೇಕು.
ಕೆಡಿಪಿ ಸಭೆಗಳನ್ನು ಶಾಸನಬದ್ಧಗೊಳಿಸಬೇಕು. ಸ್ಥಾಯಿ ಸಮಿತಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸಲು ನಿಯಮಗಳನ್ನು ರೂಪಿಸಬೇಕು.

ಗ್ರಾಪಂ ಅಧ್ಯಕ್ಷರ ಗೌರವಧನವನ್ನು ಮಾಸಿಕ 15 ಸಾವಿರ ರೂ.ಗೆ ಉಪಾಧ್ಯಕ್ಷರ ಗೌರವಧನವನ್ನು ಮಾಸಿಕ 12 ಸಾವಿರ ರೂ.ಗೆ ಹಾಗೂ ಸದಸ್ಯರ ಗೌರವಧನವನ್ನು ಮಾಸಿಕ 10 ಸಾವಿರ ರೂ.ಗೆ ಹೆಚ್ಚಿಸಬೇಕು.
ಗ್ರಾಮ ಪಂಚಾಯತ್‌ಗಳ ಕುಡಿಯುವ ನೀರಿನ ಯೋಜನೆಯ ವಿದ್ಯುತ್‌ ಬಿಲ್‌ಗಳನ್ನು ಕಮರ್ಷಿಯಲ್‌ ಎಂದು ಪರಿಗಣಿಸಿ ವಿದ್ಯುತ್‌ ಕಂಪನಿಗಳು ಪೂರೈಸುತ್ತಿದ್ದು, ಇದು ಹೊರೆಯಾಗುತ್ತಿದೆ. ಇದರಿಂದ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕುಡಿಯುವ ನೀರಿನ ಯೋಜನೆಗಳಿಗೆ ಉಚಿತವಾಗಿ ವಿದ್ಯುತ್‌ ಒದಗಿಸಬೇಕು.
ಪಂಚಾಯತ್‌ ರಾಜ್ಯ ಸಂಸ್ಥೆಗಳಿಗೆ ಪ್ರತ್ಯೇಕ ಲಾಂಛನವನ್ನು ರಚಿಸಬೇಕು.

ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಬೇಡಿಕೆಗಳು:-

ರಾಜ್ಯದ ಎಲ್ಲ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳ ಹುದ್ದೆಯನ್ನು ಗೆಜೆಟ್‌ ಗ್ರೂಪ್‌ ಬಿ ದರ್ಜೆಗೆ ಏರಿಸಬೇಕು
ಏಳು ವರ್ಷ ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಪಿಡಿಒಗಳನ್ನು ಬೇರೆ ತಾಲೂಕಿಗೆ ವರ್ಗಾವಣೆ ಮಾಡುವ ನಿಯಮವನ್ನು ಕೈಬಿಡಬೇಕು.
ಪಿಡಿಒಗಳ ವರ್ಗಾವಣೆ ನಿಯಮಾವಳಿಗಳನ್ನು ಬದಲಾಯಿಸುವ ಮುನ್ನ ಕ್ಷೇಮಾಭಿವೃದ್ಧಿ ಸಂಘದ ಸಲಹೆಯನ್ನು ಪಡೆಯಬೇಕು.
ಪಿಡಿಒಗಳ ಜೇಷ್ಠತಾ ಪಟ್ಟಿಯನ್ನು ಕೂಡಲೇ ಅಂತಿಮಗೊಳಿಸಿ ಬಡ್ತಿ ನೀಡಲು ಕ್ರಮ ಕೈಗೊಳ್ಳಬೇಕು.

ಕರ ವಸೂಲಿಗಾರ, ಕ್ಲರ್ಕ್‌ ಕಂ ಡೇಟಾ ಎಂಟ್ರಿ ಆಪರೇಟರ್‌, ನೀರಗಂಟಿ, ಡಿ ದರ್ಜೆ ನೌಕರ, ಸ್ವಚ್ಛತಾಗಾರ ವೃಂದದ ಬೇಡಿಕೆಗಳು:-
ಗ್ರಾಮ ಪಂಚಾಯಿತಿಯ ಪಂಚ ನೌಕರರಿಗೆ ವೇತನಶ್ರೇಣಿ, ಸೇವಾ ಹಿರಿತನವನ್ನು ನಿಗದಿ ಮಾಡಿ ಪಂಚಾಯತ್‌ ರಾಜ್‌ ಇಲಾಖೆಯಿಂದಲೇ ನೇರವಾಗಿ ವೇತನ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು.
ಇಎಸ್‌ಐ ಪಿಎಫ್‌ ಜಾರಿ ಮಾಡಬೇಕು.
ಗ್ರಾಮ ಪಂಚಾಯತ್‌ ನೌಕರರಿಗೆ 5 ಲಕ್ಷದವರೆಗೆ ಆರೋಗ್ಯ ವಿಮೆಯನ್ನು ಜಾರಿ ಮಾಡಬೇಕು.
ಕಾರ್ಯದರ್ಶಿ ಗ್ರೇಡ್‌ 2 ಮತ್ತು ಎಸ್‌ಡಿಎಎಂ ಹುದ್ದೆಗಳಿಗೆ ಸರ್ಕಾರದಿಂದ ನೇರವಾಗಿ ನೇಮಕಾತಿ ಮಾಡಲಾಗುತ್ತಿದೆ. ಅದರ ಬದಲು ಈ ಹುದ್ದೆಗಳಿಗೆ ಕರ ವಸೂಲಿಗಾರ, ಕ್ಲರ್ಕ್‌ ಕಂ ಡೇಟಾ ಎಂಟ್ರಿ ಆಪರೇಟರ್‌ ವೃಂದದಿಂದ ಬಡ್ತಿ ನೀಡಬೇಕು.
ಗ್ರಾಮ ಪಂಚಾಯತ್‌ ನೌಕರರಿಗೆ ನಿವೃತ್ತಿಯ ನಂತರ 60 ತಿಂಗಳ ವೇತನವನ್ನು ಉಪಧನವಾಗಿ ನೀಡಬೇಕು.

ಗ್ರೇಡ್‌ 1 ಕಾರ್ಯದರ್ಶಿಗಳ ಬೇಡಿಕೆಗಳು:-

ಗ್ರೇಡ್‌ 1 ಕಾರ್ಯದರ್ಶಿಗಳ ಜೇಷ್ಠತಾ ಪಟ್ಟಿಯನ್ನು ತುರ್ತಾಗಿ ಪ್ರಕಟ ಮಾಡಿ, ಪಿಡಿಒ ವೃಂದಕ್ಕೆ ಮುಂಬಡ್ತಿ ನೀಡಬೇಕು
ಗ್ರೇಡ್‌ 1 ಕಾರ್ಯದರ್ಶಿ ವೃಂದದಿಂದ ಪಿಡಿಒ ವೃಂದಕ್ಕೆ ಮುಂಬಡ್ತಿ ನೀಡಲು ಈಗಿರುವ ಅನುಪಾತ ಶೇ.35 ರಿಂದ ಶೇ.60 ಕ್ಕೆ ಹೆಚ್ಚಿಸಬೇಕು.

ಗ್ರೇಡ್‌ 2 ಕಾರ್ಯದರ್ಶಿಗಳ ಬೇಡಿಕೆಗಳು:-

ಗ್ರೇಡ್‌ 2 ಕಾರ್ಯದರ್ಶಿಗಳು ಕಳೆದ 12 ರಿಂದ 14 ವರ್ಷದಿಂದ ಅದೇ ಹುದ್ದೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ವಿಶೇಷ ಪ್ರಕರಣ ಎಂದು ಪರಿಗಣಿಸಿ ಅವರಿಗೆ ಒಂದೇ ಬಾರಿ ನೇರ ಬಡ್ತಿ ನೀಡಬೇಕು.
ಗ್ರೇಡ್‌ 1 ಕಾರ್ಯದರ್ಶಿ ಹುದ್ದೆಗೆ ರಾಜ್ಯ ಮಟ್ಟದಲ್ಲಿ ಜೇಷ್ಠತಾ ಪಟ್ಟಿ ಮಾಡುವ ಆದೇಶವನ್ನು ಕೈಬಿಟ್ಟು ಜಿಲ್ಲಾ ಮಟ್ಟದಲ್ಲೇ ಜೇಷ್ಠತಾ ಪಟ್ಟಿ ಮಾಡಬೇಕು.
ಗ್ರೇಡ್‌ 2 ಕಾರ್ಯದರ್ಶಿ ಹುದ್ದೆಯಿಂದ ಗ್ರೇಡ್‌ 1 ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡುವ ಅನುಪಾತವನ್ನು ಶೇ. 33 ರಿಂದ ಶೇ. 80 ಕ್ಕೆ ಏರಿಸಬೇಕು.
ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಗ್ರಾಮ ಪಂಚಾಯತಗಳನ್ನು ಗ್ರೇಡ್‌ 1 ಗ್ರಾಮ ಪಂಚಾಯತ ಎಂದು ಮೇಲ್ದರ್ಜೆಗೆ ಏರಿಸಬೇಕು.

ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಬೇಡಿಕೆಗಳು:-

ಗ್ರೇಡ್‌ 2 ಗ್ರಾಮ ಪಂಚಾಯಿತಿಗಳಿಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಸೃಜಿಸಬೇಕು. ಗ್ರೇಡ್‌ 1 ಗ್ರಾಮ ಪಂಚಾಯತ್‌ಗಳಿಗೆ ಪ್ರಥಮ ದರ್ಜೆ ಲೆಕ್ಕ ಸಹಾಯಕ ಹುದ್ದೆಗಳನ್ನು ಸೃಜಿಸಿ ಪ್ರಸ್ತುತ ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಕಾರ್ಯ ನಿರ್ವಹಿಸುತ್ತಿರುವವರಿಗೆ ಬಡ್ತಿ ನೀಡಬೇಕು.
ಮುಂಬಡ್ತಿ ಮತ್ತು ನೇರ ನೇಮಕಾತಿ ಮೂಲಕ ಆಯ್ಕೆಯಾಗಿ ಸುಮಾರು 10 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕರಿಗೆ ಒಂದೇ ಬಾರಿಗೆ ಶೇ. 100 ರಷ್ಟು ಬಡ್ತಿ ನೀಡಿ ಗ್ರೇಡ್‌ 1 ಕಾರ್ಯದರ್ಶಿ ಹುದ್ದೆಗೆ ಪರಿಗಣಿಸಬೇಕು.

ಪಂಚಾಯತ್‌ ರಾಜ್‌ ಇಲಾಖೆಯ ಪತ್ರಾಂಕಿತ ಅಧಿಕಾರಿಗಳ ಬೇಡಿಕೆಗಳು:-

ಬೇರೆ ಇಲಾಖೆಯ ಅಧಿಕಾರಿಗಳನ್ನು ಪ್ರಭಾರ ನೀಡುವ ಬದಲು ಇಲಾಖೆಯ ಅಧಿಕಾರಿಗಳಿಗೇ ಹೆಚ್ಚುವರಿ ಪ್ರಭಾರ ಮತ್ತು ಕಿರಿಯ ಅಧಿಕಾರಿಗಳಿಗೆ ಸ್ವತಂತ್ರ ಪ್ರಭಾರ ಹುದ್ದೆಗಳನ್ನು ನೀಡಬೇಕು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹುದ್ದೆಯ ಶೇ. 33 ರಷ್ಟು ಹುದ್ದೆಗಳನ್ನು ಮೀಸಲಿರಿಸಿ, ಸುಮಾರು 15 ರಿಂದ 20 ವರ್ಷಗಳಿಂದ ಕಾರ್ಯ ನಿರ್ವಹಿಸಿ ಅಪಾರ ಅನುಭವ ಹೊಂದಿರುವ ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿಗಳಿಗೆ ಆ ಹುದ್ದೆಗಳನ್ನು ನೀಡಬೇಕು.
ಇಲಾಖೆಯ ಸಮಗ್ರ ವೃಂದ ಮತ್ತು ನೇಮಕಾತಿ ನೀಯಮಗಳನ್ನು ಕೂಡಲೇ ಪರಿಷ್ಕರಿಸಬೇಕು.
ಕಾರ್ಯ ನಿರ್ವಾಹಕ ಅಧಿಕಾರಿ, ಉಪ ವಿಭಾಗಾಧಿಕಾರಿ ಹುದ್ದೆಯ ವೇತನ ಶ್ರೇಣಿಯಲ್ಲಿನ ತಾರತಮ್ಯವನ್ನು ಸರಿಪಡಿಸಬೇಕು.

ಹಲವು ಬೇಡಿಕೆಗಳ ಪಟ್ಟಿಯನ್ನು ಗ್ರಾಮ ಪಂಚಾಯತ್‌ ಜನಪ್ರತಿನಿಧಿಗಳು, ನೌಕರರು ಸಲ್ಲಿಸಿದ್ದು, ಪರಿಶೀಲನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುತ್ತೇನೆ. ಇದರ ಅಧ್ಯನಕ್ಕೆ ತಜ್ಞರ ಮತ್ತು ಜನಪ್ರತಿನಿಧಿಗಳ ಹಾಗೂ ಪದಾಧಿಕಾರಿಗಳತಂಡ ರಚಿಸಿ ವರದಿ ಪಡೆಯುವಂತೆ ಮನವಿ ಮಾಡಿದ್ದಾರೆ.

BREAKING: ಹರಿಯಾಣ ಸಿಎಂ ನಯಾಬ್ ಸಿಂಗ್ ಸೈನಿ ಲಾಡ್ವಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು | Haryana CM Nayab Singh Saini wins

BREAKING : ಹರಿಯಾಣ ವಿಧಾನಸಭೆ ಚುನಾವಣೆ : ಕಾಂಗ್ರೆಸ್ ಅಭ್ಯರ್ಥಿ `ವಿನೇಶ್ ಪೋಗಟ್’ ಗೆ ಭರ್ಜರಿ ಗೆಲುವು | Vinesh Phogat

BIG NEWS: 10 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸಿದ ‘ಸ್ಟಾಫ್ ನರ್ಸ್’ ಖಾಯಂಗೊಳಿಸಿ: ‘ಕರ್ನಾಟಕ ಹೈಕೋರ್ಟ್’ ಮಹತ್ವದ ತೀರ್ಪು

Share. Facebook Twitter LinkedIn WhatsApp Email

Related Posts

BIG NEWS: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟ

09/05/2025 9:28 PM1 Min Read

ಅಂಗವಿಕಲರಿಗೆ ಗುಡ್ ನ್ಯೂಸ್: ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ

09/05/2025 9:26 PM1 Min Read

ಮಂಡ್ಯದಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಆರೋಪಿ ಜಾವೀದ್ ಬಂಧನ

09/05/2025 9:10 PM1 Min Read
Recent News

BREAKING: ಭಾರತ-ಪಾಕ್ ನಡುವೆ ಉದ್ವಿಗ್ನತೆ: ಪಿಎಸ್ಎಲ್ 2025ರ ಉಳಿದ ಪಂದ್ಯಗಳನ್ನು ಮುಂದೂಡಿಕೆ

09/05/2025 9:33 PM

BIG NEWS: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟ

09/05/2025 9:28 PM

ಅಂಗವಿಕಲರಿಗೆ ಗುಡ್ ನ್ಯೂಸ್: ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ

09/05/2025 9:26 PM
DRONES, SHELLING ATTACKS ON SEVERAL CITIES IN Jammu, Punjab, Rajasthan

BREAKING VIDEO : ಜಮ್ಮು, ಪಂಜಾಬ್‌, ರಾಜಸ್ಥಾನದ ಹಲವು ನಗರಗಳ ಮೇಲೆ ಮತ್ತೆ ಮತ್ತೆ ಡ್ರೋನ್, ಶೆಲ್‌ ದಾಳಿ

09/05/2025 9:11 PM
State News
KARNATAKA

BIG NEWS: ರಾಜ್ಯ ಸರ್ಕಾರಿ ನೌಕರರಿಗೆ ಮಹತ್ವದ ಮಾಹಿತಿ: ಸಾರ್ವತ್ರಿಕ ವರ್ಗಾವಣೆಗೆ ಮಾರ್ಗಸೂಚಿ ಪ್ರಕಟ

By kannadanewsnow0909/05/2025 9:28 PM KARNATAKA 1 Min Read

ಬೆಂಗಳೂರು: ರಾಜ್ಯ ಸರ್ಕಾರದಿಂದ ಸಾರ್ವತ್ರಿಕ ವರ್ಗಾವಣೆ ಮಾರ್ಗಸೂಚಿ ಪ್ರಕಟಿಸಲಾಗಿದೆ. ಇಂದಿನ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.…

ಅಂಗವಿಕಲರಿಗೆ ಗುಡ್ ನ್ಯೂಸ್: ಮುಂಬಡ್ತಿಯಲ್ಲಿ ಶೇ.4ರಷ್ಟು ಮೀಸಲಾತಿಗೆ ರಾಜ್ಯ ಸಚಿವ ಸಂಪುಟ ಅನುಮೋದನೆ

09/05/2025 9:26 PM

ಮಂಡ್ಯದಲ್ಲಿ ಪ್ರಧಾನಿ ಮೋದಿ ವಿರುದ್ಧ ಅವಹೇಳನಕಾರಿ ಪೋಸ್ಟ್: ಆರೋಪಿ ಜಾವೀದ್ ಬಂಧನ

09/05/2025 9:10 PM

ಮಂಡ್ಯದಲ್ಲಿ ಕಲುಷಿತ ಆಹಾರ ಪ್ರಕರಣ: ಗೋಕುಲ ವಿದ್ಯಾಸಂಸ್ಥೆಯ ಮಾನ್ಯತೆ‌ ರದ್ದು

09/05/2025 9:08 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.