ಶಿವಮೊಗ್ಗ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ತಾಲ್ಲೂಕು ಶಾಖೆಗೆ ನೂತನ ಪತ್ರಿಕಾ ಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಶಂಕುಸ್ಥಾಪನೆ ನೆರವೇರಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಅಣಲೆಕೊಪ್ಪದ ಸ್ತ್ರೀಶಕ್ತಿ ಭವನದ ಮೇಲ್ಭಾಗದಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಅಡಿಗಲ್ಲಿಗೆ ಅಕ್ಷತೆ ಹಾಕುವ ಮೂಲಕ ಶಂಕು ಸ್ಥಾಪನೆ ನೆರವೇರಿಸಿದರು.
ಈ ಬಳಿಕ ಮಾತನಾಡಿದಂತ ಅವರು, ನಾನು ಶಾಸಕರ ಅನುದಾನದಲ್ಲೇ ಪತ್ರಿಕಾ ಭವನವನ್ನು ನಿರ್ಮಾಣ ಮಾಡಲು ಮುಂದಾಗಿದ್ದೆ. ಆದರೇ ನಗರಸಭೆಯಿಂದ ತಾವೇ ನಿರ್ಮಿಸಿಕೊಡುವುದಾಗಿ ಆಯುಕ್ತ ಹೆಚ್.ಕೆ ನಾಗಪ್ಪ ಅವರು ಹೇಳಿದರು. ಹೀಗಾಗಿ ಇಂದು ಪತ್ರಿಕಾ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ಕಾರ್ಯ ನಡೆದಿದೆ. ನಗರಸಭೆಯಿಂದ ಪತ್ರಿಕಾ ಭವನ ನಿರ್ಮಾಣಕ್ಕಾಗಿ 10 ಲಕ್ಷ ಅನುದಾನವನ್ನು ಒದಗಿಸಿಕೊಡಲಾಗುತ್ತಿದೆ ಎಂದರು.
ಎಷ್ಟು ಸಾಧ್ಯವೋ ಅಷ್ಟು ಬೇಗ ಪತ್ರಿಕಾ ಭವನ ನಿರ್ಮಾಣ ಕಾಮಗಾರಿಯನ್ನು ಮುಗಿಸುವಂತೆ ನಗರಸಭೆ ಆಯುಕ್ತರಿಗೆ ಇದೇ ಸಂದರ್ಭದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಸೂಚಿಸಿದರು.
ಪತ್ರಕರ್ತರಿಗೆ ನನ್ನ ಸಹಕಾರ ಸದಾ ಇದೆ. ನನ್ನ ವಿರುದ್ಧವೂ ಬರೆಯುವ ಹಕ್ಕು ನಿಮಗಿದೆ. ಬರೆಯಿರಿ, ನೀವು ಸಂವಿಧಾನದ ನಾಲ್ಕನೇ ಅಂಗವಿದ್ದಂತೆ. ಅದಕ್ಕೇನು ಬೇಜಾರಿಲ್ಲ ಎಂದು ಹೇಳಿದರು.
ಸಾಗರ ನಗರಸಭೆ ಆಯುಕ್ತ ಹೆಚ್.ಕೆ ನಾಗಪ್ಪ ಮಾತನಾಡಿ ಪತ್ರಿಕಾ ಭವನ ನಿರ್ಮಾಣದ ಬಗ್ಗೆ ಈ ಹಿಂದೆಯೇ ಮನವಿ ಮಾಡಲಾಗಿತ್ತು. ಈ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿತ್ತು. ಶಾಸಕರ ಸೂಚನೆಯ ಮೇರೆಗೆ ನಗರಸಭೆಯಿಂದಲೇ ಅನುದಾನ ನೀಡುವ ಮೂಲಕ ಪತ್ರಿಕಾ ಭವನ ನಿರ್ಮಾಣ ಮಾಡಲಾಗುತ್ತಿದೆ. ಇನ್ನೂ ಹೆಚ್ಚಿನ ಅನುದಾನವನ್ನು ಒದಗಿಸಿ ಕೊಡಲಾಗುತ್ತದೆ. ಆದಷ್ಟು ಬೇಗ ಸ್ತ್ರೀ ಶಕ್ತಿ ಭವನದ ಮೇಲೆ ಪತ್ರಿಕಾ ಭವನ ನಿರ್ಮಾಣದ ಕಟ್ಟಡ ಕಾಮಗಾರಿ ಮುಗಿಸಲಾಗುತ್ತದೆ ಎಂಬುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸಾಗರ ತಾಲ್ಲೂಕು ಶಾಖೆಯ ಪ್ರಧಾನ ಕಾರ್ಯದರ್ಶಿ ಮಹೇಶ್ ಹೆಗೆಡೆ ಮಾತನಾಡಿ ಈ ಹಿಂದಿನ ಶಾಸಕರು ಇದ್ದಂತ ವೇಳೆಯಲ್ಲೇ ಪತ್ರಿಕಾ ಭವನ ನಿರ್ಮಾಣಕ್ಕೆ ಮನವಿ ಮಾಡಲಾಗಿತ್ತು. ಆದರೇ ಅವರು ಯಾಕೋ ಮನಸ್ಸು ಮಾಡಲಿಲ್ಲ. ಅಂದು ಪೌರಾಯುಕ್ತ ನಾಗಪ್ಪ ಅವರು ಅಂದಿನ ಶಾಸಕ ಹರತಾಳು ಹಾಲಪ್ಪ ಬಳಿಯಲ್ಲಿ ಮಾತನಾಡಿದ್ರು. ಅದಕ್ಕಾಗಿ ಬೆಂಗಳೂರಿಗೆ ನಮ್ಮನ್ನು ಕರೆದೊಯ್ದು, ಶಾಸಕರೊಂದಿಗೆ ಮಾತನಾಡಿಸುವಂತ ಪ್ರಯತ್ನ ಮಾಡಿದ್ರು. ಆದರೇ ಅದು ಫಲಪ್ರದವಾಗಲಿಲ್ಲ ಎಂದರು.
ಶಾಸಕ ಬೇಳೂರು ಗೋಪಾಲಕೃಷ್ಣ ಅವರನ್ನು ಪತ್ರಿಕಾ ಭವನ ನಿರ್ಮಾಣ ಮಾಡಿಕೊಡುವಂತೆ ಮನವಿ ಮಾಡಿದ ಕೂಡಲೇ ಸ್ಪಂದಿಸಿ, ಪೌರಾಯುಕ್ತರಿಗೆ ಸೂಚನೆ ನೀಡಿದ್ರು. ಸ್ತ್ರೀ ಶಕ್ತಿ ಭವನ ನಗರಸಭೆ ವ್ಯಾಪ್ತಿಯಲ್ಲಿ ಇದೆ ಎಂಬುದಾಗಿ ಹೇಳಿದ ನಂತ್ರ ಆ ಭವನದ ಮೇಲೆ ಪತ್ರಿಕಾ ಭವನ ನಿರ್ಮಿಸಿಕೊಡುವಂತ ಭರವಸೆ ನೀಡಿದ್ದರು. ಆ ಭರವಸೆಯಂತೆ ಇಂದು ಪತ್ರಿಕಾ ಭವನ ನಿರ್ಮಾಣಕ್ಕೆ ಶಂಕು ಸ್ಥಾಪನೆ ನೆರವೇರಿಸಿದ್ದಾರೆ. ಅವರಿಗೆ ಸಂಘದ ವತಿಯಿಂದ ಹೃದಯಪೂರ್ವಕ ಕೃತಜ್ಞತೆ, ಅಭಿನಂದನೆಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಪತ್ರಿಕಾ ಭವನ ನಿರ್ಮಾಣ ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿದಂತ ಶಾಸಕ ಬೇಳೂರು ಗೋಪಾಲಕೃಷ್ಣ, ನಗರಸಭೆ ಪೌರಾಯುಕ್ತ ಹೆಚ್.ಕೆ ಹಾಲಪ್ಪ ಅವರಿಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ, ಸಾಗರ ತಾಲ್ಲೂಕು ಶಾಖೆಯ ವತಿಯಿಂದ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಲಾಯಿತು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
ಕರ್ನಾಟಕದ ಹೆಮ್ಮೆಯ ‘KSRTC’ಗೆ ಬರೋಬ್ಬರಿ ’16 ರಾಷ್ಟ್ರಮಟ್ಟದ ಪ್ರಶಸ್ತಿ’ಗಳ ಸರಮಾಲೆ
ಬೆಂಗಳೂರಿಗೆ ‘ಶರಾವತಿ ನದಿ’ ನೀರು: ಜನರ ಅಭಿಪ್ರಾಯ ಪಡೆದು ಸರ್ಕಾರಕ್ಕೆ ಮಾಹಿತಿ- ಶಾಸಕ ಬೇಳೂರು ಗೋಪಾಲಕೃಷ್ಣ
ಬ್ಯಾಂಕ್ ಗ್ರಾಹಕರೇ ಗಮನಿಸಿ : `ಸೆಪ್ಟೆಂಬರ್’ ತಿಂಗಳಲ್ಲಿ ಬ್ಯಾಂಕುಗಳಿಗೆ 15 ದಿನ ರಜೆ!Bank Holidays