ಬೆಂಗಳೂರು : ಜಿಂದಾಲ್ ಕಂಪನಿಗೆ ಕಡಿಮೆ ದರದಲ್ಲಿ ಭೂಮಿ ಕೊಡಲು ಅಪ್ಪನ ಮನೆ ಆಸ್ತಿನಾ ಎಂಬ ಹೇಳಿಕೆಗೆ ಶಾಸಕ ಅರವಿಂದ್ ಬೆಲ್ಲದ್ ಸಿಎಂ ಸಿದ್ದರಾಮಯ್ಯಗೆ ಕ್ಷಮೆ ಕೇಳಿದ್ದಾರೆ.
ಜಿಂದಾಲ್ ಕಂಪನಿಗೆ ಕಡಿಮೆ ದರದಲ್ಲಿ ಭೂಮಿ ಕೊಡಲು ಇದೇನು ನಿಮ್ಮ ಅಪ್ಪನ ಮನೆ ಆಸ್ತಿನಾ ಎಂಬ ಹೇಳಿಕೆಗೆ ಸಿಎಂ ಸಿದ್ದರಾಮಯ್ಯಗೆ ಲಿಖಿತ ಕ್ಷಮಾಪಣಾ ಪತ್ರ ಬರೆದ ಶಾಸಕ ಅರವಿಂದ್ ಬೆಲ್ಲದ್ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಜಿಂದಾಲ್ ಕಂಪನಿಗೆ ಭೂಮಿ ಹಸ್ತಾಂತರದ ಕುರಿತು ಆ.24 ರಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ವಿಧಾನಸಭೆ ವಿಪಕ್ಷ ಉಪನಾಯಕರಾಗಿರುವ ಅರವಿಂದ್ ಬೆಲ್ಲದ್, ಕಡಿಮೆ ದರದಲ್ಲಿ ಜಿಂದಾಲ್ ಭೂಮಿ ಕೊಡಲು ಅದೇನು ಸಿಎಂ ಅಪ್ಪನ ಮನೆ ಆಸ್ತಿನಾ ಎಂಬ ಹೇಳಿಕೆ ನೀಡಿದ್ದರು.