ಹಾಸನ: ಡಿಟಿಡಿಸಿ ಕೊರಿಯರ್ ಶಾಪ್ ನಲ್ಲಿ ಮಿಕ್ಸಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ತನಿಖೆಯಲ್ಲಿ ಸ್ಪೋಟಕ ಮಾಹಿತಿ ಬಯಲಾಗಿದೆ. ಕೊಲೆ ಮಾಡುವ ಉದ್ದೇಶದಿಂದ ಮಿಕ್ಸಿಯಲ್ಲಿ ಸ್ಫೋಟಕ ಅಳವಡಿಸಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದಾರೆ. ಇನ್ನೂ, ಗಾಯಗೊಂಡ ಕೊರಿಯರ್ ಶಾಪ್ ಮಾಲೀಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರಕರಣದ ಕುರಿತು ಪೊಲೀಸರ ತನಿಖೆಯಲ್ಲಿ ಸ್ಫೋಟಕ ಸತ್ಯ ಬಯಲಾಗಿದೆ. ವಿಚ್ಚೇದಿತ ಮಹಿಳೆಯೊಬ್ಬರ ಹಿಂದೆ ಬಿದ್ದ ಯುವಕ ಪ್ರೀತಿಗೆ ಒಲ್ಲೆ ಎಂದ ಆಂಟಿಯನ್ನು ಮುಗಿಸಲು ಸ್ಕೆಚ್ ಹಾಕಿ ಮಿಕ್ಸಿ ಬಾಂಬ್ ಕಳುಹಿಸಿದ್ದನು. ಬೆಂಗಳೂರು ಮೂಲದ ಯುವಕನೊಬ್ಬ ಹಾಸನದ ಮಹಿಳೆಯ ಹಿಂದೆ ಬಿದ್ದಿದ್ದನು. ಆದರೆ ಆಂಟಿ ಆತನ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಳು. ಈ ವಿಚಾರಕ್ಕೆ ಈ ಹಿಂದೆ ಕೂಡ ಗಲಾಟೆ ನಡೆದಿದೆ ಎನ್ನಲಾಗಿದೆ. ತನ್ನ ವಿಳಾಸ ಬರೆಯದೇ ಈತ ಹಲವು ಬಾರಿ ಮಹಿಳೆಗೆ ಪತ್ರ , ವಸ್ತುಗಳನ್ನು ಕಳುಹಿಸಿದ್ದನು. ಆದರೆ ಇದ್ಯಾವುದಕ್ಕೂ ಮಹಿಳೆ ರಿಪ್ಲೈ ಮಾಡಲಿಲ್ಲ, ಇದರಿಂದ ರೊಚ್ಚಿಗೆದ್ದ ಯುವಕ ಮಿಕ್ಸರ್ ನಲ್ಲಿ ಸ್ಪೋಟಕ ಇಟ್ಟು ಕಳುಹಿಸಿದ್ದಾನೆ. ಆದರೆ ಈ ಸಲ ಬಂದ ಕೊರಿಯರ್ ಎಸೆಯದೇ ಮಹಿಳೆ ಪುನಃ ಅದನ್ನು ಕೊರಿಯರ್ ಶಾಪ್ ಗೆ ತಂದು ಕೊಟ್ಟಿದ್ದಾರೆ, ಹಾಗೂ ಇದನ್ನು ವಾಪಸ್ ಕಳುಹಿಸಲು ಹೇಳಿದ್ದಾರೆ. ಆದರೆ ಕೊರಿಯರ್ ಅಂಗಡಿಯವರ 350 ರೂ ಶುಲ್ಕ ಕೇಳಿದ್ದಾನೆ. ಇದಕ್ಕೆ ಒಪ್ಪದ ಮಹಿಳೆ ಏನಾದರೂ ಮಾಡಿಕೊಳ್ಳಿ ನೀವು ಎಂದು ಕೊರಿಯರ್ ಅಲ್ಲೇ ಬಿಟ್ಟು ತೆರಳಿದ್ದಾಳೆ. ನಂತರ ಕೊರಿಯರ್ ಅಂಗಡಿಯವ ಇದರಲ್ಲಿ ಏನಿದೆ ಎಂದು ಕುತೂಹಲದಿಂದ ಪಾರ್ಸೆಲ್ ಬಿಚ್ಚಿದ್ದಾನೆ, ಆಗ ಮಿಕ್ಸಿ ಸ್ಪೋಟಗೊಂಡಿದೆ.
ನಗರದ ಕೆ ಆರ್ ಪುರಂ ಬಡಾವಣೆಯಲ್ಲಿರುವ ಡಿಟಿಡಿಸಿ ಕೊರಿಯರ್ ಕಚೇರಿಯಲ್ಲಿ ಮಿಕ್ಸಿ ಬ್ಲಾಸ್ಸ್ ಆಗಿದೆ. ಕಚೇರಿ ಮಾಲೀಕ ಶಶಿ ಎಂಬುವರ ಬಲಗೈ ಐದು ಬೆರಳುಗಳು ಸಂಪೂರ್ಣ ತುಂಡಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಿಕ್ಸಿ ಸ್ಪೋಟ ಪ್ರಕರಣ ಸಂಬಂಧ ಓರ್ವ ಮಹಿಳೆ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಎಸ್ ಪಿ ಹರಿರಾಮ್ ಹೇಳಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಪೊಲೀಸರು ಓರ್ವ ಮಹಿಳೆ ಸೇರಿ ಇಬ್ಬರನ್ನು ವಿಚಾರಣೆಗೊಳಪಡಿಸಲಾಗಿದೆ. ಸ್ಪೋಟದ ಬಳಿಕ ದೊರೆತ ಮಾಹಿತಿ ಆಧರಿಸಿ ಇಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್.ಪಿ ಹರಿರಾಮ್ ಮಾಹಿತಿ ನೀಡಿದ್ದಾರೆ.
Eclipses : 2023ರಲ್ಲಿ ಸಂಭವಿಸೋ ‘ಸೂರ್ಯ ಗ್ರಹಣ’ & ‘ಚಂದ್ರ ಗ್ರಹಣ’ ಎಷ್ಟು.? ಪೂರ್ಣ ವಿವರ ಇಲ್ಲಿದೆ.!
BIGG NEWS : ಜ. 27ರಿಂದ 3 ದಿನ ಅದ್ದೂರಿ ‘ಹಂಪಿ ಉತ್ಸವ’ ನಡೆಸಲು ರಾಜ್ಯ ಸರ್ಕಾರ ತೀರ್ಮಾನ |Hampi Utsav 2023