ನರ್ಮದಾಪುರಂ (ಮಧ್ಯಪ್ರದೇಶ): ಮಧ್ಯಪ್ರದೇಶದ ನರ್ಮದಾಪುರಂನ ಪಚ್ಮರ್ಹಿಯಲ್ಲಿ ತರಬೇತಿ ಪಡೆಯುತ್ತಿದ್ದ ಕೇರಳ ಮೂಲದ ಸೇನಾ ಕ್ಯಾಪ್ಟನ್ ನಾಪತ್ತೆಯಾಗಿದ್ದರು. ಇದೀಗ ಮೂರು ದಿನಗಳ ನಂತರ ಇದೀಗ ಅವರ ಶವ ನದಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಅವರ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ.
ಕೇರಳದ ಎರ್ನಾಕುಲಂ ಜಿಲ್ಲೆಯ ಮಾಮಂಗಲಂ ಮೂಲದ ಕ್ಯಾಪ್ಟನ್ ನಿರ್ಮಲ್ ಶಿವರಾಜನ್ (32) ಅವರು ನಾಪತ್ತೆಯಾದಾಗ ಪಚ್ಮರ್ಹಿಯಲ್ಲಿರುವ ಆರ್ಮಿ ಎಜುಕೇಶನ್ ಕಾರ್ಪ್ಸ್ (ಎಇಸಿ) ಕೇಂದ್ರದಲ್ಲಿ ತರಬೇತಿ ಪಡೆಯುತ್ತಿದ್ದರು ಎಂದು ಮಖನ್ ನಗರ ಉಪ ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್ಡಿಒಪಿ) ಮದನ್ ಮೋಹನ್ ಸಮರ್ ತಿಳಿಸಿದ್ದಾರೆ.
ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಶಿವರಾಜನ್ ತನ್ನ ಪತ್ನಿಯನ್ನು ಭೇಟಿಯಾಗಿ ಆಗಸ್ಟ್ 15 ರಂದು ಕಾರಿನಲ್ಲಿ ವಾಪಸ್ ಆಗುತ್ತಿದ್ದರು. ಈ ವೇಳೆ ಕಾರಿನ ಸಮೇತ ನದಿಗೆ ಬಿದ್ದಿದ್ದಾರೆ. ಕ್ಯಾಪ್ಟನ್ ಮೃತದೇಹವು ನರ್ಮದಾಪುರಂ ಜಿಲ್ಲಾ ಕೇಂದ್ರದಿಂದ ಸುಮಾರು 40 ರಿಂದ 45 ಕಿಮೀ ದೂರದಲ್ಲಿರುವ ಮಖನ್ ನಗರ ತಹಸಿಲ್ನ ನಸೀರಾಬಾದ್ ರಸ್ತೆಯಲ್ಲಿರುವ ಬಚ್ವಾಡ ನದಿಯಲ್ಲಿ ಮರದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಸೇನಾಧಿಕಾರಿಯ ಕಾರು ಕೂಡ ಅವರ ಮೃತದೇಹದಿಂದ ಸುಮಾರು ಎರಡು ಕಿಲೋಮೀಟರ್ ದೂರದಲ್ಲಿ ನದಿಯಲ್ಲಿ ಪತ್ತೆಯಾಗಿದೆ.
ಮರಣೋತ್ತರ ಪರೀಕ್ಷೆಯ ನಂತರ ಸೇನಾಧಿಕಾರಿಯ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.
Big news: ಬಿಬಿಎಂಪಿಯ ಕಲ್ಯಾಣ ಕಾರ್ಯಕ್ರಮಗಳಡಿ ಆನ್ಲೈನ್ ಮುಖಾಂತರ ಅರ್ಜಿಗಳ ಆಹ್ವಾನ!