ಹಾಸನ: ಜಿಲ್ಲೆಯ ಕೆ.ಆರ್ ಪುರಂನಲ್ಲಿ ಹಾಡಹಗಲೇ ಇಬ್ಬರು ದುಷ್ಕರ್ಮಿಗಳು ಪಿಸ್ತೂಲ್ ಕೈಯಲ್ಲಿ ಹಿಡಿದು ಬಿಜೆಪಿ ನಾಯಕನ ಮನೆಗೆ ನುಗ್ಗಿರುವ ಘಟನೆ ನಡೆದಿದೆ.
ಬಿಜೆಪಿ ನಾಯಕ ಡಿ.ಟಿ.ಪ್ರಕಾಶ್ ಮನೆಗೆ ಇಬ್ಬರು ದುಷ್ಕರ್ಮಿಗಳು ಮಾಸ್ಕ್ ಧರಿಸಿ ಬಂದಿದ್ದು ಬೆಲ್ ಮಾಡಿದ್ದಾರೆ. ಆಗ ಮನೆಯಲ್ಲಿ ಅವರ ತಾಯಿ ಒಬ್ಬರೆ ಇದ್ದರು ಎಂದು ಹೇಳಲಾಗಿದೆ. ದುಷ್ಕರ್ಮಿಗಳು ಅವರಿಗೆ ಒಂದು ಪಾರ್ಸೆಲ್ ಎಂದು ರಂಗಮ್ಮ ಅವರಿಗೆ ಕವರ್ ಕೊಟ್ಟಿದ್ದಾರೆ. ಈ ವೇಳೆ ತಾಯಿಯಕುತ್ತಿಗೆಗೆ ಕೈಹಾಕಿ ಹಣೆಗೆ ಪಿಸ್ತೂಲ್ ಇಟ್ಟಿದ್ದಾನೆ. ಇದರಿಂದ ಗಾಬರಿಗೊಂಡ ರಂಗಮ್ಮ ಜೋರಾಗಿ ಕಿರುಚಾಡಿದ್ದು, ಕೂಡಲೇ ಕಾಂಪೌಂಡ್ ಹಾರಿ ಇಬ್ಬರು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಹಾಸನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.