ಬಾಗಲಕೋಟೆ : ರಾಜಕಾರಣದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಸಹಜ ಏಕತೆ ಮುಖ್ಯವಾಗಿದೆ. ಬಸನಗೌಡ ಪಾಟೀಲ ಹಾಗೂ ನಾನು ಒಂದೇ ಜಿಲ್ಲೆಯವರು ಎಂದು ಮುರುಗೇಶ್ ನಿರಾಣಿ ಹೇಳಿಕೆ ನೀಡಿದರು. ಬಾಗಲಕೋಟೆ ಜಿಲ್ಲೆಯ ಅರಬಕವಿ ಬನಹಟ್ಟಿ ತಾಲೂಕಿನ ಎಲ್ಲಟ್ಟಿ ಗ್ರಾಮದಲ್ಲಿ ನಿನ್ನೆ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೇನೆ ಮಾಜಿ ಸಚಿವ ಮುರುಗೇಶ್ ನಿರಾಣಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ರನ್ನು ಹಾಡಿ ಹೊಗಳಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಮುರುಗೇಶ್ ನಿರಾಣಿ ಹಾಡಿ ಹೊಗಳಿದ್ದಾರೆ. ಯತ್ನಾಳ ಗುಡ್ ಬ್ಯಾಟ್ಸ್ಮನ್ ಬೌಲರ್ ಮತ್ತು ವಿಕೆಟ್ ಕೀಪರ್ ಆಗಿದ್ದಾರೆ. ಶ್ರೇಷ್ಠ ಬ್ಯಾಟ್ಸಮನ್ ಆಗಿರುವ ನೀವು ಎಲ್ಲ ಬೌಲರ್ ಗಳಿಗೆ ಶಿಕ್ಷೆ ಹೊಡೆಯಬೇಡಿ. ಒಳ್ಳೆಯ ಬೌಲರ್ ಗೆ ಮಾತ್ರ ಸಿಕ್ಸ್ ಹೊಡೆಯಿರಿ. ರಾಜಕಾರಣದಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಸಹಜ ಏಕತೆ ಮುಖ್ಯ ಬಸನಗೌಡ ಹಾಗೂ ನಾನು ಒಂದೇ ಜಿಲ್ಲೆಯವರು ಎಂದು ಮುರುಗೇಶ್ ನಿರಾಣಿ ಹೇಳಿಕೆ ನೀಡಿದ್ದು ಈ ಒಂದು ಹೇಳಿಕೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.








