ಕಾರವಾರ : ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಯಕ್ಷಗಾನ ವೀಕ್ಷಿಸಿ ಅದರ ವೇಷ ತೊಟ್ಟು ಜನರ ಗಮನ ಸೆಳೆದಿದ್ದಾರೆ.
ಭಟ್ಕಳದ ಜಾಲಿಯಲ್ಲಿರುವ ತಮ್ಮ ಮನೆಯಲ್ಲಿ ಸ್ಥಳೀಯ ಶಾಸಕ ಸುನೀಲ್ ನಾಯ್ಕ ಭೀಷ್ಮ ವಿಜಯ ಯಕ್ಷಗಾನ ಪ್ರದರ್ಶನ ಏರ್ಪಡಿಸಿದ್ದರು. ಹೀಗಾಗಿ ಜಾಲಿಗೆ ಭೇಟಿ ನೀಡಿದ ಡಾ.ಸುಧಾಕರ್ ರಾತ್ರಿಯಿಡೀ ಯಕ್ಷಗಾನ ವೀಕ್ಷಿಸಿದ್ದಾರೆ. ನಂತರ ಪೋಷಾಕು ತೊಟ್ಟು ಗಮನ ಸೆಳೆದಿದ್ದಾರೆ. ಸಚಿವರಿಗೆ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಮತ್ತಿತರರು ಸಾಥ್ ನೀಡಿದ್ದಾರೆ. ಒಂದೇ ಸಮನೆ ಮಳೆಯಾಗುತ್ತಿದ್ದರೂ, ಅದನ್ನು ಲೆಕ್ಕಿಸದೆ ಪ್ರಸಂಗ ಮುಗಿಯುವವರೆಗೂ ಕುಳಿತು ಪ್ರದರ್ಶನ ವೀಕ್ಷಿಸಿ ಸಚಿವರು ಗಮನ ಸೆಳೆದಿದ್ದಾರೆ.
ಡಾ.ಸುಧಾಕರ್ ಮಂಗಳವಾರ ಉತ್ತರ ಕನ್ನಡ ಜಿಲ್ಲೆಗೆ ಭೇಟಿ ನೀಡಿದ್ದರು. ಈ ವೇಳೆ ಕುಮಟಾದಲ್ಲಿ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಅಧಿಕಾರಿಗಳ ಸಭೆ ನಡೆಸಿ, ನಂತರ ಭಟ್ಕಳ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳ ಪರಿಶೀಲನೆ ನಡೆಸಿದರು.ಈ ಕುರಿತು ಸುಧಾಕರ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.
”ಯಕ್ಷಗಾನ ನಮ್ಮ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಹೆಗ್ಗುರುತು, ತುಳುನಾಡಿನ ಜನಜೀವನದ ಅವಿಭಾಜ್ಯ ಅಂಗ. ಕರಾವಳಿಗೆ ಭೇಟಿ ನೀಡಿದ ಮೇಲೆ ಯಕ್ಷಗಾನ ನೋಡದೆ ಹೋದರೆ ಆ ಪ್ರವಾಸ ಸಂಪೂರ್ಣವಾಗುವುದಿಲ್ಲ. ನೆನ್ನೆ ರಾತ್ರಿ ಭಟ್ಕಳ ಶಾಸಕ ಶ್ರೀ ಸುನಿಲ್ ನಾಯ್ಕ್ ಅವರ ಮನೆಯಲ್ಲಿ ಯಕ್ಷಗಾನ ವೀಕ್ಷಿಸಿ ದೈವಿಕಲೆಯ ವೇಷ ಹಾಕುವ ಅವಕಾಶ ದೊರೆತದ್ದು ನನ್ನ ಪುಣ್ಯ” ಎಂದು ಟ್ವೀಟ್ ಮಾಡಿದ್ದಾರೆ.
ಯಕ್ಷಗಾನ ನಮ್ಮ ಕರಾವಳಿ ಕರ್ನಾಟಕದ ಸಾಂಸ್ಕೃತಿಕ ಹೆಗ್ಗುರುತು, ತುಳುನಾಡಿನ ಜನಜೀವನದ ಅವಿಭಾಜ್ಯ ಅಂಗ.
ಕರಾವಳಿಗೆ ಭೇಟಿ ನೀಡಿದ ಮೇಲೆ ಯಕ್ಷಗಾನ ನೋಡದೆ ಹೋದರೆ ಆ ಪ್ರವಾಸ ಸಂಪೂರ್ಣವಾಗುವುದಿಲ್ಲ. ನೆನ್ನೆ ರಾತ್ರಿ ಭಟ್ಕಳ ಶಾಸಕ ಶ್ರೀ ಸುನಿಲ್ ನಾಯ್ಕ್ ಅವರ ಮನೆಯಲ್ಲಿ ಯಕ್ಷಗಾನ ವೀಕ್ಷಿಸಿ ದೈವಿಕಲೆಯ ವೇಷ ಹಾಕುವ ಅವಕಾಶ ದೊರೆತದ್ದು ನನ್ನ ಪುಣ್ಯ. pic.twitter.com/I9AtP2GT4u
— Dr Sudhakar K (@mla_sudhakar) October 12, 2022
ಮಂಗಳೂರಿನಲ್ಲಿ ಶಾರದಾ ಮಹೋತ್ಸವದ ಬ್ಯಾನರ್ ಹರಿದ ಪ್ರಕರಣ ; ಕರಾವಳಿಯಲ್ಲಿ ಸೋಜಿಗದ ಸಂಗತಿ ಬಯಲು
BIGG NEWS: ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಆರೋಗ್ಯ ವಿಚಾರಿಸಿದ ಡಾ. ಡಿ ವೀರೇಂದ್ರ ಹೆಗ್ಗಡೆ