ಬಾಗಲಕೋಟೆ:ಉತ್ತರ ಕರ್ನಾಟಕ ಪ್ರತ್ತೇಕ ರಾಜ್ಯದ ಬಗ್ಗೆ ಮತ್ತೆ ಪುನರುಚ್ಛರಿಸಿದ್ದೇನೆ. ಉತ್ತರ ಕರ್ನಾಟಕ ಯಾವಾಗ ಅಭಿವೃದ್ದಿ ಆಗಿಲ್ಲ ಅಂದರೆ ಅಲ್ಲಯವರೆಗೂ ಕೂಗು ಎತ್ತುತ್ತೇನೆ ಎಂದು ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
BREAKING NEWS: PSI ನೇಮಕಾತಿ ಹಗರಣ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಐಪಿಎಸ್ ಅಧಿಕಾರಿ…!
ಆಲಮಟ್ಟಿಯಲ್ಲಿ ಮಾತನಾಡಿದ ಅವರು, ಇದು ಇವತ್ತಿಂದು ಅಲ್ಲ. ಕಳೆದ 20 ವರ್ಷದಿಂದ ಹೋರಾಟ ಮಾಡ್ತಿದ್ದೇನೆ.
ಈ ಭಾಗದ ಅಭಿವೃದ್ದಿ ಆಗದೇ ಇದ್ದಾಗ ನನ್ನ ಕೂಗು ಇರುತ್ತೆ.ಅಭಿವೃದ್ದಿ ದೃಷ್ಟಿಯದ ಅನ್ಯಾಯ ಆಗಬಾರದು.ಅನ್ಯಾಯ ಆದಾಗ ಪ್ರತ್ಯೇಕ ರಾಜ್ಯದ ಕೂಗು ಇರುತ್ತೆ.ಪ್ರತ್ಯೇಕ ರಾಜ್ಯ ಕೂಗಿನಲ್ಲಿ ಕತ್ತಿ ಒಂಟಿ ಕೂಗು ವಿಚಾರ.ಒಂಟಿ ಕೂಗು ಅಂದ್ರೆ ನನಗೆ ಅದು ಅನ್ನಿಸುತ್ತೆ.ಕಾರಣ ನಾನು 9 ಸಾಲ ಶಾಸಕ ಆಗಿದ್ದವನು…ಈ ಭಾಗದಲ್ಲಿ ತೊಂದ್ರೆ ಆದಾಗ ಎಲ್ಲಾ ಜನರು ಸ್ಪಂದಿಸಬೇಕು.ಸ್ಪಂದಿಸಿದ್ರು ಅಷ್ಟೆ, ಇಲ್ಲದಿದ್ರೂ ಅಷ್ಟೆ ನನ್ನ ಕೂಗು ಬಿಡಲ್ಲ ಎಂದಿದ್ದಾರೆ.
BREAKING NEWS: PSI ನೇಮಕಾತಿ ಹಗರಣ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಮಾಜಿ ಐಪಿಎಸ್ ಅಧಿಕಾರಿ…!
ಕತ್ತಿ ಅವರ ಕೂಗಿಗೆ ಉತ್ತರದ ಶಾಸಕರ ಬೆಂಬಲ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಎಲ್ಲಾರೂ ಇದ್ದಾರೆ, ಆದರೆ ಯಾತು ಬಾಯಿ ಬಿಡುವುದಿಲ್ಲ. ಅವರು ಮರಳಿ ಶಾಸಕರಾಗಬೇಕು, ಟಿಕೆಟ್ ತಗೋಬೇಕು ಎಲ್ಲಾ ಅದಾವು.
ನಾನು ಯಾವುದು ತಗೋಬೇಕಾಗಿಲ್ಲ.ನಾನು ಬಿಜೆಪಿಯಲ್ಲಿ ಇದ್ದೇನೆ. ಇನ್ನೂ 15 ವರ್ಷ ಶಾಸಕ ಆಗಿ ಇರ್ತೇನೆ.
ಈ ಭಾಗದಲ್ಲಿ ತೊಂದ್ರೆ ಆದಾಗ ನನ್ನ ಕೂಗು ಇರೋದೆನೆ. ಅದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಬೇಡ ಎಂದು ಹೇಳಿದ್ದಾರೆ.