ಬಳ್ಳಾರಿ: ವಿಮ್ಸ್ ದುರುಂತ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಇನ್ನು ಘಟನೆ ನಡೆದು ಇಷ್ಟು ದಿನವಾದ್ರೂ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಮಾತ್ರ ವಿಮ್ಸ್ ಆಸ್ಪತ್ರೆಗೆ ಭೇಟಿ ಕೊಟ್ಟಿಲ್ಲ ಎಂದು ಸ್ವಪಕ್ಷಿಯ ಶಾಸಕರು ಮುಗುಬಿದ್ದಿದ್ದರು. ಸಚಿವರ ನಿರ್ಲಕ್ಷ್ಯದಿಂದಲೇ ಘಟನೆ ನಡೆದಿರೋದು ಎಂಬ ಆರೋಪವೂ ಕೇಳಿಬಂದಿತ್ತು.
BREAKING NEWS: ಕಲಬುರ್ಗಿಯಲ್ಲಿ ಬೆಳ್ಳಂಬೆಳಗ್ಗೆ ಯುವಕನ ಬರ್ಬರ ಹತ್ಯೆ
ಆರೋಪಗಳ ಬಳಿಕ ಎಚ್ಚೆತ್ತಿರುವ ಸುಧಾಕರ್ ಇಂದು ವಿಮ್ಸ್ಗೆ ಭೇಟಿ ನೀಡಲಿದ್ದಾರೆ. ಘಟನೆ ಬಗ್ಗೆ ಅಧಿಕಾರಿಗಳಿಂದ ವಿವರಣೆ ಪಡೆಯಲಿದ್ದಾರೆ. ವಿಮ್ಸ್ ದುರಂತ ಬಗ್ಗೆ ಶ್ರೀರಾಮುಲು ಮತ್ತೊಮ್ಮೆ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. ಆಸ್ಪತ್ರೆಯಲ್ಲಿ ಕರೆಂಟ್ ಸಮಸ್ಯೆಯಿಂದ ಸಮಸ್ಯೆ ಆಗಿಲ್ಲ. ಆಸ್ಪತ್ರೆಯಲ್ಲಿ ವೆಂಟಿಲೇಟರ್ ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಆಕ್ಸಿಜನ್ ಸರಬರಾಜಿಗೆ ವಿದ್ಯುತ್ ಸಂಪರ್ಕ ಬೇಕಿಲ್ಲ. ಯಾವುದೇ ಕೇಬಲ್ ಬ್ಲಾಸ್ಟ್ ಆಗಿಲ್ಲ ಎಂದಿದ್ದಾರೆ.