ಬಳ್ಳಾರಿ: ನಗರದಲ್ಲಿ ಶನಿವಾರ ಮುನಿಸಿಪಲ್ ಮೈದಾನದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ಸಮಾವೇಶ ನಡೆದಿತ್ತು. ಸಮಾವೇಶದ ನಂತರ ಮೈದಾನದಲ್ಲಿ ಕಸದ ರಾಶಿ ಬಿದ್ದಿತ್ತು. ಹೀಗಾಗಿ ಭಾನುವಾರ ಮಧ್ಯಾಹ್ನ ಸಚಿವ ಶ್ರೀರಾಮುಲು ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ, ಮಾಜಿ ಸಂಸದೆ ಜೆ.ಶಾಂತಾ ಸೇರಿದಂತೆ ಹಲವು ನಾಯಕರು ಸ್ವಚ್ಛಗೊಳಿಸಿದರು.
BIG BREAKING NEWS: ಕೆರೆ ಕಟ್ಟೆಗಳ ನಿರ್ಮಾಣದ ಸರದಾರ ಎಂದೇ ಖ್ಯಾತರಾಗಿದ್ದ `ಕಲ್ಮನೆ ಕಾಮೇಗೌಡʼ ಇನ್ನಿಲ್ಲ
ಬೆಳಗ್ಗೆ ಮೈದಾನಕ್ಕೆ ಬಂದಿದ್ದ ಜನ ಅಲ್ಲಿನ ಅಸ್ವಚ್ಛತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗೆ ಗುರಿಯಾಗಿತ್ತು. ಸಂಜೆಯಾದರೂ ಕಾಂಗ್ರೆಸ್ ಮೈದಾನವನ್ನು ಸ್ವಚ್ಛ ಮಾಡದಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು, ನಗರ ಶಾಸಕ ಸೋಮಶೇಖರ್ ರೆಡ್ಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಗೋನಾಳ್ ಮುರಹರಗೌಡ ಮೊದಲಾದವರು ಟ್ರ್ಯಾಕ್ಟರ್ ತರಿಸಿ ಮೈದಾನದಲ್ಲಿದ್ದ ಪ್ಲಾಸ್ಟಿಕ್ ಕವರ್ ಸೇರಿದಂತೆ ಕಸವನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿದರು.
BIG BREAKING NEWS: ಕೆರೆ ಕಟ್ಟೆಗಳ ನಿರ್ಮಾಣದ ಸರದಾರ ಎಂದೇ ಖ್ಯಾತರಾಗಿದ್ದ `ಕಲ್ಮನೆ ಕಾಮೇಗೌಡʼ ಇನ್ನಿಲ್ಲ
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ‘ಕಾಂಗ್ರೆಸ್ನವರು ಹೊಲಸು ಮಾಡಿ, ರಾಡಿ ಮಾಡಿದ್ದಾರೆ. ಸೋಮವಾರ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು. ರಾಜಕಾರಣಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಬರಬಾರದೆಂದು ಮತ್ತು ಪ್ರಧಾನಿ ಮೋದಿಯವರ ಕರೆಯಾಗಿರುವ ಸ್ವಚ್ಛ ಭಾರತ ಅಭಿಯಾನ ಹಿನ್ನೆಲೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮೈದಾನವನ್ನು ಸ್ವಚ್ಛ ಮಾಡಿದ್ದೇವೆ ಎಂದರು.