ಕೊಪ್ಪಳ : ತಂಗಡಗಿ ನನ್ನ ಬಳಿ ಹಣ ತೆಗೆದುಕೊಂಡು ಬಂದು ಚುನಾವಣೆಯಲ್ಲಿ ಗೆದ್ದಿದ್ದಾನೆ. ತಂಗಡಗಿಯನ್ನ ಮೊದಲ ಬಾರಿಗೆ ಮಂತ್ರಿ ಮಾಡಿದ್ದು ನಾನು ಎಂದು ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಜನಾರ್ದನ ರೆಡ್ಡಿ ಸಚಿವ ಶಿವರಾಜ್ ತಂಗಡಿ ವಿರುದ್ಧ ಗಂಭೀರ ಆರೋಪ ಮಾಡಿದರು.
ಮೋದಿ ಬಗ್ಗೆ ಮಾತನಾಡಿದ ಸಚಿವ ಶಿವರಾಜ್ ತಂಗಡಗಿ ವಿರುದ್ಧ ವಾಗ್ದಾಳಿ ನಡೆಸಿದ ಜನಾರ್ಧನ್ ರೆಡ್ಡಿ ಬಿಜೆಪಿಗೆ ವೋಟ್ ಹಾಕುವ ಮೂಲಕ ಕಪಾಳಕ್ಕೆ ಹೊಡೆದಂತೆ ಆಗಬೇಕು. ಕನ್ನಡ ಮತ್ತು ಸಂಸ್ಕೃತಿ ಸಚಿವ ತಂಗಡಿಗಿಗೆ ಕಪಾಳಕ್ಕೆ ಹೊಡೆದಂತೆ ಆಗಬೇಕು ಎಂದು ಜನಾರ್ಧನ್ ರೆಡ್ಡಿ ತಿಳಿಸಿದರು.
ತಂಗಡಗಿ ನನ್ನ ಬಳಿ ಹಣ ತೆಗೆದುಕೊಂಡು ಬಂದು ಚುನಾವಣೆಯಲ್ಲಿ ಗೆದ್ದಿದ್ದಾನೆ. ತಂಗಡಗಿಯನ್ನ ಮೊದಲ ಬಾರಿಗೆ ಮಂತ್ರಿ ಮಾಡಿದ್ದು ನಾನು. ಶಿವರಾಜ ತಂಗಡಿಗೆ ಅಧಿಕಾರದ ಮದದಿಂದ ವರ್ತನೆ ಮಾಡುತ್ತಿದ್ದಾರೆ. ಮೋದಿ ಮೋದಿ ಅಂದರೆ ಕಪಾಳಕ್ಕೆ ಹೊಡೆಯಬೇಕು ಎಂದು ಹೇಳಿದ್ದಾನೆ.
ತಮ್ಮ ತಂಗಡಗಿ ನಾನು ಕಾರಟಗಿ ಬಸ್ ನಿಲ್ದಾಣದ ಮುಂದೆ ನಿಂತಿದ್ದೇನೆ. ನಮ್ಮ ಕಾರ್ಯಕರ್ತರು ಮೋದಿ ಮೋದಿ ಎಂದು ಘೋಷಣೆ ಕೂಗುತ್ತಿದ್ದಾರೆ.ನಿನಗೆ ಧಮ್ ಇದ್ದರೆ ಬಂದು ಬಿಜೆಪಿ ಕಾರ್ಯಕರ್ತರ ಕಪಾಳಕ್ಕೆ ಹೊಡಿ ತಂಗಡಗಿ ಕೇವಲ ನೀನೊಬ್ಬ ಮಂತ್ರಿ. ಮೋದಿ ಬಗ್ಗೆ ಮಾತನಾಡುತ್ತೀಯಾ ಎಂದು ವಾಗ್ದಾಳಿ ನಡೆಸಿದರು.
ಶಿವರಾಜ ತಂಗಡಗಿ ನನ್ನನ್ನು ಬೆತ್ತಲು ಮಾಡುವುದಾಗಿ ಹೇಳಿಕೆ ನೀಡಿದ್ದಾನೆ. ಸೋನಿಯಾ ಗಾಂಧಿ ರಾಹುಲ್ ಗಾಂಧಿಗೆ ನನ್ನನ್ನು ಏನು ಮಾಡಲು ಆಗಿಲ್ಲ. ತಂಗಡಗಿ ಸಚಿವ ಸ್ಥಾನ ಕಿತ್ತಾಕಲು ಬಸವರಾಜ್ ರಾಯರೆಡ್ಡಿ ನಿಂತಿದ್ದಾರೆ ಎಂದು ಶಿವರಾಜ್ ತಂಗಡಿಗೆ ಕ್ಷತ್ರ ಕಾರಟಗಿಯಲ್ಲಿ ಜನಾರ್ಧನ್ ರೆಡ್ಡಿ ವಾಗ್ದಾಳಿ ನಡೆಸಿದರು.