ವಿಜಯನಗರ: ಜಿಲ್ಲೆಯ ಹೊಸಪೇಟೆಯಲ್ಲಿನ ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ ನ ಕಾಮಗಾರಿ ಪರಿವೀಕ್ಷಣೆ ಮಾಡಿದರು. ಅಲ್ಲದೇ ಸಸಿ ನೆಡುವ ಕಾರ್ಯಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು ಸಮಗ್ರ ಸಾರಿಗೆ ಇಲಾಖೆಯ ವ್ಯಾಪ್ತಿಯಲ್ಲಿನ ಪ್ರತಿಯೊಂದು ಸಂಸ್ಥೆಗಳ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಪರಿಸರ ಸಂರಕ್ಷಣೆಯ ಕಾರ್ಯವೂ ಅತ್ಯಗತ್ಯ ಎಂಬುದನ್ನು ಅರಿತು ಬೃಹತ್ ಪ್ತಮಾಣದಲ್ಲಿ ಹಸರೀಕರಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ದೇವರಾಜು ಅರಸು ಟ್ರಕ್ ಟರ್ಮಿನಲ್ ಗಳಲ್ಲಿ ಬಹಳ ದಶಕಗಳಿಂದಲೂ ಬಾಕಿ ಉಳಿದಿದ್ದ ಕಾಮಗಾರಿ ಹಾಗೂ ಇತರೆ ಪ್ರಮುಖ ಕಾರ್ಯಗಳಿಗೆ ಮಾನ್ಯ ಸಾರಿಗೆ ಸಚಿವರು ವೇಗ ನೀಡಿದ್ದು, ಟ್ರಕ್ ಟರ್ಮಿನಲ್ ಗಳಲ್ಲಿ ಸ್ಥಳಾವಕಾಶವಿದ್ದಾಗ್ಯೂ ಸಹ ಹಸಿರು ಬೆಳೆಸುವ ಕಾರ್ಯ ಮಾಡದಿರುವುದನ್ನು ಸಹ ಗಮನಿಸಿ ಸಸಿ ನೆಡುವ ಬೃಹತ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಇಂದು ಮಾನ್ಯ ಸಾರಿಗೆ ಹಾಗೂ ಮುಜರಾಯಿ ಸಚಿವರು ಹೊಸಪೇಟೆ ಟ್ರಕ್ ಟರ್ಮಿನಲ್, ವಿಜಯನಗರ ಜಿಲ್ಲೆಯಲ್ಲಿ ಸುಮಾರು 37.28 ಎಕರೆಯಲ್ಲಿ ಟ್ರಕ್ ಟರ್ಮಿನಲ್ ಹಂತ 1 ರ ಮೂಲಭೂತ ಸೌಕರ್ಯದ ಕಾಮಗಾರಿಯ ಪರಿವೀಕ್ಷಣೆ ನಡೆಸಿದರು.
ಸದರಿ ಟ್ರಕ್ ಟರ್ಮಿನಲ್ ಆವರಣದಲ್ಲಿ ಭವ್ಯವಾದ ಕಟ್ಟಡ ನಿರ್ಮಾಣವಾಗುತ್ತಿದೆ.
ಒಂದೇ ಸೂರಿನಡಿ
*38 ಸುಸಜ್ಜಿತ ಕೊಠಡಿಗಳು
*ಡಾರ್ಮೆಂಟರಿಗಳು
*ಟ್ರಾನ್ಸ್ ಪೋರ್ಟ್ ಕಛೇರಿಗಳು ಇರುತ್ತವೆ.
294 ಲಾರಿಗಳನ್ನು ಏಕಕಾಲದಲ್ಲಿ ಪಾರ್ಕಿಂಗ್ ಮಾಡಲು ಸ್ಥಳಾವಕಾಶ ಕಲ್ಪಿಸಲಾಗಿದೆ.
ಈ ಎಲ್ಲಾ ಕಾಮಗಾರಿಗಳನ್ನು ಮೂರು ತಿಂಗಳ ಅವಧಿಯೊಳಗೆ ಅಚ್ಚುಕಟ್ಟಾಗಿ ಪೂರ್ಣಗೊಳಿಸಲು ಸಂಬಂಧಪಟ್ಟ ಇಂಜಿನಿಯರುಗಳಿಗೆ ಸಾರಿಗೆ ಸಚಿವರು ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ಹೊಸಪೇಟೆ ಟ್ರಕ್ ಟರ್ಮಿನಲ್ ನಲ್ಲಿ ಟರ್ಬೋ ಸ್ಟೀಲ್ ಮೂಲಕ 1200 ಮರದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ.
ಈ ಕಾರ್ಯಕ್ರಮದಲ್ಲಿ ಹೊಸಪೇಟೆಯ ಶಾಸಕರಾದ ಗವಿಯಪ್ಪರವರು, ಜಿಲ್ಲಾಧಿಕಾರಿಗಳಾದ ಎಂ.ಎಸ್ ದಿವಾಕರ್ ಭಾಆಸೇ, ದೇವರಾಜು ಅರಸು ಟ್ರಕ್ ಟರ್ಮಿನಲ್ ನ ವ್ಯವಸ್ಥಾಪಕ ನಿರ್ದೇಶಕರಾದ ಸಿ.ಎನ್ ಶಿವಪ್ರಕಾಶ್ ಉಪಸ್ಥಿತರಿದ್ದರು.