ಹುಬ್ಬಳ್ಳಿ : ಇದೇ ಜನವರಿ 22ರಂದು ಅಯೋಧ್ಯೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ರಾಮನ ಮಂದಿರ ಉದ್ಘಾಟನೆಯ ಆಹ್ವಾನವನ್ನು ಕಾಂಗ್ರೆಸ್ ಪಕ್ಷ ಗೌರವ ಯುತವಾಗಿ ತಿರಸ್ಕರಿಸಿದೆ. ಈ ವಿಷಯದ ಕುರಿತಾಗಿ ಹುಬ್ಬಳ್ಳಿಯಲ್ಲಿ ಅಬಕಾರಿ ಸಚಿವ ಆರ್ ಬಿ ತಿಮ್ಮಪೂರ್ ಪ್ರತಿಕ್ರಿಯೆ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದಿಗಾರರೊಂದಿಗೆ ಮಾತನಾಡಿದ ಅವರು,ಶ್ರೀರಾಮ ಒಬ್ಬನೇ ದೇವರ ನಮ್ಮೂರಲ್ಲೂ ಅನೇಕ ದೇವರುಗಳಿವೆ ಮತದಾರರಿಗೆ ಅಕ್ಷತೆಗಳು ಕೊಟ್ಟು ಮತ ಕೇಳುತ್ತಾರೆ ಎಂದು ಬಿಜೆಪಿಯ ವಿರುದ್ಧ ವಾಗ್ದಾಳಿ ನಡೆಸಿದರು.
ಶ್ರೀರಾಮ ಒಬ್ಬನೇ ದೇವರ ನಮ್ಮೂರಲ್ಲಿ ಕೂಡ ಅನೇಕ ದೇವರುಗಳು ಇವೆ ಕಾಳವ್ವ ಹನುಮಂತ ದುರ್ಗವ್ವ ಇವರೆಲ್ಲರೂ ದೇವರು ಅಲ್ಲವಾ? ರಾಮಮಂದಿರಕ್ಕೆ ಹೋದವರು ಮಾತ್ರ ಹಿಂದೂಗಳ? ಹಳ್ಳಿಯಲ್ಲಿರೋ ದೇವರು ಬಿಜೆಪಿಯವರಿಗೆ ಕಾಣುವುದಿಲ್ವಾ? ರಾಮನ ಹೆಸರಲ್ಲಿ ಚುನಾವಣೆಗೆ ಹೊರಟಿದ್ದಾರೆ ಬಿಜೆಪಿಯವರಿಗೆ ಮೋದಿ ಅವರೇ ದೇವರು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿಯವರಿಗೆ ಬೇರೆ ಕೆಲಸವಿಲ್ಲ ಅಕ್ಷತೆ ಕೊಡುತ್ತೇವೆ ನಮಗೆ ಮತ ಹಾಕಿ ಎಂದು ರಾಜಕಾರಣ ಮಾಡಲು ಹೊರಟಿದ್ದಾರೆ. ಲೋಕಸಭೆ ಚುನಾವಣೆಗೆ ರಾಮನ ಹೆಸರನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎಂದರು.ಇದರಿಂದ ಯಾರಿಗೂ ಉಪಯೋಗ ಇಲ್ಲ.ಬಡವರಿಗೆ ಅನ್ನ ಕೊಡುವುದಿಲ್ಲ ಯುವಕರಿಗೆ ಉಪಯೋಗವಿಲ್ಲ ಜನರು ಕೂಡ ಏನು ಮೂರ್ಖರಲ್ಲ ಇಂತಹ ವಿಷಯಗಳನ್ನು ಅವರು ಬುದ್ಧಿವಂತಿಕೆಯಿಂದ ಯೋಚಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.