ಬೆಂಗಳೂರು: ಸಚಿವ ಪ್ರಿಯಾಂಕ್ ಖರ್ಗೆ ಅವರು ದೆಹಲಿಯಲ್ಲಿ ಇಂದು ಕೇಂದ್ರ ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ, ರಾಜ್ಯದಲ್ಲಿ ತಂತ್ರಜ್ಞಾನ ಮತ್ತು ಆವಿಷ್ಕಾರ ಕ್ಷೇತ್ರದಲ್ಲಿ ಉತ್ಕೃಷ್ಟತೆಯ ಕೇಂದ್ರಗಳ ಮಹತ್ವದ ಬಗ್ಗೆ ಕೂಲಂಕಷವಾಗಿ ಚರ್ಚಿಸಿ ಜಾಲಹಳ್ಳಿಯ ಎಚ್‌ಎಂಟಿ ಕ್ಯಾಂಪಸ್‌ನಲ್ಲಿ ಹೆಚ್ಚುವರಿ ಶೆಡ್‌ಗಳನ್ನು ಮಂಜೂರು ಮಾಡಲು ಮನವಿ ಮಾಡಿದರು.
ಬೆಂಗಳೂರಿನ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಸಹಯೋಗದಲ್ಲಿ ಸ್ಥಾಪಿಸಲಾದ ಸೆಂಟರ್ ಆಫ್ ಎಕ್ಸಲೆನ್ಸ್-ಆರ್‌ಟಿಪಾರ್ಕ್‌ಗೆ ಜಾಲಹಳ್ಳಿಯ ಎಚ್‌ಎಂಟಿ ಕ್ಯಾಂಪಸ್‌ನಲ್ಲಿರುವ ಒಂದು ಕೈಗಾರಿಕಾ ಶೆಡ್ ಅನ್ನು ಗುತ್ತಿಗೆಗೆ ನೀಡಲಾಗಿದೆ. ಖಾಲಿ ಇರುವ ಎರಡು ಶೆಡ್‌ಗಳನ್ನು ಎಲೆಕ್ಟ್ರಾನಿಕ್ಸ್, ಐಟಿ ಬಿಟಿ ಇಲಾಖೆಗೆ ದೀರ್ಘಾವಧಿಗೆ ಗುತ್ತಿಗೆ ನೀಡುವಂತೆ ಎಚ್‌ಡಿ ಕುಮಾರಸ್ವಾಮಿ ಅವರನ್ನು ಒತ್ತಾಯಿಸಿದರು.
ಜಾಗತಿಕವಾಗಿ ವಿವಿಧ ಹೈಟೆಕ್ ಡೊಮೇನ್ ಗಳಲ್ಲಿ ಕರ್ನಾಟಕವನ್ನು ಮುಂಚೂಣಿಯಲ್ಲಿರಿಸುವ ಮೂಲಕ ರಾಜ್ಯದ ಆರ್ಥಿಕ ಬೆಳವಣಿಗೆಗೆ ನೆರವಾಗುವ ಕುರಿತು ಪ್ರಸ್ತಾಪಿಸಿದರು. ಹೆಚ್ಚು ಟೆಕ್ ಸಂಸ್ಥೆಗಳ ಸ್ಥಾಪನೆ ಮೂಲಕ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬೇಕೆಂದು ಮನವಿ ಮಾಡಿದರು.
BREAKING: ರಾಜ್ಯ ಸರ್ಕಾರದಿಂದ ‘ಅಗ್ನಿಶಾಮಕ ದಳದ ಡಿಜಿಪಿ’ಯಾಗಿ ‘IPS ಅಧಿಕಾರಿ ಮಾಲಿನಿ ಕೃಷ್ಣಮೂರ್ತಿ’ ನೇಮಕ
BIG NEWS: ‘ಶಿಕ್ಷಣ ಸಚಿವ’ರ ಕ್ಷೇತ್ರದಲ್ಲೇ ಲಂಚಾವತಾರ: ‘ಪೋನ್ ಪೇ’ ಮೂಲಕವೇ ‘SDA ಲಂಚ ಸ್ವೀಕಾರ’