ಬಳ್ಳಾರಿ : ಸಚಿವ ನಾಗೇಂದ್ರ ರಾತ್ರೋರಾತ್ರಿ ಹುಟ್ಟಿದ ನಾಯಕ, ಭೂತದ ಬಾಯಲ್ಲಿ ಭಗವದ್ಗೀತೆ ಎಂದು ಟೀಕೆ ಮಾಡಿದ್ದ ಶ್ರೀರಾಮುಲುಗೆ ಇದೀಗ ಸಚಿವ ನಾಗೇಂದ್ರ ಖಡಕ್ ಎಚ್ಚರಿಕೆ ನೀಡಿದ್ದು, ಬ್ರೋ ಬಿಡಲ್ಲ. ಕಾಂಗ್ರೆಸ್ ಕಾರ್ಯಕರ್ತರ ತಂಟೆಗೆ ಬಂದ್ರೇ ಬಿಡೋ ಪ್ರಶ್ನೆಯಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಲ್ಲಿ ಕುಡಿದ ಮತ್ತಿನಲ್ಲಿ ಪತ್ನಿಯ ಕುತ್ತಿಗೆಗೆ ಸೀರೆ ಬಿಗಿದು ಕೊಲೆ : ಪತಿಯ ಬಂಧನ
ರಾತ್ರೋರಾತ್ರಿ ಹುಟ್ಟಿರುವ ನಾಯಕ ಎಂಬ ಹೇಳಿಕೆ ಬಳ್ಳಾರಿ ನಗರದ ಕಮಭವನದಲ್ಲಿ ಸಚಿವ ನಾಗೇಂದ್ರ ಕಿಡಿ ಕಾರಿದ್ದು, ಕಾಂಗ್ರೆಸ್ ನಲ್ಲಿ ನಿರಂತರ ಹೋರಾಟ ಮಾಡಿ ಬಂದಿದ್ದೇನೆ.ನನ್ನ ಸಹಕಾರದಿಂದ ಅವರು ಹಿಂದೆ ಮಂತ್ರಿಯಾಗಿದ್ದರು ಯಾರನ್ನು ಯಾರು ಬಳಸಲು ಆಗುವುದಿಲ್ಲ.ಗುಂಪು ಇದ್ದಾಗ ಎಲ್ಲರೂ ಒಟ್ಟಾಗಿದ್ದೇವೆ ಅನ್ನುತ್ತಿದ್ದರು ನನ್ನ ವಿರುದ್ಧ ಸೋತೆ ಅವರು ಈಗ ಮಾಜಿ ಆಗಿದ್ದಾರೆ ಎಂದು ಕಿಡಿ ಕಾರಿದರು.
ಬೆಂಗಳೂರು ಉತ್ತರದಲ್ಲಿ ಪ್ರೊ.ರಾಜೀವ್ ಗೌಡ ಗೆಲ್ಲೋದು ಖಚಿತ- ಸಿ.ಎಂ.ಸಿದ್ದರಾಮಯ್ಯ
ಬ್ರೋ ಬಿಡಲ್ಲ ಕಾಂಗ್ರೆಸ್ ಕಾರ್ಯಕರ್ತರ ತಂಟೆಗೆ ಬಂದ್ರೇ ಬಿಡೋ ಪ್ರಶ್ನೆಯಿಲ್ಲ. ಯಾರೇ ತೊಂದರೆ ಕೊಟ್ರೂ ಬಿಡೋದಿಲ್ಲ. ಬಿಜೆಪಿಯವರು ಕಾಂಗ್ರೆಸ್ ಕಾರ್ಯಕರ್ತರಿಗೆ ಕಿರಿಕಿರಿ ಮಾಡ್ತಿದ್ದಾರೆ.ತಂಟೆಗೆ ಬಂದ್ರೇ ಬಿಡೋದಿಲ್ಲ. ಊರು ಬಿಡಬೇಕೆಂದು ಬೆದರಿಕೆ ಹಾಕ್ತಿದ್ದಾರೆ. ನಮ್ಮ ಕಾರ್ಯಕರ್ತರ ತಂಟೆಗೆ ಬಂದ್ರೆ ನಾವು ಸುಮ್ಮನೆ ಬಿಡೊಲ್ಲ ಎಂದು ಎಚ್ಚರಿಸಿದರು.
Shocking Video: ದೆಹಲಿಯ ಮೆಟ್ರೋ ನಿಲ್ದಾಣದಲ್ಲೇ ‘ರೈಫಲ್’ನಿಂದ ಗುಂಡು ಹಾರಿಸಿಕೊಂಡು ಕಾನ್ಸ್ ಸ್ಟೇಬಲ್ ಆತ್ಮಹತ್ಯೆ
ಇದ್ದದ್ದು ಇದ್ದಂಗೆ ಹೇಳಿದ್ರೇ.. ಅನ್ನೋ ಗಾದೆ ಮಾತಿನಂತಾಗಿದೆ ಶ್ರೀರಾಮುಲು ಪರಿಸ್ಥಿತಿ. ಜಗಳ ತಂದಿಡೋರನ್ನು, ಸುಳ್ಳು ಹೇಳೋರನ್ನ ಜನರು ನಂಬೊಲ್ಲ. ಬಿಜೆಪಿ ಕಾರ್ಯಕರ್ತರಿಗೆ ಹಾರ ಹಾಕಿ ಕಾಂಗ್ರೆಸ್‌ನವರು ಬಿಜೆಪಿ ಸೇರಿದ್ದಾರೆಂದು ಸುಳ್ಳುತ್ತಿದ್ದಾರೆ. ಸೋಲಿನ ಅವಮಾನದಿಂದ ಹೀಗೆಲ್ಲ ಮಾತನಾಡ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಸಹ ಬಿಜೆಪಿ ಸೋಲಿಸುವುದೇ ನಮ್ಮ ಗುರಿ ಎಂದರು.