ಕಲಬುರಗಿ : ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬುಧವಾರ ಕಂದಾಯ ಇಲಾಖೆ ಪ್ರಗತಿ ಪರಿಶೀಲನೆಗೆ ಡಿ.ಸಿ. ಕಚೇರಿ ಆಗಮಿಸಿದಾಗ ಮಿನಿ ವಿಧಾನಸೌಧದಲ್ಲಿರುವ ಸಬ್ ರಿಜಿಸ್ಟರ್ ಕಚೇರಿಗೆ ಭೇಟಿ ನೀಡಿದರು.
ಕಚೇರಿ ಹೊರಗಡೆ ಜನಜಂಗುಳಿ ಕಂಡ ಸಚಿವರು, ಸಾರ್ವಜನಿಕರನ್ನು ನೊಂದಣಿಗೆ ಸಮಯ ನೀಡಿಲ್ವಾ ಎಂದು ಪ್ರಶ್ನಿಸಿದರು. ಎಲ್ಲರು ಒಂದೆ ಸಮಯಕ್ಕೆ ಬಂದಿರುವುದನ್ನು ಗಮನಿಸಿದ ಸಚಿವರು, ಇಲ್ಲಿ ಟೋಕನ್ ಸಿಸ್ಟಮ್ ಪಾಲಿಸುತ್ತಿಲ್ವಾ ಎಂದು ಸಬ್ ರಿಜಿಸ್ಟಾರ್ ಪಿ.ಶ್ರಿಕಾಂತ ಅವರನ್ನು ಪ್ರಶ್ನಿಸಿದರು. ಪಿ.ಶ್ರೀಕಾಂತ ಉತ್ತರಿಸಿ ಸಾರ್ವಜನಿಕರಿಗೆ ಪೋರ್ಟಲ್ ನಲ್ಲಿ ಸಮಯ ನೀಡಿದ್ದಂತೆ ಮೊದಲು ಬಂದವರಿಗೆ ಅದ್ಯತೆ ನೀಡಲಾಗುತ್ತಿದೆ ಎಂದರು.
ಕಾವೇರಿ ತಂತ್ರಾಂಶದಲ್ಲಿ ಸಾರ್ವಜನಿಕರ ಆಸ್ತಿ ನೊಂದಣಿಗೆ ಸ್ವಯಂ ಸಮಯ ದಿನಾಂಕ ನಿಗದಿಪಡಿಸಲು ಅವಕಾಶ ನೀಡಲಾಗಿದೆ. ಅದರಂತೆ ಸಮಯ ನಿಗದಿ ಮಾಡಿಕೊಂಡು ನಿಗದಿತ ಸಮಯಕ್ಕೆ ಬರುವವರನ್ನು ಮೊದಲು ಆದ್ಯತೆ ನೀಡಬೇಕುಮ ಉದಾಹರಣೆಗೆ 10 ಗಂಟೆಗೆ ನೊಂದಣಿ ಸಮಯ ನೀಡಿದಾಗ ವ್ಯಕ್ತಿ 11 ಗಂಟೆಗೆ ಬಂದಲ್ಲಿ ಅಂತಹವರನ್ನು ಕೂಡಿಸಿ 11 ಗಂಟೆಗೆ ಸರಿಯಾದ ಸಮಯಕ್ಕೆ ಬಂದವರನ್ನು ಮೊದಲು ಆದ್ಯತೆಯನ್ನಾಗಿ ಪರಿಗಣಿಸಬೇಕು ಎಂದರು.
ಎಲ್ಲರು ಒಮ್ಮೆಲೆ ನೋಂದಣಿಗೆ ಬಂದರೆ ಕೂಡಲು ಜಾಗ ಇರಲ್ಲ, ಕುಡಿಯಲು ನೀರಿರಲ್ಲ. ಮಕ್ಕಳು, ವೃದ್ಧರು, ಮಹಿಳೆಯರು ಬರ್ತಾರೆ. ಕಚೇರಿ ಕೆಲಸ ತಡವಾದಲ್ಲಿ ಸರ್ಕಾರಕ್ಕೆ ಹಿಡಿಶಾಪ ಹಾಕ್ತಾರೆ. ಇದನ್ನೆಲ್ಲ ಅರಿತು ತ್ವರಿತಗತಿಯಲ್ಲಿ ಕೆಲಸ ಮಾಡಿಕೊಡಬೇಕು ಎಂದರು.
ಕಂದಾಯ ಆಯುಕ್ತ ಸುನೀಲ ಕುಮಾರ, ಡಿ.ಸಿ. ಬಿ.ಫೌಜಿಯಾ ತರನ್ನುಮ್, ಎ.ಸಿ. ಆಶಪ್ಪ ಪೂಜಾರಿ, ಜಿಲ್ಲಾ ರಿಜಿಸ್ಟಾರ್ ಎಂ.ಎ.ಹಸೀಫ್ ಮತ್ತಿತರಿದ್ದರು.
UPDATE : ಮೇಲುಕೋಟೆಯಲ್ಲಿ ಶಿಕ್ಷಕಿ ಕೊಲೆ ಪ್ರಕರಣ : 30 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು
ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಕಟ್ಟಲು ಯೋಗ್ಯತೆ ಇಲ್ಲದ ಸರ್ಕಾರ: ಸರ್ಕಾರದ ವಿರುದ್ಧ ಆರ್.ಅಶೋಕ್ ವಾಗ್ದಾಳಿ