ಹಾಸನ : ವಿಶ್ವ ಪ್ರಸಿದ್ಧ ಹಾಸನಾಂಭೆಯ ದರ್ಶನೋತ್ಸವನ್ನು ಸಂಪ್ರದಾಯ ಹಾಗೂ ಸಡಗರಕ್ಕೆ ಯಾವುದೆ ಕುಂದುಕೊರತೆ ಉಂಟಾಗದಂತೆ ಏರ್ಪಡಿಸುವಂತೆ ಅಬಕಾರಿ ಸಚಿವರು ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಶಿವಮೊಗ್ಗ: ಸೆ.20ರಂದು ಜಿಲ್ಲೆಯ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut
ಜಿಲ್ಲಾಡಳಿತ ಭನವದಲ್ಲಿ ಶನಿವಾರ ಸಂಜೆ ಶಾಸಕರು ಹಾಗೂ ಅಧಿಕಾರಿಗಳ ಉಪಸ್ಥಿತಿಯಲ್ಲಿ ಹಾಸನಾಂಬೆ ಹಾಗೂ ಸಿದ್ದೇಶ್ವರ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಿದ್ದತೆ ಪರಿಶೀಲನಾಸಭೆ ನಡೆಸಿದ ಸಚಿವರು ಶಿಷ್ಟಾಚಾರದಲ್ಲಿ ಯಾವುದೇ ಲೋಪವಾಗದಂತೆ ಆಯೋಜಿಸುವಂತೆ ನಿರ್ದೇಶನ ನೀಡಿದರು.
BREAKING NEWS: ಯಡಿಯೂರಪ್ಪ, ಪುತ್ರ ವಿಜಯೇಂದ್ರ ವಿರುದ್ಧ ಲೋಕಾಯುಕ್ತದಲ್ಲಿ FIR ದಾಖಲು
ಸ್ಥಳೀಯ ಹಾಗೂ ಹೊರಗಿನಿಂದ ಬರುವ ಭಕ್ತಾದಿಗಳಿಗೆ ಸೂಕ್ತ ಮೂಲಭೂತ ಸೌಕರ್ಯ ಒದಗಸಿ ,ಸರದಿ ಸಾಲುಗಳ ಬ್ಯಾರಿಕೇಡಿಂಗ್ ವ್ಯವಸ್ಥೆ ಇನ್ನಷ್ಟು ಸುಧಾರಣೆಗೆ ಗಮನ ಹರಿಸಬೇಕು. ಕೊವಿಡ್ ಹಾಗೂ ಆನಂತರದ ನಿರ್ಬಂಧ ಗಳಿಂದ ಕಳೆದ ಮೂರು ವರ್ಷಗಳಿಂದ ಜಾತ್ರಾ ಮಹೋತ್ಸವವನ್ನು ಕೇವಲ ಸಾಂಪ್ರದಾಯಿಕ ವಾಗಿ ಆಚರಿಸಲಾಗಿತ್ತು ಆದರೆ ಈ ಬಾರಿ ಅಂತಹ ಯಾವುದೇ ಆತಂಕಗಳಿಲ್ಲದ ಕಾರಣ. ಭಕ್ತರ ಸಂಖ್ಯೆ ಹೆಚ್ಚಲಿದ್ದು ಯಾವುದೆ ಅಹಿತಕರ ಘಟನೆ ನೆಡೆಯದಂತೆ ಭಕ್ತಿ ಪೂರ್ವಕ ವಾಗಿ ಹಾಗೂ ಆಕರ್ಷಕವಾಗಿ ಉತ್ಸವ ಸಂಘಟಿಸಿ ಎಂದು ಅವರು ಸೂಚನೆ ನೀಡಿದರು.
BREAKING NEWS: SC/ST ಮಕ್ಕಳಿಗೆ ವೇದ ಗಣಿತ, ಸುತ್ತೋಲೆ ವಾಪಸ್ಸು | Vedic Maths withdrawn
ಉತ್ತಮ ಗುಣಮಟ್ಟದ ಪ್ರಸಾದ ವಿನಿಯೋಗ ಮಾಡಿ,ಪುಷ್ಪಾಲಂಕಾರ,ದೀಪಾಲಂಕಾರಗಳಲ್ಲಿ ಯಾವುದೇ ಕೊರತೆ ಇರದಂತೆ ಗಮನ ಹರಿಸಿಎಂದು ಸಚಿವರು ಸಲಹೆ ನೀಡಿದರು.
ಶಾಸಕ ಪ್ರೀತಂಗೌಡ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಪಸ್ಥಿತರಿದ್ದರು.