ಬೆಳಗಾವಿ: ಇದುವರೆಗೆ ರಾಜ್ಯದ ಮಹಿಳಾ ನೌಕರರಿಗೆ ಮಾತ್ರವೇ ಶಿಶುಪಾಲನಾ ರಜೆ ನೀಡಲಾಗುತ್ತಿತ್ತು. ಇಂತಹ ರಜೆಯನ್ನು ಪತ್ನಿಯನ್ನು ಕಳೆದುಕೊಂಡ ಪತಿಗೂ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದು ಸಚಿವ ಜೆ.ಸಿ ಮಾಧುಸ್ವಾಮಿ ಭರವಸೆ ನೀಡಿದ್ದಾರೆ.
ಗುರುವಾರದಂದು ವಿಧಾನಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯ ನಾಸೀರ್ ಅಹ್ಮದ್, ಬಿಜೆಪಿಯ ಎಸ್ ವಿ ಸಂಕನೂರು ಕೇಳಿದಂತ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕೇವಲ ಸರ್ಕಾರಿ ಮಹಿಳಾ ನೌಕರರಿಗೆ 6 ತಿಂಗಳವರೆಗೆ ಶಿಶುಪಾಲನಾ ರಜೆಯನ್ನು ನೀಡಲಾಗುತ್ತಿದೆ. ಈ ರಜೆಯನ್ನು ಪತ್ನಿ ನಿಧನ ಹೊಂದಿದ ಪುರುಷ ಸರ್ಕಾರಿ ಅಧಿಕಾರಿ, ನೌಕರರಿಗೆ ಅನ್ವಯಿಸುವುದಿಲ್ಲ ಎಂದರು.
ಪತ್ನಿಯನ್ನು ಕಳೆದುಕೊಂಡ ಪತಿಯ ದುಖವು ನಮಗೆ ಅರ್ಥವಾಗಿದೆ. ಹೀಗಾಗಿ ವಿಧುರರಿಗೂ ಶಿಶುಪಾಲನಾ ರಜೆಯನ್ನು ನೀಡುವ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುದಾಗಿ ಭರವಸೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೇನ್ ನಿಧನ: ಸಿಎಂ ಬೊಮ್ಮಾಯಿ ಸೇರಿ ಹಲವು ಗಣ್ಯರ ಸಂತಾಪ
BIGG NEWS: ಇಂದು ವಿಜಯಪುರದಲ್ಲಿ ಕಾಂಗ್ರೆಸ್ ಕೃಷ್ಣ ಜನಾಂದೋಲನ ಸಮಾವೇಶ; ಸಾವಿರಾರು ಜನ ಸೇರುವ ನಿರೀಕ್ಷೆ