ಶಿವಮೊಗ್ಗ: ರಾಜ್ಯ ಸರ್ಕಾರದ ಅರಣ್ಯ ಮಂತ್ರಿಗಳಾದ ಈಶ್ವರ ಖಂಡ್ರೆ ಯವರು ಪರಿಸರ ಮೂಲಭೂತವಾದಿ ತರ ವರ್ತನೆ ತೋರುತ್ತಾ ಇರುವುದೇ ಈ ಹೊತ್ತಿನ ಮಲೆನಾಡಿನ ಹಲವು ಬಿಕ್ಕಟ್ಟಿಗೆ ಕಾರಣ ಅನ್ನಿಸುತ್ತಿದೆ ಎಂಬುದಾಗಿ ಕಾಂಗ್ರೆಸ್ ಮುಖಂಡ, ಸಾಗರದ ಕೆಡಿಪಿ ಸದಸ್ಯ ಜಿ.ಟಿ ಸತ್ಯನಾರಾಯಣ ಆಕ್ರೋಶವನ್ನು ಹೊರ ಹಾಕಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ ಬುಕ್ ಮುಖಪುಟದಲ್ಲಿ ಬರೆದುಕೊಂಡಿರುವಂತ ಅವರು, ಮಲೆನಾಡಿನ ಮುಳುಗಡೆ ರೈತರು ಈ ಪೋಸ್ಟ್ ಜತೆ ಇರುವ ರಾಜ್ಯದ ಕಾಡಿನ ಮಂತ್ರಿಗಳ ಈ ಟಿಪ್ಪಣಿ ಸರಿ ಮಾಡಿ ಓದಿಕೊಳ್ಳಿ. ರಾಜ್ಯ ಸರ್ಕಾರದ ಅರಣ್ಯ ಮಂತ್ರಿಗಳಾದ ಈಶ್ವರ ಖಂಡ್ರೆ ಯವರು ಪರಿಸರ ಮೂಲಭೂತವಾದಿ ತರ ವರ್ತನೆ ತೋರುತ್ತಾ ಇರುವುದೇ ಈ ಹೊತ್ತಿನ ಮಲೆನಾಡಿನ ಹಲವು ಬಿಕ್ಕಟ್ಟಿಗೆ ಕಾರಣ ಅನ್ನಿಸುತ್ತಿದೆ ಅಂದಿದ್ದಾರೆ.
ಈ ಟಿಪ್ಪಣಿ ಓದಿ
ಒಂದು ಪತ್ರಿಕಾವರದಿ ಮತ್ತು ವೃಕ್ಷ ಲಕ್ಷ ಅಂದೋಲನ ಎನ್ನುವ ಅನಂತ ಹೆಗಡೆ ಆಶೀಸರ ನೇತೃತ್ವದ ಸಂಸ್ಥೆ ನೀಡಿದ ಮನವಿಯನ್ನು ಪರಿಗಣಿಸಿ ನಮ್ಮ ಕಾಡಿನ ಮಂತ್ರಿ ಹಿಂದೆ ಮುಂದೆ ನೋಡದೆ ಶರಾವತಿ ಮುಳುಗಡೆಯಾಗಿ ಉಳಿಕೆಯಾದ ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಕಳೆದ ಎಪ್ಪತ್ತು ವರ್ಷಗಳಿಂದ ಬದುಕು ಕಟ್ಟಿಕೊಂಡ 15 ಸಾವಿರಕ್ಕೂ ಹೆಚ್ಚು ರೈತರ ಭೂಮಿಯನ್ನು ನಿಯಮ ಪ್ರಕಾರ ಪರಿಶೀಲನೆ ಮಾಡಿ ಅರಣ್ಯ ಇಲಾಖೆಗೆ ಹಿಂದಕ್ಕೆ ಪಡೆಯಲು ಕ್ರಮ ತೆಗೆದುಕೊಳ್ಳಿ ಎಂದು ಟಿಪ್ಪಣಿ ಹಾಕಿ ಮುಂದಿನ ಕ್ರಮಕ್ಕೆ ಕಳುಹಿಸುತ್ತಾರೆ ಎಂದು ಹೇಳಿದ್ದಾರೆ.
ಅಂದರೆ ಇಂದು ಎಡಮನೆ ನಾಳೆ ಶರಾವತಿ ಕೊಳ್ಳದ ನಿಮ್ಮೆಲ್ಲರ ಮನೆ. ಕೆ.ಪಿ.ಸಿ ಭೂಮಿಯಲ್ಲಿ ಬದುಕು ಕಟ್ಟಿಕೊಂಡ ಜನ ಯಾರು..? ಅವರು ಈ ರಾಜ್ಯದ ಬೆಳಕಿಗೆ ತ್ಯಾಗ ಮಾಡಿದ ಶರಾವತಿ ಯೋಜನೆಯ ಸಂತ್ರಸ್ತರು. ಶಿವಮೊಗ್ಗ ಸಮೀಪ ಹಳ್ಳಿಗಳಲಿ ಮೂಲ ಸಂತ್ರಸ್ತರಿಗೆ ಇನ್ನೂ ಅರಣ್ಯ ಭೂಮಿ ಎನ್ನುವ ಕಾರಣಕ್ಕೆ ನ್ಯಾಯ ಸಿಗದೇ ಇರುವ ಹೊತ್ತಿನಲ್ಲಿಯೆ ನದಿ ದಂಡೆಯಲ್ಲಿ ಬದುಕು ಕಟ್ಟಿಕೊಂಡ ಕೆಪಿಸಿ ಉಳುಮೆ ಮಾಡಿಕೊಂಡ ರೈತರ ಮೇಲೆ ಮತ್ತೆ ಪ್ರಹಾರ ಮಾಡುವುದು ಈ ಟಿಪ್ಪಣಿ ಹಿಂದೆ ಇದೆ ಎಂದು ಹೇಳಿದ್ದಾರೆ.
ಇದರ ಜತೆ ಈ ಅರ್ಜಿ ಕೊಟ್ಟಿರುವ ವೃಕ್ಷ ಲಕ್ಷ ಆಂದೋಲನದ ಅನಂತ ಹೆಗಡೆ ಆಸೀಸರರವರು ಈ ಹಿಂದೆ ಅಂಬಾರಗುಡ್ಡ ರಕ್ಷಣೆ ಹೆಸರಲ್ಲಿ ಜನವಸತಿ ಪ್ರದೇಶದ 4500 ಎಕರೆ ಕಂದಾಯ ಭೂಮಿಯನ್ನ ಪರಿಸರ ಸೂಕ್ಷ್ಮ ಪ್ರದೇಶದ ಅರಣ್ಯವಾಗಿ ಪರಿವರ್ತನೆ ಮಾಡಲು ಸಿಪಾರಸ್ಸು ಮಾಡಿ ನೋಟಿಪೈ ಆಗುವಂತೆ ಮಾಡಿದ್ದರು. ಡ್ರೀಮ್ ಫಾರೆಸ್ಟ್ ಕೂಡಾ ಇವರದೇ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ಆಗಿತ್ತು ಎಂದಿದ್ದಾರೆ.
ಖಂಡ್ರೆ ಇಂತಹ ಮಹತ್ವದ ವಿಚಾರಕೆ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಾದ ಮಧು ಬಂಗಾರಪ್ಪ ಅವರು ಅಥವಾ ಸ್ಥಳೀಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಜತೆ ಚರ್ಚೆ ನಡೆಸಿದ್ದಾರ…? ಎಂಬುದಾಗಿ ಪ್ರಶ್ನಿಸಿದ್ದಾರೆ.
ಇವ್ಯಾವುದು ನಡದೇ ಇಲ್ಲ. ಕೋಣ ಕಾಡಿನಲ್ಲಿ ಕರ ಹಾಕಿತು ಅಂದರೆ ಕಾಡು ನಮ್ಮದು ಅದರ ಮೇಲೆ ನಿಯಮ ಅನುಸಾರ ಕ್ರಮ ಕೈ ಗೊಳ್ಳಿ ಎನ್ನುತ್ತಾರೆ ಖಂಡ್ರೆ. ಮಲೆನಾಡಿನ ಜನರ ಸಂವೇದನೆ ಅರಣ್ಯ ಮಂತ್ರಿಗಳ ನಿಲುವುಗಳು ಡಿಕ್ಕಿ ಹೊಡೆಯುತ್ತ ಇವೆ ಎಂದಿದ್ದಾರೆ.
ಕೆ ಪಿ ಸಿ ಭೂಮಿಯಲ್ಲಿ ಉಳುಮೆ ಮಾಡಿಕೊಂಡ ರೈತರೇ ಎಚ್ಚರ ಆಗಿ… ಇರುವ ಕಾಯಿದೆ ಅಥವಾ ಉಳುವವನೇ ಹೊಲದ ಒಡೆಯ ಪರಿಸ್ಕೃತ ಕಾನೂನು ಜಾರಿಗೆ ತಂದು ಕೆಪಿಸಿ ರೈತರ ಭೂಮಿಗೆ ಪಟ್ಟ ಕೊಡಬೇಕು.ಅದಕ್ಕೆ ಅಗತ್ಯ ಸರ್ವೇ ಪ್ರಕ್ರಿಯೆ ನಡೆಯಬೇಕು. 70 ವರ್ಷ ಹಿಂದೆ ಕೆ ಪಿಸಿ ನೋಟಿಫೈ ಆದ ಭೂಮಿ ಡಿ ನೋಟೀಫೈ ಮಾಡಲು ರಾಜ್ಯ ಸರ್ಕಾರ ಮುಂದಾಗಲೇಬೇಕು. ಇಲ್ಲ ಅಂದರೆ ನಾಳೆ ಇನ್ನೊಂದು ಎಡಮನೆ ನಿಮ್ಮೂರು ನಮ್ಮೂರು ಆಗುತ್ತದೆ ಎಂಬುದಾಗಿ ಕಾಂಗ್ರೆಸ್ ಮುಖಂಡ, ಸಾಗರದ ಕೆಡಿಪಿ ಸದಸ್ಯ ಜಿ ಟಿ ಸತ್ಯನಾರಾಯಣ ಕರೂರು ಆಕ್ರೋಶ ಹೊರ ಹಾಕಿದ್ದಾರೆ.
ನಕಲಿ ಮರಣ ಪ್ರಮಾಣಪತ್ರ ನೀಡುವಂತೆ ಕಿರುಕುಳ: ಶಾಸಕರ ಪಿಎ ವಿರುದ್ಧ ಸಾಂಖ್ಯಿಕ ನಿರೀಕ್ಷಕ ಗಂಭೀರ ಆರೋಪ
SHOCKING: ಪರೀಕ್ಷೆಗೆ ಹೆದರಿ SSLC ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ








