ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಗೆ ನಿನ್ನೆ ಸಾಹಿತಿ ಹಂ.ಪ ನಾಗರಾಜಯ್ಯ ವಿದ್ಯುಕ್ತವಾದಂತ ಚಾಲನೆ ನೀಡಿದ್ದರು. ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಿದ್ದರು. ಇಂದು ಈ ಒಂದು ದಸರಾ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.
ಇಂದಿನ ವಿಶ್ವ ವಿಖ್ಯಾತ ಮೈಸೂರು ದಸರಾದ ಎರಡನೇ ದಿನದ ಕಾರ್ಯಕ್ರಮದಲ್ಲಿ ಜಾವಾ ಬೈಕ್ ರ್‍ಯಾಲಿ ಆಯೋಜನೆ ಮಾಡಲಾಗಿದೆ. ಕೆಲವೇ ಹೊತ್ತಿನಲ್ಲಿ ಪಾರಂಪರಿಕ ಜಾವಾ ಬೈಕ್ ರ್‍ಯಾಲಿಗೆ ಸಚಿವ ಎಚ್.ಕೆ ಪಾಟೀಲ್ ಚಾಲನೆ ನೀಡಲಿದ್ದಾರೆ. ಟೌನ್ ಹಾಲ್ ಬಳಿ ಸಚಿವ ಪಾಟೀಲ್ ಈ ಒಂದು ಬೈಕ್ ರ್‍ಯಾಲಿ ಚಾಲನೆ ನೀಡಲಿದ್ದಾರೆ.
ಇನ್ನು ಬೆಳಗ್ಗೆ 7:30ಕ್ಕೆ ಅರಮನೆ ಒಳ ಆವರಣದಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಈ ಒಂದು ಸ್ಪರ್ಧೆಗೆ ಚಾಲನೆ ನೀಡಲಿದ್ದಾರೆ. ನಂತರ ಬೆಳಗ್ಗೆ 9:30ಕ್ಕೆ ಮಕ್ಕಳ ದಸರಾ ಕಲಾಥನ್ ಪ್ರದರ್ಶನ ಆಯೋಜನೆ ಮಾಡಲಾಗಿದೆ.ಅರಮನೆ ಕೋಟೆ ಆಂಜನೇಯ ದೇಗುಲದ ಬಳಿ ಕಲಾಥನ್ ಪ್ರದರ್ಶನ ಆಯೋಜನೆ ಮಾಡಲಾಗಿದೆ.
ನಂತರ ಬೆಳಗ್ಗೆ 10 ಕ್ಕೆ ಮಹಿಳಾ ದಸರಾವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಉದ್ಘಾಟನೆ ಮಾಡಲಿದ್ದಾರೆ. ಮೈಸೂರಿನ ಜೆಕೆ ಮೈದಾನದಲ್ಲಿ ಈ ಒಂದು ಮಹಿಳಾ ದಸರಾ ನಡೆಯಲಿದೆ. ಅಲ್ಲದೆ ಸಂಜೆ 5 ಗಂಟೆಗೆ ಯೋಗ ದಸರಾ ಗೆ ದಿನೇಶ್ ಗುಂಡೂರಾವ್ ಚಾಲನೆ ನೀಡಲಿದ್ದಾರೆ. ಮೈಸೂರಿನ ಮೆಡಿಕಲ್ ಕಾಲೇಜು ಆವರಣದಲ್ಲಿ ಯೋಗದಸರ ಆಯೋಜನೆ ಮಾಡಲಾಗಿದೆ.