Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : 2026ರ ಮಹಿಳಾ ‘ಟಿ20 ವಿಶ್ವಕಪ್’ ವೇಳಾಪಟ್ಟಿ ಪ್ರಕಟ ; ಜೂನ್ 14ಕ್ಕೆ ಭಾರತ-ಪಾಕ್ ಮುಖಾಮುಖಿ

18/06/2025 3:36 PM

ಬೆಂಗಳೂರಲ್ಲಿ ಶಾಲೆಯ ಕಟ್ಟಡದಿಂದ ಬಿದ್ದು, ವಿದ್ಯಾರ್ಥಿನಿಗೆ ಗಂಭೀರ ಗಾಯ : ಶಾಸಕ ಅಶ್ವಥ್ ನಾರಾಯಣ ಭೇಟಿ

18/06/2025 3:31 PM

2026ರ ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ | Women’s T20 World Cup 2026

18/06/2025 3:31 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಶುಚಿ ಯೋಜನೆ’ಗೆ ಮರುಚಾಲನೆ: ಇನ್ಮುಂದೆ ವಿದ್ಯಾರ್ಥಿನಿಯರಿಗೆ ‘ಉಚಿತ ಸ್ಯಾನಿಟರಿ‌ ಪ್ಯಾಡ್’ ವಿತರಣೆ
KARNATAKA

‘ಶುಚಿ ಯೋಜನೆ’ಗೆ ಮರುಚಾಲನೆ: ಇನ್ಮುಂದೆ ವಿದ್ಯಾರ್ಥಿನಿಯರಿಗೆ ‘ಉಚಿತ ಸ್ಯಾನಿಟರಿ‌ ಪ್ಯಾಡ್’ ವಿತರಣೆ

By kannadanewsnow0929/02/2024 5:20 AM

ಬೆಂಗಳೂರು: ಕಳೆದ ನಾಲ್ಕು ವರ್ಷಗಳಿಂದ ಸ್ಥಗಿತಗೊಂಡಿದ್ದ ಶುಚಿ ಯೋಜನೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮರುಚಾಲನೆ ನೀಡಿದ್ದಾರೆ. 10 ರಿಂದ 18 ವರ್ಷದ ಹೆಣ್ಣುಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್ ಉಚಿತವಾಗಿ ನೀಡುವ ಮಹತ್ವದ ಯೋಜನೆಗೆ ಬೆಂಗಳೂರಿನಲ್ಲಿ ಬುಧವಾರದಂದು ಚಾಲನೆ ನೀಡಲಾಯಿತು. ಜ್ಞಾನಜ್ಯೋತಿ ಸಭಾಂಗಣದಲ್ಲಿ ಹೆಣ್ಣುಮಕ್ಕಳು ಆರೋಗ್ಯ ಸಚಿವರೊಂದಿಗೆ ಜ್ಯೋತಿ ಬೆಳಗಿಸಿ, ಯೋಜನೆಗೆ ಮರುಚಾಲನೆ ನೀಡುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.

ರಾಜ್ಯದ ಸರ್ಕಾರಿ, ಅನುದಾನಿತ ಶಾಲಾ ಕಾಲೇಜುಗಳಲ್ಲಿಯ ಸುಮಾರು 19 ಲಕ್ಷ ಹೆಣ್ಣುಮಕ್ಕಳಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್‌ಕಿನ್ ಗಳ ವಿತರಣೆ ಬುಧವಾರದಿಂದ ಆರಂಭಿಸಲಾಗಿದೆ. ಆರೋಗ್ಯ ಇಲಾಖೆ ನೇರವಾಗಿ ಶಾಲೆಗಳಿಗೆ ಸ್ಯಾನಿಟರಿ ಪ್ಯಾಡ್ ಗಳನ್ನ ತಲುಪಿಸಲಿದ್ದು, ಶಾಲೆಯ ಮುಖ್ಯಸ್ಥರು ಹೆಣ್ಣುಮಕ್ಕಳಿಗೆ ಕಿಟ್ ಗಳನ್ನ ವಿತರಣೆ ಮಾಡಲಿದ್ದಾರೆ. ಒಂದು ಪ್ಯಾಕ್ ನಲ್ಲಿ 10 ಸ್ಯಾನಿಟರಿ ನ್ಯಾಪ್‌ಕಿನ್ ಗಳಿದ್ದು, ಒಂದು ವರ್ಷಕ್ಕೆ ಸಾಕಾಗುವಷ್ಟು ಸ್ಯಾನಿಟರಿ ನ್ಯಾಪ್‌ಕಿನ್ ಗಳಿರುವ ಕಿಟ್ ಗಳನ್ನ ಒಟ್ಟಿಗೆ ವಿದ್ಯಾರ್ಥಿನಿಯರಿಗೆ ನೀಡಲಾಗುವುದು.

ಕಾರ್ಯಕ್ರಮಕ್ಕೆ ಅರ್ಥಪೂರ್ಣ ಚಾಲನೆ ನೀಡಿದ ಬಳಿಕ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಹೆಣ್ಣುಮಕ್ಕಳ ಆರೋಗ್ಯ ದೃಷ್ಟಿಯಿಂದ ಶುಚಿ ಯೋಜನೆ ಮಹತ್ವದ್ದಾಗಿದೆ ಎಂದರು. ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿಯೇ ಯೋಜನೆಯನ್ನ ಪ್ರಾರಂಭಿಸಲಾಗಿತ್ತು. ಆದರೆ, ನಂತರದ ಸರ್ಕಾರದಲ್ಲಿ ಇಂಥಹ ಮಹತ್ವದ ಯೋಜನೆ ಏಕೆ ಸ್ಥಗಿತಗೊಳಿಸಲಾಯಿತು ಗೊತ್ತಿಲ್ಲ. ನಮ್ಮ ಕಾಂಗ್ರೆಸ್ ಸರ್ಕಾರದಲ್ಲಿ ನಾನು ಆರೋಗ್ಯ ಸಚಿವನಾದ ಬಳಿಕ ಯೋಜನೆಗೆ ಮರುಚಾಲನೆ ನೀಡುವುದಾಗಿ ಘೋಷಿಸಿದ್ದೆ.

ಮಹಿಳೆಯರ ಪರವಾಗಿ ಕಾಂಗ್ರೆಸ್ ಸರ್ಕಾರ ಶಕ್ತಿ, ಗೃಹ ಲಕ್ಷ್ಮೀ ಯೋಜನೆಗಳನ್ನ ಜಾರಿಗೆ ತಂದಿರುವಾಗ ಹೆಣ್ಣುಮಕ್ಕಳಿಗೆ ಆರೋಗ್ಯ ದೃಷ್ಠಿಯಿಂದ ಆರಂಭವಾಗಿದ್ದ ಶುಚಿ ಯೋಜನೆ ಕಡೆಗಣಿಸಲು ಸಾಧ್ಯವಿಲ್ಲ. 47 ಕೋಟಿ ವೆಚ್ಚದಲ್ಲಿ 19 ಲಕ್ಷ ಶಾಲಾ ಕಾಲೇಜು ಹೆಣ್ಣುಮಕ್ಕಳಿಗೆ ವರ್ಷಕ್ಕಾಗುವಷ್ಟು ಸ್ಯಾನಿಟರಿ ನ್ಯಾಪ್‌ಕಿನ್ ಗಳನ್ನ ಉಚಿತವಾಗಿ ನೀಡುತ್ತಿದ್ದೇವೆ. ಎಷ್ಟೋ ಬಡ ಕುಟುಂಬದಲ್ಲಿರುವ ಹೆಣ್ಣುಮಕ್ಕಳಿಗೆ ಇದನ್ನ ಖರೀದಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಶುಚಿ ಯೋಜನೆಯಿಂದ ಹೆಣ್ಣುಮಕ್ಕಳಲ್ಲಿ‌ ಮಂದಹಾಸ ಮೂಡಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಸಂತಸ ವ್ಯಕ್ತಪಡಿಸಿದರು.

ಋತುಸ್ರಾವದ ಒಂದು ನೈಸರ್ಗಿಕ ಕ್ರಿಯೆ. ಈ ಬಗ್ಗೆ ಹೆಣ್ಣುಮಕ್ಕಳು ಹಿಂಜರಿಕೆಯ ಮನೋಭಾವ ಹೊಂದುವ ಅಗತ್ಯವಿಲ್ಲ. ಕೆಲವು ಮೂಡ ನಂಬಿಕೆಗಳು ಇವೆ. ಅವುಗಳನ್ನ ದೂರಗೊಳಿಸಿ ಶುಚಿತ್ವ ಹಾಗೂ ಸ್ಯಾನಿಟರಿ ನ್ಯಾಪ್ ಕಿನ್ ಗಳ ಬಳಕೆಯ ಬಗ್ಗೆ ಅರಿವು ಮೂಡಿಸುವ ಮುಖ್ಯವಾಗಿದೆ. ಶುಚಿತ್ವ ಹಾಗೂ ಮುಟ್ಟಿನ ವೈಜ್ಞಾನಿಕ ನಿರ್ವಹಣೆಯು ಹೆಣ್ಣುಮಕ್ಕಳ ಆರೋಗ್ಯ ದೃಷ್ಟಿಯಿಂದ ಮುಖ್ಯವಾಗಿದೆ. ಸ್ಯಾನಿಟರಿ ಪ್ಯಾಡ್ ಗಳಿಗೆ ಪರ್ಯಾಯವಾಗಿ ಶುಚಿ ಯೋಜನೆಯಡಿ ಮುಟ್ಟಿನ ಮೈತ್ರಿ ಕಪ್ ಗಳನ್ನೂ ವಿತರಿಸುವ ಪ್ರಾಯೋಗಿಕ ಕಾರ್ಯಕ್ರಮವನ್ನ ಎರಡು ಜಿಲ್ಲೆಗಳಲ್ಲಿ ಜಾರಿಗೊಳಿಸಿದ್ದೇವೆ. ಮೈತ್ರಿ ಮುಟ್ಟಿನ ಕಪ್ ಗಳು ಪರಿಸರ ಸ್ನೇಹಿಯಾಗಿದ್ದು, ಯೋಜನೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್ ಗಳ ಬದಲು ಮುಟ್ಟಿನ ಮೈತ್ರಿ ಕಪ್ ಗಳ ಬಳಕೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನ ಆರೋಗ್ಯ ಇಲಾಖೆ ಕೈಗೆತ್ತಿಕೊಳ್ಳಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

Share. Facebook Twitter LinkedIn WhatsApp Email

Related Posts

ಬೆಂಗಳೂರಲ್ಲಿ ಶಾಲೆಯ ಕಟ್ಟಡದಿಂದ ಬಿದ್ದು, ವಿದ್ಯಾರ್ಥಿನಿಗೆ ಗಂಭೀರ ಗಾಯ : ಶಾಸಕ ಅಶ್ವಥ್ ನಾರಾಯಣ ಭೇಟಿ

18/06/2025 3:31 PM1 Min Read

BREAKING : ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ : ವಿದ್ಯುತ್ ಶಾಕ್ ನಿಂದ ವ್ಯಕ್ತಿ ಸಾವು!

18/06/2025 3:30 PM1 Min Read

ಜೂ.20ರಂದು ಆದಿಚುಂಚನಗಿರಿ ವಿವಿ ಬೆಂಗಳೂರು ಕ್ಯಾಂಪಸ್ ಉದ್ಘಾಟನೆ: ಉಪಕುಲಪತಿ ಡಾ.ಎಂ.ಎ.ಶೇಖರ್

18/06/2025 3:21 PM3 Mins Read
Recent News

BREAKING : 2026ರ ಮಹಿಳಾ ‘ಟಿ20 ವಿಶ್ವಕಪ್’ ವೇಳಾಪಟ್ಟಿ ಪ್ರಕಟ ; ಜೂನ್ 14ಕ್ಕೆ ಭಾರತ-ಪಾಕ್ ಮುಖಾಮುಖಿ

18/06/2025 3:36 PM

ಬೆಂಗಳೂರಲ್ಲಿ ಶಾಲೆಯ ಕಟ್ಟಡದಿಂದ ಬಿದ್ದು, ವಿದ್ಯಾರ್ಥಿನಿಗೆ ಗಂಭೀರ ಗಾಯ : ಶಾಸಕ ಅಶ್ವಥ್ ನಾರಾಯಣ ಭೇಟಿ

18/06/2025 3:31 PM

2026ರ ಮಹಿಳಾ ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟಿಸಿದ ಐಸಿಸಿ | Women’s T20 World Cup 2026

18/06/2025 3:31 PM

‘ಭಾರತ-ಪಾಕ್ ಯುದ್ಧ ನಿಲ್ಲಿಸುವಲ್ಲಿ ಅಮೆರಿಕದ ಪಾತ್ರವಿಲ್ಲ’ ; ಟ್ರಂಪ್ ಜೊತೆಗಿನ 35 ನಿಮಿಷಗಳ ಕರೆಯಲ್ಲಿ ‘ಪ್ರಧಾನಿ ಮೋದಿ’ ಹೇಳಿದ್ದೇನು?

18/06/2025 3:30 PM
State News
KARNATAKA

ಬೆಂಗಳೂರಲ್ಲಿ ಶಾಲೆಯ ಕಟ್ಟಡದಿಂದ ಬಿದ್ದು, ವಿದ್ಯಾರ್ಥಿನಿಗೆ ಗಂಭೀರ ಗಾಯ : ಶಾಸಕ ಅಶ್ವಥ್ ನಾರಾಯಣ ಭೇಟಿ

By kannadanewsnow0518/06/2025 3:31 PM KARNATAKA 1 Min Read

ಬೆಂಗಳೂರು : ಬೆಂಗಳೂರಲ್ಲಿ ಘೋರ ಘಟನೆ ನಡೆದಿದ್ದು, ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ಗಂಭೀರವಾಗಿ ಗಾಯಗೊಂಡಿರುವ ಘಟನೆ…

BREAKING : ಬೆಸ್ಕಾಂ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿ : ವಿದ್ಯುತ್ ಶಾಕ್ ನಿಂದ ವ್ಯಕ್ತಿ ಸಾವು!

18/06/2025 3:30 PM

ಜೂ.20ರಂದು ಆದಿಚುಂಚನಗಿರಿ ವಿವಿ ಬೆಂಗಳೂರು ಕ್ಯಾಂಪಸ್ ಉದ್ಘಾಟನೆ: ಉಪಕುಲಪತಿ ಡಾ.ಎಂ.ಎ.ಶೇಖರ್

18/06/2025 3:21 PM

SHOCKIG : ಮೊಬೈಲ್ ನಲ್ಲಿತ್ತು 13,500 ಮಹಿಳೆಯರ ಅಶ್ಲೀಲ ವಿಡಿಯೋ, ಫೋಟೋ : ಮೋಸ್ಟ್ ವಾಂಟೆಡ್ ಕಾಮುಕ ಅರೆಸ್ಟ್

18/06/2025 3:15 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.