ವಿಜಯಪುರ: ನಗರದ ಜ್ಞಾನ ಯೋಗಾಶ್ರಮದ ಪೀಠಾಧಿಪತಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಆರೋಗ್ಯದ ಕುರಿತು ವದಂತಿ ಹರಡಿದೆ.
ಇದೀಗ ಸಿದ್ದೇಶ್ವರ ಶ್ರೀ ಗಳನ್ನು ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಭೇಟಿಯಾಗಿದ್ದಾರೆ. ವಿಜಯಪುರದ ಜ್ಞಾನ ಆಶ್ರಮಕ್ಕೆ ಭೇಟಿ ನೀಡಿದ ಸಚಿವರು ಸಿದ್ದೇಶ್ವರ ಶ್ರೀ ಆರೋಗ್ಯ ವಿಚಾರಿಸಿದ್ದಾರೆ. ನಂತರ ಮಾತನಾಡಿದ ಸಚಿವ ನಾಗೇಶ್ ‘ಸ್ವಾಮೀಜಿ ಆರೋಗ್ಯದ ಬಗ್ಗೆ ಊಹಾಪೋಹ ಸಲ್ಲದು, ಅವರು ಆರೋಗ್ಯವಾಗಿದ್ದಾರೆ, ನೈತಿಕ ಶಿಕ್ಷಣದ ಬಗ್ಗೆ ಸ್ವಾಮೀಜಿ ಗಮನಕ್ಕೆ ತಂದಿದ್ದೇನೆ, ಅವರು ಕೂಡ ಇದಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದರು.
ಸಾಮಾಜಿಕ ಜಾಲ ತಾಣಗಳಲ್ಲಿ ಸ್ವಾಮೀಜಿ ಅವರ ಆರೋಗ್ಯದ ಕುರಿತು ವದಂತಿ ಹರಡಿಸಲಾಗಿದೆ. 83 ವರ್ಷದ ಶ್ರೀ ಸಿದ್ದೇಶ್ವರ ಶ್ರೀಗಳು ಸದ್ಯ ವಿಜಯಪುರ ನಗರದ ಜ್ಞಾನ ಯೋಗಾಶ್ರಮದಲ್ಲಿಯೇ ಇದ್ದಾರೆ. ನಿತ್ಯ ಎಂದಿನಂತೆ ಸ್ನಾನ ಪೂಜೆ ಮಾಡಿರುವ ಶ್ರೀಗಳು ಇಂದೂ ಸಹ ಭಕ್ತರಿಗೆ ದರ್ಶನ ಭಾಗ್ಯ ನೀಡಿದ್ದಾರೆ. ಚಳಿಗಾಲವಿರುವ ಕಾರಣ ಸಹಜವಾದ ನೆಗಡಿ ಕೆಮ್ಮು ಶ್ರೀಗಳನ್ನು ಬಾಧಿಸುತ್ತಿದೆ. ನೆಗಡಿ ಕೆಮ್ಮು ಬಿಟ್ಟು ಇತರೆ ಯಾವುದೇ ಆರೋಗ್ಯ ಸಮಸ್ಯೆ ನಡೆದಾಡುವ ದೇವರಿಗೆ ಇಲ್ಲ ಎಂದು ತಿಳಿದು ಬಂದಿದೆ.
Watch | ತಾಯಿ ಸೋನಿಯಾ ಗಾಂಧಿಯೊಂದಿಗೆ ರಾಹುಲ್ ಗಾಂಧಿ ಸಂತೋಷದ ಕ್ಷಣ : ವಿಡಿಯೋ ವೈರಲ್
ಕೋಲಾರದಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕನ ಮೇಲೆ ದಾಳಿ : ರಕ್ತ ಬರುವಂತೆ ಹಲ್ಲೆ ನಡೆಸಿದ ಸೈಕೋಪಾತ್..!