ನವದೆಹಲಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಗುಜರಾತಿಗೆ ಭೇಟಿ ನೀಡಲಿದ್ದಾರೆ. ಈ ವೇಳೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದು, ಅನೇಕ ಯೋಜನೆಗಳನ್ನು ಉದ್ಘಾಟನೆ ಮಾಡಲಿದ್ದಾರೆ.
ಅಮಿತ್ ಶಾ ಅವರು ತಮ್ಮ ಲೋಕಸಭಾ ಕ್ಷೇತ್ರ ಗಾಂಧಿನಗರಕ್ಕೆ ಭೇಟಿ ನೀಡಲಿದ್ದು, ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಇದೇ ವೇಳೆ ಗಾಂಧಿನಗರದಲ್ಲಿ ಇ-ಎಫ್ಐಆರ್ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ.
ಅಮಿತ್ ಶಾ ಅವರ ಕಾರ್ಯಕ್ರಮಗಳು
-11:30 ಕ್ಕೆ ಗಾಂಧಿನಗರದಲ್ಲಿ VISWAS ಯೋಜನೆಯಡಿಯಲ್ಲಿ ಗುಜರಾತ್ ಪೊಲೀಸರ ರಾಜ್ಯ ಮಟ್ಟದ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ‘ತ್ರಿನಾತ್ರ’ ಮತ್ತು ಇತರ ಆಧುನಿಕ ತಾಂತ್ರಿಕ ಸೇವೆಗಳ ಉದ್ಘಾಟನೆ.
-ಮಧ್ಯಾಹ್ನ 3 ಗಂಟೆಗೆ ಮಾನಸದಲ್ಲಿರುವ ಅಕ್ಷಯ ಪಾತ್ರಾ ಫೌಂಡೇಶನ್ನಲ್ಲಿ ಪ್ರಧಾನ ಮಂತ್ರಿ ಪೋಷಣ ಅಭಿಯಾನದ ಅಡಿಯಲ್ಲಿ ಅಕ್ಷಯ ಪಾತ್ರದಿಂದ ನೂತನವಾಗಿ ನಿರ್ಮಿಸಲಾದ ಮಧ್ಯಾಹ್ನದ ಊಟದ ಅಡುಗೆ ಕೋಣೆ ಉದ್ಘಾಟನೆ.
-ಮಧ್ಯಾಹ್ನ 3:25ಕ್ಕೆ ಮುಖ್ಯ ಬಜಾರ್ ಮಾನಸದಲ್ಲಿ ಮಹಾತ್ಮ ಗಾಂಧಿ ಗ್ರಂಥಾಲಯದ ನೂತನವಾಗಿ ನಿರ್ಮಿಸಿದ ಕಟ್ಟಡದ ಉದ್ಘಾಟನೆ.
-ಮಧ್ಯಾಹ್ನ 3:45ಕ್ಕೆ ಮಾನಸ ಪುರಸಭೆ ವತಿಯಿಂದ ನೂತನವಾಗಿ ನಿರ್ಮಿಸಿರುವ ಸರ್ದಾರ್ ಪಟೇಲ್ ಸಾಂಸ್ಕೃತಿಕ ಭವನದ ಉದ್ಘಾಟನೆ ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ.
-ಸಂಜೆ 4:45ಕ್ಕೆ ಮಾನ್ಸಾದಲ್ಲಿರುವ ಸಿವಿಲ್ ಆಸ್ಪತ್ರೆಗೆ ಭೇಟಿ.
-ಸಂಜೆ 5 ಗಂಟೆಗೆ ಮಾನಸದಲ್ಲಿರುವ ಚಂದ್ರಸರ್ ತಲಾಬ್ಗೆ ಭೇಟಿ.
ಕಳೆದ ತಿಂಗಳು ಅಮಿತ್ ಶಾ ಗುಜರಾತ್ಗೆ ಭೇಟಿ ನೀಡಿದ್ದರು. ಆ ಸಮಯದಲ್ಲಿ ಅವರು ಅಹಮದಾಬಾದ್ನ ಜಗನ್ನಾಥ ದೇವಾಲಯದಲ್ಲಿ ಭಗವಾನ್ ಜಗನ್ನಾಥನ ವಾರ್ಷಿಕ ರಥಯಾತ್ರೆಯಲ್ಲಿ ಮಂಗಳ ಆರತಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಹಲವು ಯೋಜನೆಗಳ ಉದ್ಘಾಟನೆ ನೇರವೇರಿಸಿದ್ದರು.