ಕಲಬುರ್ಗಿ : ಮಿನಿ ವಿಧಾನಸೌಧಗಳನ್ನು ಇನ್ನು ಮುಂದೆ ಪ್ರಜಾಸೌಧಗಳು ಎಂದು ಹೆಸರು ಬದಲಾವಣೆ ಮಾಡಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಿಳಿಸಿದರು. ಇಂದು ಕಲಬುರ್ಗಿಯಲ್ಲಿ ಮಿನಿ ವಿಧಾನಸೌಧದಲ್ಲಿ ನಡೆದ ಸಚಿವ ಸಂಪುಟದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತುಂಗಭದ್ರ ಡ್ಯಾಮ್ ನ ಕ್ರಸ್ಟ್ ಗೇಟ್ ಅಳವಡಿಸಿ ನೀರು ಉಳಿಸಿದ್ದೇವೆ. ಕೇವಲ ಐದು ದಿನಗಳಲ್ಲಿ ಕ್ರಸ್ಟ್ ಗೇಟ್ ಅಳವಡಿಸಿ ನೀರು ಸಂಗ್ರಹಣೆ ಮಾಡಲಾಗಿದೆ.ಕೊಚ್ಚಿ ಹೋಗಿದ್ದ ಕ್ರೆಸ್ಟ್ ಗೇಟ್ ದುರಸ್ತಿಗಾಗಿ 108 ಜನ ದುಡಿದಿದ್ದಾರೆ.ಗಂಗಾ ಪೂಜೆ ಜೊತೆಗೆ 108 ಜನರಿಗೂ ಸನ್ಮಾನ ಇಟ್ಟುಕೊಂಡಿದ್ದೇವೆ. ಸೆಪ್ಟೆಂಬರ್ 22ರಂದು ತುಂಗಭದ್ರಾ ಜಲಾಶಯದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.
ಬಸವಕಲ್ಯಾಣದ ಅನುಭವ ಮಂಟಪದಿಂದ ಅಂಜನಾದ್ರಿ ಬೆಟ್ಟದ ವರೆಗೆ ಎಲ್ಲಾ ಪ್ರವಾಸಿ ತಾಣಗಳ ಪುನರುಜ್ಜೀವನ, ಪುನಶ್ಚೇತನ ಮಾಡಲಾಗುತ್ತದೆ. ಎಲ್ಲ ಸ್ಮಾರಕಗಳ ರಕ್ಷಣೆಗೆ ಸಂಪುಟ ಸಭೆಯಲ್ಲಿ ಸಮ್ಮತಿ ಸೂಚಿಸಲಾಗಿದೆ ಎಂದು ಕಲಬುರ್ಗಿಯಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದರು.