ಮಂಡ್ಯ : ಬ್ರೇಕ್ ಫೇಲ್ ಆಗಿ ಹಾಲಿನ ಕ್ಯಾಂಟರ್ ವಾಹನವೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಲ್ಟಿಯಾಗಿರುವ ಘಟನೆ ಬೆಂಗಳೂರು – ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮದ್ದೂರು ಬೈಪಾಸ್ ನಲ್ಲಿ ಶುಕ್ರವಾರ ತಡರಾತ್ರಿ ಜರುಗಿದೆ.
BIGG NEWS: ಬೆಂಗಳೂರಿನಲ್ಲಿ ಕೊರೊನಾ ಫುಲ್ ಕಟ್ಟೆಚ್ಚರ…!; ಕೋವಿಡ್ ಜಾಗೃತಿಗೆ ಮುಂದಾದ ಮಾರ್ಷಲ್ ಗಳು
ಮದ್ದೂರು ತಾಲ್ಲೂಕಿನ ಗೆಜ್ಜಲಗೆರೆಯ ಮನ್ ಮುಲ್ (ಮಂಡ್ಯ ಜಿಲ್ಲಾ ಹಾಲು ಒಕ್ಕೂಟ) ನಲ್ಲಿ ಹಾಲು, ಮೊಸರು, ಮಜ್ಜಿಗೆ ಹಾಗೂ ಇನ್ನಿತರ ನಂದಿನಿ ಉತ್ಪನ್ನಗಳನ್ನು KA-09-C-469 ಕ್ಯಾಂಟರ್ ವಾಹನದಲ್ಲಿ ತುಂಬಿಕೊಂಡು ಬೆಂಗಳೂರಿಗೆ ಹೊರಟ ವಾಹನ ಶುಕ್ರವಾರ ತಡರಾತ್ರಿ ಸುಮಾರು 2.30 ರ ವೇಳೆಗೆ ಮದ್ದೂರು ಬೈಪಾಸ್ ನ ಕೆ.ಕೋಡಿಹಳ್ಳಿ ಬಳಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
BIGG NEWS: ಬೆಂಗಳೂರಿನಲ್ಲಿ ಕೊರೊನಾ ಫುಲ್ ಕಟ್ಟೆಚ್ಚರ…!; ಕೋವಿಡ್ ಜಾಗೃತಿಗೆ ಮುಂದಾದ ಮಾರ್ಷಲ್ ಗಳು
ಡಿಕ್ಕಿ ಹೊಡೆದ ರಭಸಕ್ಕೆ ವಾಹನದಲ್ಲಿದ್ದ ಸುಮಾರು 3 ಸಾವಿರಕ್ಕೂ ಹೆಚ್ಚು ಹಾಲು, ಮೊಸರು, ಮಜ್ಜಿಗೆ ರಸ್ತೆಗೆ ಚೆಲ್ಲಿ ನಷ್ಟ ಉಂಟಾಗಿದೆ. ಇನ್ನು ಚಾಲಕ ಮತ್ತು ಕ್ಲೀನರ್ ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ವರದಿ : ಗಿರೀಶ್ ರಾಜ್ ಮಂಡ್ಯ