ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿ ಊಟದಲ್ಲಿ ಅಕ್ಕಿ, ಬೇಳೆ ಮತ್ತು ತರಕಾರಿಗಳೊಂದಿಗೆ ಚಿಕನ್, ಮೊಟ್ಟೆ ಮತ್ತು ಸೀಸನಲ್ ಹಣ್ಣುಗಳನ್ನು ಏಪ್ರಿಲ್ವರೆಗೆ ಮಧ್ಯಾಹ್ನದ ಊಟದಲ್ಲಿ ನೀಡಲಾಗುವುದು ಎಂದು ರಾಜ್ಯದ ಶಾಲಾ ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ.
“ಹೆಚ್ಚುವರಿ ಪೌಷ್ಠಿಕಾಂಶ ಮೊಟ್ಟೆ, ಕೋಳಿ ಮತ್ತು ಹಣ್ಣುಗಳನ್ನು ಒಳಗೊಂಡಿರುತ್ತದೆ. ಇವುಗಳ ಮೂಲಕ ಅಪೌಷ್ಠಿಕತೆಯನ್ನು ಪರಿಹರಿಸಬಹುದು. ಹೀಗಾಗಿ, ವಾರಕ್ಕೊಮ್ಮೆ ಜನವರಿಯಿಂದ ಏಪ್ರಿಲ್ ವರೆಗೆ ನಾಲ್ಕು ತಿಂಗಳವರೆಗೆ ನೀಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
ರಾಜ್ಯಾದ್ಯಂತ ಶಾಲೆಗಳಲ್ಲಿ ದಾಖಲಾದ 11.6 ಮಿಲಿಯನ್ ವಿದ್ಯಾರ್ಥಿಗಳು ಮಧ್ಯಾಹ್ನದ ಊಟವನ್ನು ಪಡೆಯುತ್ತಾರೆ. ಹೆಚ್ಚುವರಿ ಆಹಾರ ನೀಡಲು ₹371 ಕೋಟಿ ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಕೇಂದ್ರ ಮತ್ತು ರಾಜ್ಯಗಳು ಊಟದ ವೆಚ್ಚವನ್ನು 60:40 ಆಧಾರದ ಮೇಲೆ ಹಂಚಿಕೊಳ್ಳುತ್ತವೆ. ಕಳೆದ ವರ್ಷ ಅಕ್ಟೋಬರ್ನಲ್ಲಿ ಕೇಂದ್ರ ಸರ್ಕಾರ ಮಧ್ಯಾಹ್ನದ ಊಟದ ಹಂಚಿಕೆಯನ್ನು ಹೆಚ್ಚಿಸಿತ್ತು.
BREAKING NEWS : ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: ಪಾಕ್ ಭಯೋತ್ಪಾದಕ ಸಂಘಟನೆ ʻTRFʼ ನಿಷೇಧ
BIGG NEWS : ಇಂದಿನಿಂದ ‘ಕನ್ನಡ ಸಾಹಿತ್ಯ ಸಮ್ಮೇಳನ’ : ಸಿಎಂ ಬೊಮ್ಮಾಯಿ ಸೇರಿ ಅತಿಥಿಗಳ ಭಾಷಣಕ್ಕೆ ಸಮಯ ನಿಗದಿ
BREAKING NEWS : ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ: ಪಾಕ್ ಭಯೋತ್ಪಾದಕ ಸಂಘಟನೆ ʻTRFʼ ನಿಷೇಧ