ಬೆಂಗಳೂರು: ನೂತನವಾಗಿ ಆರಂಭವಾದ ನಮ್ಮ ಮೆಟ್ರೋದ ಹಳದಿ ಮಾರ್ಗದ ಆರ್.ವಿ.ರಸ್ತೆ ಹಾಗೂ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣಗಳಿಂದ ನಾಳೆ ಬೆಳಿಗ್ಗೆ 5 ಗಂಟೆಯಿಂದಲೇ ಸೇವೆ ಆರಂಭವಾಗಲಿದೆ.
ಸ್ವಾತಂತ್ರ್ಯೋತ್ಸವ ದಿನಾಚರಣೆ ಬಳಿಕ ದೀರ್ಘ ವಾರಾಂತ್ಯ ಮುಗಿಸಿ ಬೆಂಗಳೂರಿನತ್ತ ಮರಳುವ ಪ್ರಯಾಣಿಕರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರುವ ನಿರೀಕ್ಷೆಯಿದ್ದು, ಸೋಮವಾರ ಬೆಳಿಗ್ಗೆ 5ರಿಂದಲೇ ಹಳದಿ ಮಾರ್ಗದಲ್ಲಿನ ಮೆಟ್ರೋ ಸೇವೆ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.
ಆರ್.ವಿ.ರಸ್ತೆ ಹಾಗೂ ಡೆಲ್ಟಾ ಎಲೆಕ್ಟ್ರಾನಿಕ್ಸ್ ಬೊಮ್ಮಸಂದ್ರ ನಿಲ್ದಾಣಗಳಿಂದ ಮೊದಲ ರೈಲುಗಳು 5 ಗಂಟೆಗೆ ಆರಂಭವಾಗಲಿವೆ. ಈ ವ್ಯವಸ್ಥೆ ಕೇವಲ ಆಗಸ್ಟ್ 18ರಂದು ಮಾತ್ರವೇ ಅನ್ವಯವಾಗಲಿದ್ದು, ಆಗಸ್ಟ್ 19ರಿಂದ ಸಾಮಾನ್ಯ ಸೇವೆಗಳು (ಬೆಳಿಗ್ಗೆ 6:30ರಿಂದ) ಪ್ರಾರಂಭವಾಗಲಿವೆ.