ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಮತ್ತೆ ಸೌಂಡ್ ಮಾಡುತ್ತಿದೆ ಮೀಟೂ ಆರೋಪ. ಇದೀಗ ಮತ್ತೊಂದು ನಟಿಯಿಂದ ಕಾಸ್ಟಿಂಗ್ ಕೌಚ್ ಬಗ್ಗೆ ಬಾಯಿಬಿಟ್ಟಿದ್ದಾರೆ.
ಹೌದು ಸ್ಯಾಂಡಲ್ ವುಡ್ ನಟಿ ಆಶಿತಾ ಮೀ..ಟೂ ಆರೋಪ ಕೇಳಿಬಂದಿದೆ. 2000 ಇಸವಿಯಲ್ಲಿ ಟಾಪ್ ನಟಿಯಾಗಿದ್ದ ಆಶಿತಾ ಕಾಸ್ಟಿಂಗ್ ಕೌಚ್ ಬಗ್ಗೆ ಬಾಯಿಬಿಟ್ಟಿದ್ದಾರೆ.
BIGG NEWS: ಮತಾಂತರ ನಿಷೇಧ ಬಿಲ್ ಪಾಸ್ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?
ಒಂದು ಖಾಸಗಿ ಚಾಲನ್ ನಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು ರೋಡ್ ರೋಮಿಯೋ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ, ಇದೀಗ ಸಿನಿಮಾ ರಂಗದಿಂದಲೇ ದೂರವಾಗಿರುವ ಆಶಿತಾ ತಮಗಾದ ಕಹಿ ಅನುಭವಗಳನ್ನು ನಿರ್ದೇಶಕ ರಘುರಾಮ್ ನಡೆಸಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.
ಬಾ ಬಾರೋ ರಸಿಕ, ಆಕಾಶ್ , ತವರಿನ ಸಿರಿ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿರುವ ಆಶಿತಾ, ತಮಗಾದ ಕಹಿ ಅನುಭವಗಳ ಕಾರಣದಿಂದಾಗಿಯೇ ಚಿತ್ರರಂಗದಿಂದ ದೂರವಾಗಿದ್ದಾರಂತೆ.
ಈ ಬಗ್ಗೆ ಮಾತನಾಡಿದ ಅವರು, ಸಿನಿಮಾ ರಂಗದಿಂದ ದೂರವಾಗಿದ್ದಕ್ಕೆ ನನಗೇನೂ ಬೇಸರವಿಲ್ಲ. ಆದರೆ, ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ಮೇಲೂ ನನಗೆ ಕೆಟ್ಟ ಅನುಭವಗಳು ಆದವು. ಆದರೆ, ನಾನು ಅದಕ್ಕೆ ಆಸ್ಪದ ಕೊಡಲಿಲ್ಲ. ನನಗೆ ಅಂತಹ ಅವಕಾಶವೂ ಬೇಕಾಗಿರಲಿಲ್ಲ. ಆ ನಿರ್ದೇಶಕರ ಹೆಸರು ಹೇಳುವುದು ಬೇಡ, ಅವರು ತಮ್ಮೊಂದಿಗೆ ನನ್ನನ್ನು ಸಲುಗೆಯಿಂದ ಇರಲು ಹೇಳಿದರು. ನನ್ನ ಕರಿಯರ್ ಏಳಿಗೆ ಆಗ್ತಿದ್ದಂತೆಯೇ ಬೇರೆ ಥರ ಡಿಮ್ಯಾಂಡ್ ಮಾಡಲಾಗಿದೆ ಎಂದು ಆರೋಪ ಕೇಳಿಬಂದಿದೆ.
BIGG NEWS: ಮತಾಂತರ ನಿಷೇಧ ಬಿಲ್ ಪಾಸ್ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದೇನು?
ಹೀಗಾಗಿ ನಾನು ಸಿನಿಮಾ ಚಿತ್ರರಂಗದಿಂದ ದೂರ ಉಳಿಯವುದಕ್ಕೆ ಕಾರಣವಾಯಿತು ಎಂದು ಹೇಳಿದ್ದಾರೆ.
ಸಿನಿಮಾ ಕರ್ಮಷಿಯಲ್ ಆಗೋಕೆ ಶುರುವಾಯ್ತು. ರಾಜಕೀಯ, ರಿಯಲ್ ಎಸ್ಟೇಟ್ ನಿಂದ ಸಿನಿಮಾ ನಿರ್ಮಾಣ ಶುರುವಾಯ್ತು. ಆ ಬಳಿಕ ಚಿತ್ರರಂಗದಲ್ಲಿ ಅನಾರೋಗ್ಯ ಸ್ಥಿತಿ ನಿರ್ಮಾಣವಾಯ್ತು ಎಂದು ಆಶಿತಾ ಗಂಭೀರ ಆರೋಪ ಮಾಡಿದ್ದಾರೆ.