ಮಂಗಳೂರು: ನಗರದಲ್ಲಿನ ಮೆಸ್ಕಾಂ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಂತ ಮಾವನ ಮೇಲೆ ವಾಕಿಂಗ್ ಸ್ಟಿಕ್ ನಿಂದ ಹಲ್ಲೆ ನಡೆಸಿದ್ದರು. ಮಾವನ ಮೇಲೆ ರಕ್ಕಸ ಕೃತ್ಯವನ್ನು ಎಸಗಿದ್ದು ಮನೆಯಲ್ಲಿನ ಸಿಸಿಟಿವಿ ದೃಶ್ಯಾವಳಿಯಿಂದ ಬಹಿರಂಗವಾಗಿತ್ತು. ಈ ವೀಡಿಯೋ ವೈರಲ್ ಕೂಡ ಆಗಿತ್ತು. ಈ ಬೆನ್ನಲ್ಲೇ ಮಾವನ ಮೇಲೆ ಹಲ್ಲೆ ನಡೆಸಿದಂತ ಸೊಸೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ನಗರದ ಕುಲಶೇಖರ ಹಾಲಿ ಡೇರಿಯ ಸಮೀಪದಲ್ಲಿದ್ದಂತ ಮನೆಯೊಂದರಲ್ಲಿ 87 ವರ್ಷದ ವೃದ್ಧ ಪದ್ಮನಾಭ ಮೇಲೆ ಸೊಸೆ ಉಮಾಶಂಕರಿ ವಾಕಿಂಗ್ ಸ್ಟಿಕ್ ನಿಂದ ಹಲ್ಲೆ ನಡೆಸಿದ್ದರು. ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ದೂರನ್ನು ಆಧರಿಸಿ ಮೆಸ್ಕಾಂ ಸಿಬ್ಬಂದಿ ಉಮಾಶಂಕರಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಂದಹಾಗೆ ಹಲ್ಲೆಗೊಳಗಾದ ವೃದ್ಧ ಪದ್ಮನಾಭ ಅವರ ಪುತ್ರ ಪ್ರೀತಮ್ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ಹೀಗಾಗಿ ಕುಲಶೇಖರ ಹಾಲಿನ ಡೇರಿ ಬಳಿಯ ಮನೆಯಲ್ಲಿ ಪದ್ಮನಾಭ ಹಾಗೂ ಅವರ ಸೊಸೆ ಅಂದರೆ ಮಗನ ಪತ್ನಿ ಉಮಾಶಂಕರಿ ಮನೆಯಲ್ಲಿ ವಾಸವಾಗಿದ್ದರು.
ಮಾವ ಮನೆಯಲ್ಲಿ ಇರುವಂತ ವಿಚಾರಕ್ಕಾಗಿಯೇ ದಿನನಿತ್ಯ ಸೊಸೆ ಉಮಾಶಂಕರಿ ಕಿರಿಕ್ ತೆಗೆಯುತ್ತಿದ್ದರಂತೆ. ವಯೋವೃದ್ಧರಾಗಿದ್ದಂತ ಅವರು ಧರಿಸಿದ್ದಂತ ಅಂಗಿಯನ್ನು ಸೋಫಾ ಮೇಲೆ ಇಟ್ಟಿದ್ದಕ್ಕೆ ಕಳೆದ ಶನಿವಾರದಂದು ಜಗಳ ತೆಗೆದಂತ ಉಮಾಶಂಕರಿ, ವಾಕಿಂಗ್ ಸ್ಟಿಕ್ ನಿಂದ ಅವರ ಮೇಲೆ ಹಲ್ಲೆ ನಡೆಸಿದ್ದರು. ಈ ಬಳಿಕ ಪದ್ಮನಾಭ ಅವರು ತಮ್ಮನ ಮನೆಗೆ ಹೋಗಿದ್ದರು. ಅಲ್ಲಿಂದ ಮಗಳಿಗೆ ಪೋನ್ ಮಾಡಿ ನಡೆದ ವಿಷಯ ಹೇಳಿದ್ದರು. ಅವರು ವಿದೇಶದಲ್ಲಿರುವಂತ ಅಣ್ಣ ಪ್ರೀತಮ್ ಗೆ ತಿಳಿಸಿದ್ದರು. ಆಗ ಮನೆಯಲ್ಲಿನ ವೀಡಿಯೋ ಸಹಿತ ಪತ್ನಿಯ ಮೇಲೆ ದೂರು ನೀಡುವಂತೆ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ವೃದ್ಧರ ಮಗಳು ಅತ್ತೆ ಉಮಾಶಂಕರಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು.
ದೇಶಾದ್ಯಂತ ‘CAA’ ಜಾರಿ ಸಂಬಂಧ ‘ಕೇಂದ್ರ ಸರ್ಕಾರ’ದಿಂದ ಅಧಿಸೂಚನೆ ಪ್ರಕಟ | CAA Rules
‘ಅಂಗನವಾಡಿ ಕಾರ್ಯಕರ್ತೆ’ಯರಿಗೆ ಗುಡ್ ನ್ಯೂಸ್: ಶೀಘ್ರವೇ ‘2000 ವೇತನ’ ಹೆಚ್ಚಳ- ಸಿಎಂ ಭರವಸೆ