ಪುಣೆ: ದೇಶದಾದ್ಯಂತ ಹೆಚ್ಚಿನ ನಗರಗಳಲ್ಲಿನ ಸಂಚಾರ ದಟ್ಟಣೆ ಸಾಮಾನ್ಯ. ಟ್ರಾಫಿಕ್ ಜಾಮ್ನಿಂದ ಜನರು ಬೇಸತ್ತಿದ್ದಾರೆ. ಈ ಎಫೆಕ್ಟ್ Mercedes-Benz ಇಂಡಿಯಾ ಸಿಇಒ ಮಾರ್ಟಿನ್ ಶ್ವೆಂಕ್ ಅವರಿಗೂ ಅನುಭವವಾಗಿದೆ.
ಹೌದು, ಮಾರ್ಟಿನ್ ಶ್ವೆಂಕ್ ಅವರು ಪುಣೆಯ ಟ್ರಾಫಿಕ್ನಲ್ಲಿ ಸಿಲುಕಿಕೊಂಡಿದ್ದರು. ಈ ವೇಳೆ ತಮ್ಮ ಮರ್ಸಿಡಿಸ್ ಎಸ್-ಕ್ಲಾಸ್ ಅನ್ನು ಬಿಟ್ಟು ತಾವು ಹೋಗಬೇಕಾದ ಸ್ಥಳಕ್ಕೆ ಹೋಗಲು ಆಟೋ ರಿಕ್ಷಾ ಹುಡುಕಿಕೊಂಡು ಕಾಲ್ನಡಿಗೆಯಲ್ಲೇ ಒಂದು ಕಿಮೀ ದೂರ ನಡೆದುಕೊಂಡೇ ಹೋಗಿದ್ದಾರೆ.
ಆಟೋ ಸವಾರಿಯ ಫೋಟೋ ತೆಗೆದು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿರುವ ಅವರು, ಟ್ರಾಫಿಕ್ ಜಾಮ್ನಿಂದ ಹೊರಬರಲು ಆಟೋ ಆಟೋ ರಿಕ್ಷಾ ಏರಬೇಕಾಯಿತು ಎಂದು ಬರೆದುಕೊಂಡಿದ್ದಾರೆ.
View this post on Instagram
“ನಿಮ್ಮ ಎಸ್-ಕ್ಲಾಸ್ ಅದ್ಭುತವಾದ ಪುಣೆ ರಸ್ತೆಗಳಲ್ಲಿ ಟ್ರಾಫಿಕ್ನಲ್ಲಿ ಸಿಲುಕಿಕೊಂಡರೆ ನೀವು ಏನು ಮಾಡುತ್ತೀರಿ? ಬಹುಶಃ ಕಾರಿನಿಂದ ಇಳಿದು, ಕೆಲವು ಕಿಮೀಗಳವರೆಗೆ ನಡೆಯಲು ಪ್ರಾರಂಭಿಸಿ ನಂತರ ರಿಕ್ಷಾವನ್ನು ಹಿಡಿಯಬಹುದೇ?” ಎಂದು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
BIGG NEWS : ಸಾವಿನಲ್ಲೂ ಸಾರ್ಥಕತೆ ಮೆರೆದ ಪೋಷಕರು : ಮಗನ ಅಂಗಾಂಗ ದಾನದಿಂದ 8 ಮಂದಿಯ ಬಾಳಿಗೆ ಬೆಳಕು!