ಜಮ್ಮು: ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯನ್ನು (ಎಲ್ಒಸಿ) ಅಜಾಗರೂಕತೆಯಿಂದ ದಾಟಿದ 30 ವರ್ಷದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಪಾಕ್ ವಾಪಸ್ ಸ್ವದೇಶಕ್ಕೆ ಕಳುಹಿಸಿದೆ ಎಂದು ಅಧಿಕಾರಿಗಳು ಇಂದು ತಿಳಿಸಿದ್ದಾರೆ.
ಪೂಂಚ್ನ ದೆಗ್ವಾರ್-ಟೆರ್ವಾನ್ ಗ್ರಾಮದ ನಿವಾಸಿ ಮೊಹಮ್ಮದ್ ರಶೀದ್ ಅವರು ಆಗಸ್ಟ್ 30 ರಂದು ಅವರ ಮನೆಯಿಂದ ಕಾಣೆಯಾಗಿದ್ದರು. ಈ ವೇಳೆ ರಶೀದ್ ಗಡಿ ನಿಯಂತ್ರಣ ರೇಖೆ ದಾಟಿ ಪಾಕಿಸ್ತಾನ ಗಡಿಯೊಳಗೆ ಪ್ರವೇಶಿಸಿದ್ದರು.
ಶನಿವಾರ ನಾಗರಿಕ ಅಧಿಕಾರಿಗಳು ಮತ್ತು ಪೊಲೀಸರ ಸಮ್ಮುಖದಲ್ಲಿ ಪಾಕಿಸ್ತಾನಿ ಸೇನೆಯು ರಶೀದ್ ಅವರನ್ನು ನಿಯಂತ್ರಣ ರೇಖೆಯ ಚಕನ್ ದಾ ಬಾಗ್ ಕ್ರಾಸಿಂಗ್ ಪಾಯಿಂಟ್ನಲ್ಲಿ ತಮ್ಮ ಭಾರತೀಯ ಸಹವರ್ತಿಗಳಿಗೆ ಹಸ್ತಾಂತರಿಸಿದೆ. ಇದೀಗ ರಶೀದ್ ತತಮ್ಮ ಕುಟುಂಬದೊಂದಿಗೆ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
BIG NEWS: ಪಾಕಿಸ್ತಾನದಲ್ಲಿ ಭೀಕರ ಪ್ರವಾಹಕ್ಕೆ 1,300 ಮಂದಿ ಬಲಿ: ವರದಿ
Good News : `BPL’ ಕುಟುಂಬಗಳಿಗೆ ಗುಡ್ ನ್ಯೂಸ್ : ಹಳೇ ರೇಷನ್ ಕಾರ್ಡ್ ಮುಂದುವರಿಕೆಗೆ ಅನುಮತಿ