ಕೆಎನ್ಎನ್ ಡಿಜಿಟಲ್ ಡೆಸ್ಕ್ : ಆಧುನಿಕ ಜೀವನಕ್ಜೆ ಒಗ್ಗಿಕೊಂಡ ಜನರು ಮೊಬೈಲ್, ಕಂಪ್ಯೂಟರ್ ದಾಸರಾಗಿರುತ್ತಾರೆ. ಅದರಲ್ಲೂ ಸಂಬಂಧಗಳನ್ನು ಮರೆತರೂ ಪರವಾಗಿಲ್ಲ ಅವುಗಳನ್ನು ಬಿಟ್ಟು ಇರಲು ಇರಲಾರದಂತಹ ಪರಿಸ್ಥಿತಿಗೆ ಬಂದು ತಲುಪಿದ್ದೇವೆ. ಸರಿಯಾಗಿ ಊಟ, ನಿದ್ರೆ ಮಾಡಲಾಗುತ್ತಿಲ್ಲ ವ್ಯಾಯಾಮ ಅಂತೂ ಮೊದಲೇ ಇಲ್ಲ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದುಬೈಗೆ ತೆರಳಲು ಕೋರ್ಟ್ ಅನುಮತಿ
ಇದು ಕೊನೆಗೆ ನಮ್ಮ ಆರೋಗ್ಯಕ್ಕೆ ತೊಂದರೆ ಎಂದು ಗೊತ್ತಿದ್ದರೂ ಕೂಡ ನಮ್ಮ ಕೈಯಲ್ಲಿ ಏನು ಮಾಡಲಾಗುತ್ತಿಲ್ಲ. ಇಲ್ಲಿ ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಬೇಕು. ಅದೇನೆಂದರೆ ಕಡಿಮೆ ನಿದ್ರೆ ಮಾಡುವ ಜನರಿಗೆ ಆರೋಗ್ಯದ ತೊಂದರೆಗಳು ಅದರಲ್ಲೂ ವಿಶೇಷವಾಗಿ ಹೃದಯಕ್ಕೆ ಸಂಬಂಧಪಟ್ಟ ತೊಂದರೆಗಳು ಹೆಚ್ಚಾಗಿ ಬರುತ್ತವೆ. ಮಹಿಳೆಯರಿಗಿಂತ ಪುರುಷರಿಗೆ ಈ ತೊಂದರೆಗಳು ಜಾಸ್ತಿ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದುಬೈಗೆ ತೆರಳಲು ಕೋರ್ಟ್ ಅನುಮತಿ
ಕೆಲವೊಂದು ಅಧ್ಯಯನಗಳು ಹೇಳುವಂತೆ ವಿಶೇಷವಾಗಿ ಪುರುಷರು ಯಾರು ರಾತ್ರಿ ಹೊತ್ತು 5 ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುವ ಅಭ್ಯಾಸ ಮಾಡಿಕೊಂಡಿರುತ್ತಾರೆ ಅಂತಹವರಿಗೆ ಹೃದಯ ರಕ್ತನಾಳದ ಕಾಯಿಲೆಗಳು ಮುಂಬರುವ ಹತ್ತಿಪತ್ತು ವರ್ಷಗಳಲ್ಲಿ ಕಟ್ಟಿಟ್ಟ ಬುತ್ತಿ.
ಆದರೆ ಏಳರಿಂದ ಎಂಟು ಗಂಟೆಗಳ ಕಾಲ ನಿದ್ರೆ ಮಾಡುವ ಪುರುಷರಿಗೆ ಈ ರೀತಿಯ ಸಮಸ್ಯೆಗಳು ಕಡಿಮೆ ಎಂದು ಅಧ್ಯಯನ ಹೇಳಿದೆ
ಅಧ್ಯಯನ ಮಾಹಿತಿ ಬಹಿರಂಗ
-
- ಇದಕ್ಕಾಗಿ 50 ವರ್ಷ ದಾಟಿದ ಸುಮಾರು 800 ಪುರುಷರನ್ನು ಯುರೋಪಿಯನ್ ಸೊಸೈಟಿ ಆಫ್ ಕಾರ್ಡಿಯಲಜಿ ಕಾಂಗ್ರೆಸ್ ಎಂಬ ಸಂಸ್ಥೆ ತನ್ನ ಅಧ್ಯಯನಕ್ಕಾಗಿ ಬಳಸಿಕೊಂಡಿತು.
- ಅವರುಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಕೆಲವರಿಗೆ 8:00 ಗಳಿಗಿಂತ ಹೆಚ್ಚು ನಿದ್ರೆ ಮಾಡು ವಂತೆ ಹೇಳಿ ಇನ್ನು ಕೆಲವರು ಯಾರು ಎಂಟು ಗಂಟೆಗಳಿಗಿಂತ ಕಡಿಮೆ ನಿದ್ರೆ ಮಾಡುತ್ತಾರೆ ಅವರನ್ನು ಒಂದು ಗುಂಪು ಮಾಡುವ ಹಾಗೆ ಸೂಚನೆ ನೀಡಿ ಅವರ ಆಹಾರ ಪದ್ಧತಿಯ ಮೇಲೆ ಗಮನ ಹರಿಸಿತು.
https://kannadanewsnow.com/kannada/court-allows-kpcc-president-dk-shivakumar-to-travel-to-dubai/
- ಹೃದಯಘಾತ, ಪಾರ್ಶ್ವವಾಯು ಮತ್ತು ಹೃದಯದ ಕಾಯಿಲೆ
ಬರೋಬ್ಬರಿ 21 ವರ್ಷಗಳ ಕಾಲ ತನಕ ನಡೆದ ಈ ಸಂಶೋಧನೆಯಲ್ಲಿ ಅವರಿಗೆ ಎದುರಾಗುವ ಹೃದಯಘಾತ, ಪಾರ್ಶ್ವವಾಯು ಮತ್ತು ಹೃದಯದ ಕಾಯಿಲೆಗಳಿಂದ ಸಾವನ್ನಪ್ಪುವ ಸಂಖ್ಯೆಗಳನ್ನು ಲೆಕ್ಕಾಚಾರ ಮಾಡಲಾಯಿತು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ದುಬೈಗೆ ತೆರಳಲು ಕೋರ್ಟ್ ಅನುಮತಿ
ನಿದ್ರೆ ಮಾಡಬೇಕು
ಈ ಅಧ್ಯಯನದಲ್ಲಿ ಯಾರು 5 ಗಂಟೆಗಳಿಗಿಂತ ಕಡಿಮೆ ನಿದ್ರೆ ರಾತ್ರಿ ಹೊತ್ತು ಮಾಡುತ್ತಿದ್ದರು ಅವರಿಗೆ ರಕ್ತದ ಒತ್ತಡ, ಮಧುಮೇಹ ಮತ್ತು ಬೊಜ್ಜು ವಿಪರೀತ ಕಂಡುಬಂದಿದ್ದು, ಅವರಲ್ಲಿ ಕೆಲವರು ಜಡ ಜೀವನ ಶೈಲಿ ಮತ್ತು ಧೂಮಪಾನ ಮತ್ತು ಮಧ್ಯಪಾನ ಅಭ್ಯಾಸಗಳನ್ನು ಹೊಂದಿದ್ದರು.